ಕರಾವಳಿಯಲ್ಲಿ ಬಾಲಿವುಡ್ ನಟಿ, ಸಂಸದೆ ಕಂಗನಾ ರಣಾವತ್ ಟೆಂಪಲ್‌ ರನ್‌: ಯಾಕೆ?

ಬಾಲಿವುಡ್ ನಟಿ ಸಂಸದೆ ಕಂಗನಾ ರಣಾವತ್ ಉಡುಪಿ ಹಾಗೂ ದಕ್ಷಿಣ ಕನ್ನಡದ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಉಡುಪಿಗೆ ಆಗಮಿಸಿರುವ ಕಂಗನಾ ರಣಾವತ್‌ ಮೊದಲು ಕಾಪು ಮಾರಿಯಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ಇತ್ತೀಚೆಗಷ್ಟೆ ಬಹುಕೋಟಿ ವೆಚ್ಚದಲ್ಲಿ ನವೀಕರಣಗೊಂಡಿರುವ ಕಾಪು ಮಾರಿಯಮ್ಮನ ದೇವಾಲಯದ ರಚನೆ ಬಗ್ಗೆ ನಟಿ ಕಂಗನಾ ರಣಾವತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಕಂಗನಾ ರಣಾವತ್‌ ಅವರನ್ನು ಶಾಲು ಹೊದಿಸಿ ಗೌರವದಿಂದ ಕಾಪು ಮಾರಿಯಮ್ಮನ ದೇವಸ್ಥಾನದ ಆಡಳಿತ ಮಂಡಳಿ ಬರಮಾಡಿಕೊಂಡಿತು. ಮಾರಿಯಮ್ಮ ದೇವಿಯ ದರ್ಶನ ಪಡೆದ ನಂತರ ಕಂಗನಾ ರಣಾವತ್‌ ಹಿರಿಯ ಆರ್‌ಎಸ್‌ಎಸ್ ಮುಖಂಡ ಬಿ.ಎಲ್ ಸಂತೋಷ್ ಭಾಗಿಯಾಗಿರುವ ಸಾರ್ವಜನಿಕ ಸಭೆಯಲ್ಲಿ ಕಾಣಿಸಿಕೊಂಡರು.

Bollywood Actress And BJP MP Kangana Ranaut Visit Coastal Temples

ದೇವಸ್ಥಾನಕ್ಕೆ ಹಾಗೂ ಸಾರ್ವಜನಿಕ ಸಭೆಗೆ ಆಗಮಿಸುವ ವೇಳೆ ಕಂಗನಾ ರಣಾವತ್‌, ಹಸಿರು ಬಣ್ಣದ ಸೀರೆಯುಟ್ಟು ಮುಡಿ ತುಂಬಾ ಮಲ್ಲಿಗೆ ಮುಡಿದು ಎಲ್ಲರ ಗಮನ ಸೆಳೆದರು. ಸಾರ್ವಜನಿಕ ಸಭೆಯಲ್ಲಿ ಬಾಲಿವುಡ್ ನಟಿಯಾದರೂ ದೇವಸ್ಥಾನಕ್ಕೆ ಬರುವಾಗ ಕಂಗನಾ ರಣಾವತ್‌ ಸೀರೆಯುಟ್ಟು ಬಂದ ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಲಾಯಿತು.

ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಂಗನಾ ರಣಾವತ್ ಭೇಟಿ

ಇಂದು ಮಾರ್ಚ್ 04 ಮಂಗಳವಾರ ಬಾಲಿವುಡ್ ನಟಿ ಬಿಜೆಪಿ ಸಂಸದೆ ಕಂಗನಾ ರಣಾವತ್ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಿ ದರ್ಶನ ಪಡೆದು ಶೇಷ ಪೂಜೆ ಸಲ್ಲಿಸಿದ್ದಾರೆ. ಮಧ್ಯಾಹ್ನದ ಮಹಾ ಪೂಜೆಯಲ್ಲಿ ಭಾಗಿಯಾದ ನಟಿ ಕಂಗನಾ ರಣಾವತ್, ದೇವಸ್ಥಾನದಲ್ಲೇ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ. ಈ ವೇಳೆ ನಟಿಗೆ ಸ್ಥಳೀಯ ಸಂಸದ ಕ್ಯಾ ಬ್ರಿಜೇಶ್ ಚೌಟ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ.

Bollywood Actress And BJP MP Kangana Ranaut Visit Coastal Temples

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಕಂಗನಾ ರಣಾವತ್, 'ಬಹಳ ವರ್ಷಗಳಿಂದ ಈ ಭಾಗಕ್ಕೆ ಬರಬೇಕು ಎನ್ನುವ ಆಸೆ ಇತ್ತು. ಈಗ ಈಡೇರಿದೆ. ಈಗ ತಾಯಿ ತನ್ನ ಆಶೀರ್ವಾದ ನೀಡಲು ನನ್ನನ್ನು ಕರೆಸಿಕೊಂಡಿದ್ದಾಳೆ. ಕಾಪು ಮಾರಿಗುಡಿ ಹಾಗೂ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದಿದ್ದೇನೆ. ತಾಯಿ ದರ್ಶನದಿಂದ ಬಹಳ ಖುಷಿಯಾಗಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+