ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ರಾನ್ಸ್ ನಲ್ಲಿ ಕರ್ನಾಟಕದ ಗಂಡುಕಲೆ ಯಕ್ಷಗಾನದ ಕಲರವ

By ಉಡುಪಿ ಪ್ರತಿನಿಧಿ
|
Google Oneindia Kannada News

Recommended Video

ಫ್ರಾನ್ಸ್ ನಲ್ಲಿ ಕರ್ನಾಟಕದ ಗಂಡುಕಲೆ ಯಕ್ಷಗಾನದ ಕಲರವ | Oneindia Kannada

ಉಡುಪಿ, ಮೇ 26 : ಎಲ್ಲಿಯ ಕರಾವಳಿಯ ಗಂಡುಕಲೆ ಯಕ್ಷಗಾನ, ಎಲ್ಲಿಯ ಫ್ರಾನ್ಸ್ ದೇಶ? ಕಲೆಗೆ ದೇಶ ಭಾಷೆ ಗಡಿಯ ಹಂಗಿಲ್ಲ…. ವಿಷಯ ಏನಪ್ಪಾ ಅಂದ್ರೆ ವಿದೇಶಗಳಲ್ಲೂ ಕರ್ನಾಟಕದ ಶಾಸ್ತ್ರೀಯ ಕಲೆ ಯಕ್ಷಗಾನ ಸದ್ದು ಮಾಡುತ್ತಿದೆ.

ಉಡುಪಿಯ ಖ್ಯಾತ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಫ್ರಾನ್ಸ್ ದೇಶದಲ್ಲಿ ಅಲ್ಲಿನ ಪುಟ್ಟ ಮಕ್ಕಳು ಮತ್ತು ಮಹಿಳೆಯರಿಗೆ ಕನ್ನಡದ ಹೆಮ್ಮೆಯ ಕಲೆಯ ಪರಿಚಯ ಮಾಡುತ್ತಿದ್ದಾರೆ.

ಒಂದು ತಿಂಗಳ ಫ್ರಾನ್ಸ್ ಪ್ರವಾಸದಲ್ಲಿರುವ ಸುವರ್ಣರು, ಯಕ್ಷಗುರು ಶೈಲೇಶ್ ನಾಯ್ಕ್ ಜೊತೆಗೂಡಿ, ಅಲ್ಲಿನ ಮಕ್ಕಳಿಗೆ ಯಕ್ಷಗಾನದ ಹೆಜ್ಜೆಗಾರಿಕೆ ಕಲಿಸುತ್ತಿದ್ದಾರೆ. ಈ ಮೂಲಕ ಕರ್ನಾಟಕದ ಹೆಮ್ಮೆಯ ಕಲೆ ವಿದೇಶಗಳಲ್ಲೂ ಕಲರವ ಮಾಡುತ್ತಿದೆ.

Bannanje Sanjeeva Suvarna teaching Yakshagana in France

ಭಾರತೀಯ ಪುರಾಣಗಳ ಪರಿಚಯ ಮತ್ತು ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಯ ಬಗ್ಗೆ ಬನ್ನಂಜೆ ಸಂಜೀವ ಸುವರ್ಣ ಅವರು ಪ್ರಾತ್ಯಕ್ಷಿಕೆಗಳನ್ನು ನೀಡುತ್ತಿದ್ದಾರೆ. ಮಾಸಾಂತ್ಯದಲ್ಲಿ ಬಣ್ಣಗಾರಿಕೆಯ ಸಹಿತ, ಯಕ್ಷಗಾನ ಪ್ರದರ್ಶನಗಳೂ ಏರ್ಪಾಟಾಗಿದೆ.

ಈವರಗೆ ಐವತ್ತಕ್ಕೂ ಅಧಿಕ ದೇಶಗಳಲ್ಲಿ ಯಕ್ಷಗಾನದ ಪರಿಚಯ ಮಾಡಿರುವ ಯಕ್ಷಗಾನ ಗುರು ಸಂಜೀವ ಸುವರ್ಣರು ಇದೇ ಮೊದಲ ಬಾರಿಗೆ ಫ್ರಾನ್ಸ್ ನಲ್ಲಿ ಯಕ್ಷಗಾನ ಕಲಿಸಲು ತೆರೆಳಿದ್ದಾರೆ. ಅಲ್ಲಿನ ನಾಗರಿಕರು ಕೂಡ ಅಷ್ಟೇ ಆಸಕ್ತಿಯಿಂದ ಕರ್ನಾಟಕದ ಕಲೆಯನ್ನು ಕಲಿಯುತ್ತಿದ್ದಾರೆ.

English summary
Bannanje Sanjeeva Suvarna, maverick of an artist from Udupi, teaching Yakshagana, the art of Karnataka in France.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X