ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ಶಾಲಾ ಮಕ್ಕಳ ಶೂನಲ್ಲೂ ಲಂಚ, ಮುಖ್ಯೋಪಾಧ್ಯಾಯರ ಬಂಧನ

|
Google Oneindia Kannada News

ಉಡುಪಿ, ಮಾರ್ಚ್ 17: ಶಾಲಾ ಮಕ್ಕಳ ಶೂ ಹಣ ಬಿಡುಗಡೆಗೊಳಿಸಲು ಲಂಚದ ಬೇಡಿಕೆ ಇಟ್ಟಿದ್ದ ಹೆಡ್ ಮಾಸ್ಟರ್ ಎಸಿಬಿ ಬಲೆಗೆ ಬಿದ್ದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಹಿರಿಯಡ್ಕ ಶಾಲೆಯ ಹೆಡ್ ಮಾಸ್ಟರ್ ಎಂ.ಕೆ. ವಾಸುದೇವ ಎಸಿಬಿ ಬಲೆಗೆ ಬಿದ್ದ ಆರೋಪಿಯಾಗಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

2017 ರಲ್ಲಿ ಮಣಿಪಾಲದ ಖಾಸಗಿ ಸಂಸ್ಥೆಯೊಂದು ಶಾಲಾ ಮಕ್ಕಳಿಗೆ ಶೂ ವಿತರಿಸಿದ ವಿಚಾರದಲ್ಲಿ ಅವ್ಯವಾಹಾರ ನಡೆದಿತ್ತು ಎನ್ನಲಾಗಿದೆ. ಶಾಲಾ ಮಕ್ಕಳಿಗೆ ವಿತರಿಸಲು ಶೂ ಖರೀದಿಸಿದ 1,09,000 ರೂಪಾಯಿಯ ಬಿಲ್ಲನ್ನು ಬಿಡುಗಡೆಗೊಳಿಸಲು ವಾಸುದೇವ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ.

ಎಸಿಬಿ ದಾಳಿ : ಸರ್ಕಾರಿ ನೌಕರರ ಬಳಿ ಸಿಕ್ಕದ್ದು ಕೋಟ್ಯಾಂತರ ಹಣ-ಆಸ್ತಿಎಸಿಬಿ ದಾಳಿ : ಸರ್ಕಾರಿ ನೌಕರರ ಬಳಿ ಸಿಕ್ಕದ್ದು ಕೋಟ್ಯಾಂತರ ಹಣ-ಆಸ್ತಿ

ಆದರೆ ಚೌಕಾಸಿಯ ಬಳಿಕ 7 ಸಾವಿರ ರೂಪಾಯಿ ವ್ಯವಹಾರಕ್ಕೆ ವಾಸುದೇವ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಈ ಕುರಿತು ಮಣಿಪಾಲದ ಖಾಸಗಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರೊಬ್ಬರು ಎಸಿಬಿ ಮೊರೆ ಹೋಗಿದ್ದರು.

ACB officials arrests school headmaster in Udupi

ಹಿರಿಯಡ್ಕ ಶಾಲೆಯ ಹೆಡ್ ಮಾಸ್ಟರ್ ಆಗಿರುವ ಎಂ.ಕೆ. ವಾಸುದೇವ್ ಇಂದು ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ವಾಸುದೇವ್ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಎಸಿಬಿ ಎಸ್.ಪಿ‌ ಶ್ರುತಿ ಮಾರ್ಗದರ್ಶನ ಮೇರೆಗೆ ಉಡುಪಿ ಡಿವೈಎಸ್ಪಿ ದಿನಕರ್ ಶೆಟ್ಟಿ ಹಾಗೂ ಪಿಎಸ್ಐ ಸತೀಶ್ ತಂಡ ಈ ದಾಳಿ ನಡೆಸಿದೆ.

English summary
ACB officials arrest school headmaster In Udupi. Accused identified as Hiriyadka government school headmaster MK Vasudev.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X