ಕುಂದಾಪುರ ಹುಡುಗಿ ಮೇಲೆ ನಿರಂತರ 8 ತಿಂಗಳು ಅತ್ಯಾಚಾರ!

Posted By: Ramesh
Subscribe to Oneindia Kannada

ಉಡುಪಿ, ಫೆಬ್ರವರಿ. 01 : ಪಾಪಿ ಯುವಕನೊಬ್ಬ ಅಪ್ರಾಪ್ತ ವಯಸ್ಸಿನ ತನ್ನ ಸಂಬಂಧಿ ಹುಡುಗಿ ಮೇಲೆ ನಿರಂತರವಾಗಿ 8 ತಿಂಗಳಿಂದ ಅತ್ಯಾಚಾರ ನಡೆಸಿ ಗರ್ಭವತಿಯನ್ನಾಗಿ ಮಾಡಿದ ಪ್ರಕರಣ ಕೊನೆಗೂ ಕುಂದಾಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಾಕ್ಕಲ್ ನಿವಾಸಿ ಶ್ರೀಧರ ನಾಯ್ಕ್ (24) ಎನ್ನುವಾತ ತನ್ನ ಸಮೀಪ ಸಂಬಂಧಿ 14 ವರ್ಷ ಪ್ರಾಯದ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ 8 ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಈಗ ಈ ಯುವತಿ ಮೂರು ತಿಂಗಳು ಗರ್ಭಿಣಿಯಾಗಿದ್ದಾಳೆ.

Accused arrested for 8 months continuous rape on minor girl in kundapur

ಕೂಲಿ ಕೆಲಸ ಮಾಡುತ್ತಿರುವ ಶ್ರೀಧರ ನಾಯ್ಕ್ 2016ರ ಮೇ 16ರಂದು ಬಾಲಕಿಯ ಮನೆಗೆ ಬಂದಿದ್ದು, ಬಲಾತ್ಕಾರವಾಗಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅದನ್ನೇ ಬ್ಲಾಕ್ಮೇಲ್ ತಂತ್ರಕ್ಕೆ ಬಳಸಿಕೊಂಡು ನಿರಂತರವಾಗಿ ಅತ್ಯಾಚಾರ ನಡಸಿದ್ದಾನೆ.

ಅಲ್ಲದೆ ಬಾಲಕಿ ಈಗ ಮೂರೂ ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದ್ದು, ತಮಗೆ ನ್ಯಾಯ ಕೊಡಿಸಿ ಎಂದು ಬಾಲಕಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Continuous rape on a minor girl since May 2016 in Kundapur, Udupi. The Accused is said to be Shridar (24) from kundupar. A case is been filed in kundupara town police.
Please Wait while comments are loading...