ಜು.23 ಸೋಮೇಶ್ವರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಕುಂದಾಪುರ, ಜುಲೈ 23: ಹೊಸ ತಲೆಮಾರು ಇತ್ತೀಚೆಗೆ ಆಯುರ್ವೇದ ವೈದ್ಯಕೀಯ ಪದ್ಧತಿಯತ್ತ ಹೊರಳುತ್ತಿದೆ. ಹೆಚ್ಚು ಅಡ್ಡ ಪರಿಣಾಮಗಳಿಲ್ಲದಿರುವುದು ಇದಕ್ಕೆ ಮುಖ್ಯಕಾರಣವಿರಬಹುದು.
ಅದಕ್ಕೆಂದೇ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರದ ಮೂಲಕ ಆಯುರ್ವೇದದ ಮಹತ್ವವನ್ನು ಮನವರಿಕೆ ಮಾಡಿಕೊಡಲು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸೋಮೇಶ್ವರ ಸಿದ್ಧವಾಗಿದೆ. ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲಾ, ಶ್ರೀ ಭುವನೇಂದ್ರ ಪಂಚಕರ್ಮ ಸೆಂಟರ್, ಬಸವನಗುಡಿ ಕೋಟೇಶ್ವರ ಹಾಗೂ ಶ್ರೀ ವೆಂಕಟರಮಣ ದೇವಸ್ಥಾನ ಸೋಮೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 23 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದೆ.

ಹೆಸರಾಂತ ಆಯುರ್ವೇದ ವೈದ್ಯರುಗಳಾದ ಕೆಎಮ್ ಸಿ(ಕಸ್ತೂರ್ ಬಾ ಮೆಡಿಕಲ್ ಕಾಲೇಜ್) ಮಣಿಪಾಲದ ಆಯುರ್ವೇದ ವಿಭಾಗದ ಮುಖ್ಯಸ್ಥರಾದ ಎಮ್. ಎಸ್. ಕಾಮತ್, ಕೇರಳದ ಪ್ರಖ್ಯಾತ ಆಯುರ್ವೇದ ತಜ್ಞ ಡಾ.ರಾಜೀವ ಶೆಣೈ, ಕೋಟೇಶ್ವರ ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲೆಯ ಡಾ.ಕಾತ್ಯಾಯಿನಿ ಇವರುಗಳಿಂದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಉಚಿತ ತಪಾಸಣೆ ನಡೆಸಿ, ಉಚಿತವಾಗಿ ಔಷದಿ ವಿತರಣೆ ನೀಡಲಾಗುವುದು. ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬಹುದೆಂದು ಶಿಬಿರದ ಆಯೋಜಕರು ತಿಳಿಸಿದ್ದಾರೆ.












Click it and Unblock the Notifications