ಕೊನೆಗೂ ಈಡೇರಿದ ಉಡುಪಿ-ಚಿಕ್ಕಮಗಳೂರು ಬಿಜೆಪಿ ಕಾರ್ಯಕರ್ತರ ಕನಸು: ಏನದು..?
ಉಡುಪಿ, ಜೂನ್ 08: ಎರಡು ದಶಕದ ಸತತ ಹೋರಾಟದ ನಂತರ ಬಿಜೆಪಿ ಸ್ವಕ್ಷೇತ್ರದ ಅಭ್ಯರ್ಥಿಯನ್ನು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಕಳುಹಿಸಿಕೊಡುತ್ತಿದೆ. ಈ ಹಿಂದೆ 2004ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಬಿಜೆಪಿ ಸಂಸದೆಯಾಗಿ ಮನೋರಮ ಮಧ್ವರಾಜ್ ಆಯ್ಕೆಯಾಗಿ ಡೆಲ್ಲಿ ಪಾಲಿಟಿಕ್ಸ್ ಗೆ ಹೋಗಿದ್ದರು.
ಉಡುಪಿ ಚಿಕ್ಕಮಗಳೂರು 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಿ ನಿರ್ಮಾಣವಾದ ಲೋಕಸಭಾ ಕ್ಷೇತ್ರ. ಬಿಜೆಪಿ ಈ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಅವಕಾಶ ಈವರೆಗೆ ಸ್ಥಳೀಯರಿಗೆ ಸಿಕ್ಕಿರಲಿಲ್ಲ.

2009 ರ ಮೊದಲ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸದಾನಂದ ಗೌಡ ಉಡುಪಿ ಚಿಕ್ಕಮಗಳೂರಿನ ಅಭ್ಯರ್ಥಿಯಾದರು. ಸುಮಾರು 45 ಮತಗಳ ಅಂತರದಿಂದ ಗೆದ್ದು ಮೊದಲ ಎಂಪಿಯಾಗಿ ಸಂಸತ್ ಪ್ರವೇಶ ಮಾಡಿದರು.
2012 ರಲ್ಲಿ ಸಿಎಂ ಹುದ್ದೆ ಒಲಿದು ಬಂದಾಗ ಡಿವಿಎಸ್ ಏರುವಾಗ ರಾಜೀನಾಮೆ ನೀಡಿದರು. ಉಪಚುನಾವಣೆಯಲ್ಲಿ ಕ್ಷೇತ್ರ ಕಾಂಗ್ರೆಸ್ ಪಾಲಾಯ್ತು. ಜಯಪ್ರಕಾಶ್ ಹೆಗ್ಡೆ ಗೆದ್ದರು. 2014 ಮತ್ತು 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಜಿಲ್ಲೆಯಿಂದಲೇ ಅಭ್ಯರ್ಥಿ ಕೊಡಿ ಎಂಬ ಅಭಿಪ್ರಾಯಗಳು ಒತ್ತಾಯಗಳು ಕೇಳಿ ಬಂದಿತ್ತು.
ಆ ಸಂದರ್ಭದಲ್ಲಿ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಶೋಭಾ ಕರಂದ್ಲಾಜೆಯನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಅಭ್ಯರ್ಥಿ ಮಾಡಲಾಯಿತು. ಎರಡು ಬಾರಿ ಕೂಡ ದಾಖಲೆಯ ಅಂತರದಲ್ಲಿ ಶೋಭಾ ಕರಂದ್ಲಾಜೆ ಗೆದ್ದು ಸಂಸತ್ ಪ್ರವೇಶ ಮಾಡಿದ್ದರು.

ಶೋಭಾ ಕರಂದ್ಲಾಜೆ ವಿರುದ್ಧ ಚಿಕ್ಕಮಗಳೂರು ಮತ್ತು ಉಡುಪಿಯಲ್ಲಿ ಗೋ ಬ್ಯಾಂಕ್ ಅಭಿಯಾನ ಆರಂಭವಾಗಿ, ಶೋಭಾ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಶಿಫ್ಟಾದರು. ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಪಕ್ಕದ ಶಿವಮೊಗ್ಗದಲ್ಲಿ ಬಿಲ್ಲವ ಅಭ್ಯರ್ಥಿಗಳಿಗೆ ಮಣೆ ಹಾಕುತ್ತಿದ್ದಂತೆ ಬಿಲ್ಲವ ಅಭ್ಯರ್ಥಿಗೆ ಉಡುಪಿಯಿಂದ ಸ್ಪರ್ಧೆ ಮಾಡುವ ಅವಕಾಶ ಆಗಿದೆ. ಮೂಲತಃ ಉಡುಪಿ ಜಿಲ್ಲೆಯ, ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿಗೆ 20 ವರ್ಷದ ನಂತರ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಈ ಮೂಲಕ ಎರಡು ದಶಕದ ನಂತರ ಉಡುಪಿ ಮೂಲದ ವ್ಯಕ್ತಿ ಕೋಟ ಶ್ರೀನಿವಾಸ ಪೂಜಾರಿ ಸಂಸತ್ತಿಗೆ ಪ್ರವೇಶ ಮಾಡುತ್ತಿದ್ದಾರೆ.












Click it and Unblock the Notifications