• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೋಕಸಭಾ ಚುನಾವಣೆ ಘೋಷಣೆ:ಕಾಂಗ್ರೆಸ್ ನಾಯಕರ ಅಭಿಪ್ರಾಯವೇನು?

|

ಉಡುಪಿ, ಮಾರ್ಚ್ 11:ದೇಶದಲ್ಲಿ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿದೆ.ಎಲ್ಲೆಡೆ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪರಿರ್ತನಾ ಯಾತ್ರೆ ಸಮಾವೇಶಕ್ಕೆ ಅಗಮಿಸಿದ್ದ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆ ಇಂತಿದೆ.

ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ಬೇಕು.ಇದು ಒಳ್ಳೆಯ ನಿರ್ಧಾರ. ಆಯೋಗ ಎಲ್ಲಾ ಗಮನದಲ್ಲಿಟ್ಟುಕೊಂಡೆ ನಿರ್ಧಾರ ಮಾಡಿರುತ್ತೆ. ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಿಗೂ ನಿರ್ಬಂಧ ಒಳ್ಳೆ ವಿಚಾರ ಎಂದು ರಾಜ್ಯಸಭಾ ಸದಸ್ಯ ಬಿಕೆ ಹರಿಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ದುರಂಹಕಾರಿ ಕಾಂಗ್ರೆಸ್ಸಿಗರು ಠೇವಣಿ ಕಳೆದುಕೊಳ್ಳಲಿದ್ದಾರೆ: ಕೇಜ್ರಿವಾಲ್

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಸೇನೆಯ ವಿಚಾರವನ್ನು ಪ್ರಚಾರಕ್ಕೆ ಬಳಸದಂತೆ ನಿರ್ಬಂಧ ಹೇರಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಲೋಕಸಭಾ ಚುನಾವಣೆಯ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ಕರ್ನಾಟಕದಲ್ಲಿ ಈ ಬಾರಿ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಈ ಹಿಂದೆ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿತ್ತು. ಯಾಕೆ ಎರಡು ಹಂತದಲ್ಲಿ ನಡೆಯುತ್ತಿದೆ ಅಂತ ಗೊತ್ತಿಲ್ಲ. ಒಂದೇ ಹಂತದಲ್ಲಿ ಚುನಾವಣೆ ನಡೆದ್ರೆ ಒಳ್ಳೆದಿತ್ತು. ನಾಳೆ ನಾವು ದೆಹಲಿಗೆ ಹೋಗ್ತೇವೆ. ಸಭೆಯಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯ ಚರ್ಚೆ ಮಾಡ್ತೇವೆ ಎಂದು ತಿಳಿಸಿದರು.

'ಬಿಜೆಪಿ ಪರ ಮಾತಾಡಿದ್ರೆ ದೇಶಭಕ್ತರು, ವಿರುದ್ಧವಾದರೆ ದೇಶದ್ರೋಹಿಗಳು'

ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಏಪ್ರಿಲ್ ನಲ್ಲಿ ಎರಡು ಹಂತದಲ್ಲಿ ಇರುತ್ತೆ. ಇನ್ನು ಉಳಿದದ್ದು 35 ದಿನ ಮಾತ್ರ. ಯಾರೂ ವಿಶ್ರಾಂತಿ ಪಡೆಯೋ ಹಾಗೆ ಇಲ್ಲ. ನಮ್ಮ ಕಾರ್ಯಕರ್ತರು ವಿಶ್ರಮಿಸದೆ ಮನೆ ಮನೆಗೆ ಹೋಗಬೇಕು ಎಂದು ಕರೆ ನೀಡಿದರು. ಕಾಂಗ್ರೆಸ್ಗೆ ಮತದಾದರು ಆಶಿರ್ವಾದ ಮಾಡೇ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುಮಲತಾ ಗೆಲ್ಲುವ ಆಸೆಯನ್ನು ಹೊಸಕಿ ಹಾಕಿದರೇ ಡಿಕೆ ಶಿವಕುಮಾರ್?

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಚುನಾವಣೆ ಬಗ್ಗೆ ಪ್ರತಿಕ್ರಯಿಸಿ, ಎಷ್ಟೇ ಹಂತಗಳಲ್ಲಿ ಚುನಾವಣೆ ಆಗಲಿ ಕಾಂಗ್ರೆಸ್ ಗೆಲ್ಲುತ್ತೆ. ಬಿಜೆಪಿ ವೈಫಲ್ಯ ಕಾಣುವಾಗ ಎಲ್ಲಾ ಸ್ಥಾನಗಳಲ್ಲೂ ಗೆಲ್ಲುವ ವಿಶ್ವಾಸ ಮೂಡಿದೆ. 5 ವರ್ಷಗಳಲ್ಲಿ ಕೇಂದ್ರ ಸರ್ಕಾರ ಮಾಡಿದ ತಪ್ಪುಗಳೇ ನಮಗೆ ಶ್ರೀರಕ್ಷೆ. ಸಮ್ಮಿಶ್ರ ಸರ್ಕಾರದ ಸಾಧನೆಗಳ ಆಧಾರದಲ್ಲಿ ಎಲ್ಲಾ ಸ್ಥಾನದಲ್ಲೂ ಗೆಲ್ಲುತ್ತೇವೆ ಎಂದರು.

English summary
Congress leaders reacted on Lokasabha election announcement in Udupi. BK Hariprasad, Dinesh Gundu Rao, Siddaramaiah, Jayamala told their opinions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X