ಬಿಲ್ಲವರ ಗುರು ಸೇವಾ ಸಮಿತಿಗೆ ನೂತನ ಅಧ್ಯಕ್ಷರಾಗಿ ಅಜಿತ್ ಬಂಗೇರ

By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ಏಪ್ರಿಲ್ 20 : ಅನಿವಾಸಿ ಬಿಲ್ಲವರ ಗುರು ಸೇವಾ ಸಮಿತಿ ಬಹರೈನ್ ಸಂಘಟನೆಗೆ 2017-18ನೇ ಸಾಲಿನ ಹೊಸ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಅಜಿತ್ ಬಂಗೇರ ಅವರು ನೇಮಕಗೊಂಡಿದ್ದಾರೆ.

2017-18ನೇ ಸಾಲಿಗೆ ಹೊಸ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಯುಕ್ತ ಇತ್ತೀಚೆಗೆ ಕರ್ನಾಟಕ ಸೋಶಿಯಲ್ ಕ್ಲಬ್ ನಲ್ಲಿ ನಡೆದ ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್ ನ ಮಹಾಸಭೆಯಲ್ಲಿ ಅಜಿತ್ ಬಂಗೇರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.[ಥಾಣೆ ಮೇಯರ್ ವಿೂನಾಕ್ಷಿ ಪೂಜಾರಿಗೆ ಬಿಲ್ಲವ ಸಂಘದಿಂದ ಸನ್ಮಾನ]

Bahrain Billawas unanimously elected the new executive committee for the 2017

ಇದೇ ಮೇ 05ರಂದು ಈ ಸಂಘಟನೆಯು ಹದಿನೈದನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿದ್ದು ಈ ವೇಳೆ ನೂತನ ಆಡಳಿತ ಮಂಡಳಿಗೆ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ ಎಂದು ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.

ಮೇ 05, 2003 ರಲ್ಲಿ ಸ್ಥಾಪನೆಯಾಗೊಂಡಿರುವ ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್ ಸಂಘಟನೆಯು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ.

ಅಷ್ಟೇ ಅಲ್ಲದೆ ಬಹರೈನ್ ದ್ವೀಪ ರಾಷ್ಟ್ರದಲ್ಲಿ ಅನಿವಾಸಿ ಕನ್ನಡಿಗರಿಗಾಗಿ ಪ್ರತಿ ವರ್ಷವೂ ತನ್ನ ಕೈಲಾದಷ್ಟು ಒಳ್ಳೆಯ ಗುಣಮಟ್ಟದ ಮನೋರಂಜನೆ ಕಾರ್ಯಕ್ರಮಗಳನ್ನು ಕೊಡುತ್ತಾ ಆಟೋಟ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿದೆ.

ಮೇ 05ರಂದು ಹದಿನೈದನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಈ ಸುಸಂದರ್ಭದಲ್ಲಿ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಅಂದು ಸಂಜೆ 3.30 ರಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗು ಭಜನೆಯನ್ನು ಆಯೋಜಿಸಲಾಗಿದೆ.

2017-18 ಸಾಲಿನ ಪದಾಧಿಕಾರಿಗಳ ವಿವರ ಇಂತಿದೆ:
ಅಜಿತ್ ಬಂಗೇರ ( ಅಧ್ಯಕ್ಷ ),ಅಶೋಖ್ ಕಟೀಲ್ (ಖಜಾಂಚಿ ), ಹೇಮಂತ್ ಸಾಲಿಯಾನ್ ( ಉಪಾಧ್ಯಕ್ಷ), ಹರಿನಾಥ್ ಸುವರ್ಣ ( ಪ್ರಧಾನ ಕಾರ್ಯದರ್ಶಿ ), ನಿತ್ಯಾನಂದ ಸುವರ್ಣ (ಉಪ ಕಾರ್ಯದರ್ಶಿ), ಪುರಷೋಥಮ್ ಪೂಜಾರಿ (ಸದಸ್ಯ), ಹರೀಶ್ ಕುಮಾರ್ (ಉಪ ಖಜಾಂಚಿ) ಹಿತಿನ್ ಪೂಜಾರಿ (ಉಪ ಮನೋರಂಜನೆ ಕಾರ್ಯದರ್ಶಿ), ರಾಜ್ ಪೂಜಾರಿ ಬೆದ್ರ (ಸದಸ್ಯ ), ಪ್ರದೀಪ್ ಸುದೇಕರ್ (ಮನೋರಂಜನೆ ಕಾರ್ಯದರ್ಶಿ) ಮತ್ತು ಚಿರಾಗ್ ಸುವರ್ಣ( ಕ್ರೀಡಾ ಕಾರ್ಯದರ್ಶಿ).

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Guru Seva Samiti (GSS) - Bahrain Billawas unanimously elected the new executive committee for the year 2017–2018 during the annual general body meeting held at Karnataka Social Club on April 7th, 2017.
Please Wait while comments are loading...