ಅಂಬರೀಶ್ ದೇಹಕ್ಕೆ ಅಗ್ನಿಸ್ಪರ್ಶವಾದ ಕೂಡಲೇ ರಾಜಕೀಯ ಆರಂಭವಾಗಿದೆ:ಸಿಎಂ
Recommended Video
ಉಡುಪಿ, ಏಪ್ರಿಲ್ 07:ಮಂಡ್ಯದಲ್ಲಿ ನಾನು ನಮ್ಮ ಜೆಡಿಎಸ್ ಕಾರ್ಯಕರ್ತರ ಮೇಲೆ ಡಿಪೆಂಡ್ ಆಗಿದ್ದೇನೆ. ಯಾರು ಏನೇನು ಮಾಡುತ್ತಿದ್ದಾರೆ ನನಗೆ ಗೊತ್ತಿದೆ. ಮೂರು ತಿಂಗಳ ಹಿಂದೆಯಿಂದ ನಡೆಯುತ್ತಿರೋದು ಎಲ್ಲವೂ ಗೊತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಉಡುಪಿ-ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಇಂದು ಭಾನುವಾರ ಉಡುಪಿಗೆ ಆಗಮಿಸಿರುವ ಸಿಎಂ, ಮೊದಲು ಕಾರ್ಕಳದಲ್ಲಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ಅಂಬರೀಶ್ ದೇಹಕ್ಕೆ ಅಗ್ನಿ ಸ್ಪರ್ಶ ಆದ ಕೂಡಲೇ ರಾಜಕೀಯ ಆರಂಭವಾಗಿದೆ. ಮಂಡ್ಯದಲ್ಲಿ ಜೆಡಿಎಸ್ ನಿರ್ನಾಮ ಮಾಡಲು ಎಲ್ಲರೂ ಹೊರಟಿದ್ದಾರೆ ಎಂದು ಹೇಳಿದರು.
ನಾನು ಚೆಲುವರಾಯ ಸ್ವಾಮಿ ಬಗ್ಗೆ ಮಾತೇ ಆಡಿಲ್ಲ. ಬೆನ್ನಿಗೆ ಚೂರಿ ಹಾಕುವವರ ಬಗ್ಗೆ ಮಾತನಾಡಿದ್ದೆ. ನಾನು ಚೆಲುವರಾಯಸ್ವಾಮಿ ಬೆನ್ನಿಗೆ ಚೂರಿ ಹಾಕುತ್ತಾರೆ ಅಂದಿಲ್ಲ. ನನ್ನ 8 ಶಾಸಕರನ್ನೂ, ನನ್ನನ್ನು ಮುಗಿಸಲು ಪ್ರಯತ್ನ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ನಿಖಿಲ್ ಸೋಲಿಸಿ, ನನ್ನನ್ನು ಮುಗಿಸಲು ಎಲ್ಲಾ ಪ್ರಯತ್ನ ನಡೆದಿದೆ. ನಾನು ಮಂಡ್ಯಕ್ಕೆ ಹೋಗಿ 6 ದಿನ ಆಯ್ತು. ಜೆಡಿಎಸ್ ಕುತಂತ್ರ ಮಾಡುತ್ತಿಲ್ಲ.ಕುತಂತ್ರ ಮಾಡುತ್ತಿರುವವರು ಅವರು.
ಮಂಡ್ಯದಲ್ಲಿ ಸ್ಟ್ರಾಟಜಿ ಮಾಡಿ ಚುನಾವಣೆ ಮಾಡುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು. ಮುಂದೆ ಓದಿ...

ಮಂಡ್ಯದ ನಾಡಿಮಿಡಿತ ನಮಗೆ ಗೊತ್ತಿದೆ
ಮಂಡ್ಯ ಜಿಲ್ಲೆ ನಮ್ಮ ಹೃದಯ ಇದ್ದಂತೆ ಎಂದ ಸಿಎಂ, ಮಂಡ್ಯದ ನಾಡಿಮಿಡಿತ ನಮಗೆ ಗೊತ್ತಿದೆ.ಯಾರ ಡ್ರಾಮನೂ ಮಂಡ್ಯದಲ್ಲಿ ನಡೆಯೋದಿಲ್ಲ. ರೈತರು ಸತ್ತಾಗ ಯಾರೂ ಬಂದಿಲ್ಲ. ಕಾಂಪೌಂಡ್ ಕಟ್ಟಿಸಿದ್ರೆ ಅದು ಅಭಿವೃದ್ಧಿ ಆಗಲ್ಲ ಎಂದು ಸುಮಲತಾಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಮೈಸೂರಿನಲ್ಲಿ ಹಿನ್ನಡೆಯಾಗಲು ಬಿಡಲ್ಲ
ಮೈಸೂರಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲುತ್ತಾರೆ. ಮೈಸೂರಿನಲ್ಲಿ ಹಿನ್ನಡೆಯಾಗಲು ನಾನು ಬಿಡಲ್ಲ. ರಾಜ್ಯದಲ್ಲಿ ಎಲ್ಲೂ ಗೊಂದಲವಾಗಲು ಬಿಡಲ್ಲ. ಗೊಂದಲ ಬಗೆಹರಿಸಿ ಗೆಲ್ಲುವುದು ನನ್ನ ಜವಾಬ್ದಾರಿ. ನಾವು ಎಲ್ಲಾ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಕರಾವಳಿ ಜನರ ಬಗ್ಗೆ ಲಘುವಾಗಿ ಮಾತಾಡಿಲ್ಲ
ನಾನು ಕರಾವಳಿ ಜನರ ಬಗ್ಗೆ ಯಾವತ್ತೂ ಲಘುವಾಗಿ ಮಾತಾಡಿಲ್ಲ ಎಂದ ಕುಮಾರಸ್ವಾಮಿ ಅವರು ಊರಿಗೆ ಶಾಲೆ ಬೇಕು ಅಂದ್ರೆ ಕುಮಾರಸ್ವಾಮಿ ಬೇಕು. ಆದ್ರೆ ಯುವಕರು ಮೋದಿಗೆ ವೋಟ್ ಹಾಕ್ತೀವಿ ಅಂತಾರೆ. ನಾನು ಹೀಗೆ ಕೇಳಿದ್ರೆ ಏನು ತಪ್ಪು?, ಮೋದಿ ಒಬ್ರೇ ದೇಶ ರಕ್ಷಣೆ ಮಾಡಬಲ್ಲರು ಅಂತೀರಲ್ವಾ? ಹಾಗಾದ್ರೆ ವಾಜಪೇಯಿ ಈ ರಾಷ್ಡ್ರಕ್ಕೆ ಭದ್ರತೆ ಕೊಟ್ಟಿಲ್ವಾ?ಮೋದಿ ಮಂಗಳೂರು ಮೂಲದ ಸಂಸ್ಥೆಗಳನ್ನ ದಿವಾಳಿ ಎಬ್ಬಿಸಿದ್ದಾರೆ ಎಂದು ಟೀಕಿಸಿದರು.

ವಿವಾದಾಸ್ಪದ ಹೇಳಿಕೆಗೆ ನನ್ನ ಸಹಮತವಿಲ್ಲ
ಪುಲ್ವಾಮಾ ದಾಳಿ ಹೇಳಿಕೆಯ ಕುರಿತು ಪ್ರತಿಕ್ರಯಿಸಿದ ಸಿಎಂ, ಪುಲ್ವಾಮಾ ದಾಳಿ ಮೊದಲೇ ಗೊತ್ತಿತ್ತು ಎಂದು ನಾನು ಹೇಳಿಯೇ ಇಲ್ಲ.ಎರಡು ವರ್ಷದ ಹಿಂದೆ ನಿವೃತ್ತ ಅಧಿಕಾರಿಯೊಬ್ಬರು ಹೇಳಿದ್ದರು. ಚುನಾವಣೆ ವೇಳೆ ಯುದ್ಧದ ವಾತಾವರಣ ಬರುತ್ತೆ ಅಂದಿದ್ದರು.ಅದ್ದನ್ನಷ್ಟೇ ನಾನು ಹೇಳಿದ್ದೆ.ಅಂತಹ ವಿವಾದಾಸ್ಪದ ಹೇಳಿಕೆಗೆ ನನ್ನ ಸಹಮತವಿಲ್ಲ. ನಾನು ಯಾವ ಬಾಂಬೂ ಹಾಕಿಲ್ಲ, ಬಾಂಬ್ ಹಾಕುವ ಕೆಲಸ ಬಿಜೆಪಿಗೆ ಬಿಟ್ಟಿದ್ದೇವೆ. ಅದು ನಮ್ಮ ಸಂಸ್ಕೃತಿ ಅಲ್ಲ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.












Click it and Unblock the Notifications