2 ದಿನಗಳ ಕಾಲ ಪ್ರಕೃತಿ ಚಿಕಿತ್ಸೆಗೆ ಮೊರೆ ಹೋದ ಸಿಎಂ ಕುಮಾರಸ್ವಾಮಿ

Recommended Video

      ಚಿಕಿತ್ಸೆಗೆ ಮೊರೆ ಹೋದ ಕುಮಾರಸ್ವಾಮಿ: Lok Sabha Elections 2019 | Oneindia Kannada

      ಉಡುಪಿ, ಏಪ್ರಿಲ್ 22: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಶಿವಮೊಗ್ಗದ ಚುನಾವಣಾ ಪ್ರಚಾರ ಮುಗಿಸಿಕೊಂಡು ಉಡುಪಿ ಜಿಲ್ಲೆಯ ಕಾಪುವಿನ ಮೂಳೂರಿನಲ್ಲಿರುವ ಸಾಯಿರಾಧಾ ಹೆರಿಟೇಜ್ ರೆಸಾರ್ಟ್ ಗೆ ಬಂದಿರುವ ಸಿಎಂ, ಮಂಗಳವಾರ ಸಂಜೆವರೆಗೆ ರೆಸಾರ್ಟ್ ನಲ್ಲಿ ತಂಗುವ ಸಾಧ್ಯತೆಯಿದೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಸಿಎಂ‌ ಜೊತೆಗೆ ಸಚಿವ ಪುಟ್ಟರಾಜು, ಶಾಸಕ ಎಸ್. ಎಲ್ ಬೋಜೇಗೌಡ ವಾಸ್ತವ್ಯ ಹೂಡಿದ್ದಾರೆ. ಇಂದು ಮತ್ತು ನಾಳೆ ದಿನಪೂರ್ತಿ ಸಿಎಂ ಪಂಚಕರ್ಮ ಚಿಕಿತ್ಸೆ, ಧ್ಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಡೆಬಿಡದ ಪ್ರಚಾರದಿಂದ ಸುಸ್ತಾಗಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಯೋಗ, ಆಯಿಲ್ ಥೆರಪಿ ಮಾಡಲಾಗುತ್ತದೆ.

      ಕಳೆದ ರಾತ್ರಿ 1 ಗಂಟೆಯವರೆಗೆ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿರುವ ಸಿಎಂ, ಎರಡು ದಿನ ರಾಜಕೀಯದಿಂದ ದೂರವಿರಲು ನಿರ್ಧರಿಸಿದ್ದಾರೆ. ಸಿಎಂ ರೆಸಾರ್ಟ್ ನಲ್ಲಿ ಉಳದಿರುವ ಹಿನ್ನೆಲೆಯಲ್ಲಿ ಸಾಯಿರಾಧಾ ರೆಸಾರ್ಟ್ ಗೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.

      Chief Minister Kumaraswamy is in Relax Mood

      ಮಾಧ್ಯಮಗಳ ಮೇಲೆ ಸಿಎಂ ಸಿಡಿಮಿಡಿ
      ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭಾನುವಾರ (ಏ.21) ರೆಸಾರ್ಟ್ ಗೆ ಆಗಮಿಸುತ್ತಿದ್ದಂತೆ ಮಾಧ್ಯಮದವರ ಕ್ಯಾಮೆರಾಗಳನ್ನು ಕಂಡು ಕೋಪಗೊಂಡರು.ಯಾರ್ರೀ ಇವರನ್ನ ಒಳಗೆ ಬಿಟ್ಟವರು. ಸ್ವಲ್ಪನೂ ಮ್ಯಾನರ್ಸ್ ಇಲ್ವೇನ್ರೀ ಇವರಿಗೆ. ಮಾಧ್ಯಮಗಳಿಗೆ ಮಾಹಿತಿ ಕೊಟ್ಟೋರು ಯಾರು? ಖಾಸಗಿ ಕಾರ್ಯಕ್ರಮ ಅಂತ ಗೊತ್ತಿಲ್ವಾ ನಿಮ್ಗೆ? ಕಾಮನ್ ಸೆನ್ಸ್ ಇಲ್ವಾ ನಿಮಗೆ ಎಂದು ರೆಸಾರ್ಟ್ ಪ್ರವೇಶ ಶೂಟಿಂಗ್ ಮಾಡಿದ್ದಕ್ಕೆ ಗರಂ ಆದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+