ಸಂಭ್ರಮಾಚರಣೆಗೆ ಅಣಿಯಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಬೆಂಬಲಿಗರು
ಉಡುಪಿ, ಮೇ 15 : ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆ ಮತ ಎಣಿಕೆ ಅರ್ಧಕ್ಕರ್ಧ ಮುಕ್ತಾಯವಾಗಿದ್ದು, ಉಡುಪಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಣುತ್ತಿದೆ. ಕಾಂಗ್ರೆಸ್ ಕೇವಲ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು, ಎಲ್ಲರಲ್ಲೂ ವಿಜಯೋತ್ಸವದ ಕಹಳೆ ಮೂಡಿದೆ.
ಉಡುಪಿಯ ರಘುಪತಿ ಭಟ್ 2,000 ಮತಗಳ ಮುಂಚೂಣಿಯಲ್ಲಿದ್ದರೆ, ಕಾಪುವಿನ ಲಾಲಾಜಿ ಆರ್ ಮೆಂಡನ್ 3,000 ಮತಗಳ ಲೀಡ್ ನಲ್ಲಿದ್ದಾರೆ. ಕಾರ್ಕಳದ ಸುನಿಲ್ ಕುಮಾರ್ 4500ಮತಗಳು ಹಾಗೂ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ 10,000 ಮತಗಳ ಲೀಡ್ ನಲ್ಲಿದ್ದಾರೆ.
ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಈಗಾಗಲೇ ನಾಲ್ಕು ಸುತ್ತು ಪುರ್ಣಗೊಂಡಿದೆ. ಉಡುಪಿಯ 5 ಕ್ಷೇತ್ರಗಳಲ್ಲಿ 5ರಲ್ಲೂ ಬಿಜೆಪಿ ಮುನ್ನಡೆ ಕಾಣುತ್ತಿದೆ. ಕುಂದಾಪುರ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಭರ್ಜರಿ ಮುನ್ನಡೆ ಕಾಣುತ್ತಿದೆ.

ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ವಿರುದ್ಧ 18,000 ಮತಗಳ ಮುಂಚೂಣಿಯಲ್ಲಿದ್ದಾರೆ. ಮತಗಳ ಘೋಷಣೆ ಆಗುತ್ತಿದ್ದಂತೆ ಹೊರಗೆ ಸೇರಿದ ಹಾಲಾಡಿ ಬೆಂಬಲಿಗರಿಂದ ಉತ್ಸಾಹದ ಕಹಳೆ ಜೋರಾಗಿದೆ. ಹಾಲಾಡಿ ಬೆಂಬಲಿಗರು ಅವರ ಭಾವಚಿತ್ರವನ್ನು ಹಿಡಿದು ತಮ್ಮ ಜಯವನ್ನು ಆಚರಿಸುತ್ತಿದ್ದಾರೆ.












Click it and Unblock the Notifications