• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೈ ಕಾಲಿಗೆ ಸರಪಳಿ ಬಿಗಿದು ಅರಬ್ಬೀ ಸಮುದ್ರದಲ್ಲಿ ಡಾಲ್ಫಿನ್ ರೀತಿ ಈಜಿದ 66ರ ವೃದ್ಧ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಉಡುಪಿ, ಜನವರಿ 25: ಅರ್ಧ ಗಂಟೆ ಕೈ ಕಟ್ಟಿ ನಿಂತುಕೊಳ್ಳುವುದು ಅಂದ್ರೇನೆ ಕೈ ಕಾಲು ನೋವು ಬಂದುಬಿಡುತ್ತದೆ. ಆದರೆ ಇಲ್ಲೊಬ್ಬರು ಕೈಕಾಲು ಕಟ್ಟಿ ಬರೋಬ್ಬರಿ 5 ಗಂಟೆ 30 ನಿಮಿಷ ಸಮುದ್ರದಲ್ಲಿ ಈಜಾಡಿದ್ದಾರೆ. ಬರೀ ಸಾಗರ ಸಾಹಸ ಮಾಡಿದ್ದು ಮಾತ್ರವಲ್ಲ, ಈ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ತನ್ನ 66ರ ವಯಸ್ಸಿನಲ್ಲಿ ಅಂದ್ರೆ ನಂಬಲೇಬೇಕು.

ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ ಎನ್ನುವುದು ಸಾಮಾನ್ಯ ಮಾತು. ಆದರೆ ಉಡುಪಿಯ ವ್ಯಕ್ತಿಯೊಬ್ಬರು ಸಾಹಸಕ್ಕೂ ವಯಸ್ಸು ಅಡ್ಡಿಯಲ್ಲ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅದು ವಿಶ್ವದಾಖಲೆ ಮೂಲಕ, ಸಾಗರ ಸಾಹಸದ ಮೂಲಕ.

ಸಾಗರ ಕಣ್ಣಿಗೆ ಶಾಂತವಾಗಿ ಕಂಡರೂ ಇಳಿದ ಮೇಲೆ ಭಯಾನಕ. ಯಾವ ದಿಕ್ಕಿನಿಂದ ಗಾಳಿ ಬೀಸುತ್ತದೆ, ಎಷ್ಟು ಎತ್ತರದಲ್ಲಿ ಅಲೆಗಳು ಎದ್ದು ಬರುತ್ತವೆ ಎಂದು ಯಾರಿಂದಲೂ ಲೆಕ್ಕಹಾಕಲು ಆಗುವುದಿಲ್ಲ.

ಇಂತಹ ಅರಬ್ಬೀ ಸಮುದ್ರದಲ್ಲಿ 66 ವಯಸ್ಸಿನ ಉಡುಪಿಯ ಕಡೆಕಾರು ನಿವಾಸಿ ಗಂಗಾಧರ್, ಬೆಳಗ್ಗೆ 7.50ಕ್ಕೆ ಸರಪಳಿಯಲ್ಲಿ ಕೈಯನ್ನು ಹಿಂದಕ್ಕೆ ಕಟ್ಟಿ, ಕಾಲನ್ನು ಸರಪಳಿಯಲ್ಲಿ ಕಟ್ಟಿ ಬೀಗ ಹಾಕಿ ನಿರಂತರ 5.30 ಗಂಟೆಗಳ ಕಾಲ ಈಜಿ ಇಂಡಿಯಾದ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರು ದಾಖಲು ಮಾಡಿದ್ದಾರೆ. ಗಂಗಾಧರ 60ನೇ ವಯಸ್ಸಿನಲ್ಲಿ ಸಮುದ್ರದ ಈಜು ಕರಗತ ಮಾಡಿದ್ದು, ಆರು ವರ್ಷಕ್ಕೆ ಎರಡು ರಾಷ್ಟ್ರೀಯ, ಅಂತರಾಷ್ಟ್ರೀಯ ದಾಖಲೆ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಜನಕ್ಕೆ ಈಗಾಗಲೇ ಈಜು ತರಬೇತಿಯನ್ನು ನೀಡಿದ್ದಾರೆ.

ತನ್ನ ವಿಶೇಷ ಸಾಧನೆಯ ಬಗ್ಗೆ ಮಾತನಾಡಿದ ಗಂಗಾಧರ್, ನಾನು 60ನೇ ವರ್ಷದಲ್ಲಿ ಈಜು ಕಲಿಯುವುದಕ್ಕೆ ಆರಂಭಿಸಿದೆ. ಆ ಬಳಿಕ ಈ ಕ್ಷೇತ್ರದಲ್ಲೇ ಏನಾದರೂ ಸಾಧನೆ ಮಾಡಬೇಕೆಂದು ಛಲ ಹೊಂದಿದೆ. ಕಳೆದ ವರ್ಷ ಜನವರಿ 24ರಂದು ಪದ್ಮಾಸನ ಭಂಗಿಯಲ್ಲಿ, ಕೈ ಕಾಲಿಗೆ ಕೊಳ‌ಹಾಕಿ ಒಂದೂವರೆ ಗಂಟೆ ಈಜಾಡಿದೆ. ಈ ಬಾರಿ ಕೈ ಕಾಲಿಗೆ ಕೊಳ ಹಾಕಿ ಡಾಲ್ಫಿನ್ ಮಾದರಿಯಲ್ಲಿ ಐದೂವರೆ ಗಂಟೆಗಳ ಕಾಲ‌ ಈಜಾಡಿದ್ದೇನೆ ಎಂದು ಗಂಗಾಧರ್ ಖುಷಿ ವ್ಯಕ್ತಪಡಿಸಿದ್ದಾರೆ.

Udupi: 66-year-old Man sets new record for swimming 3.5 km with hands and legs shackled

ಇನ್ನು ಗಂಗಾದರ್ ದಾಖಲೆಯನ್ನು ದಾಖಲು ಮಾಡಲು ಬಂದವರಿಗೆ ಗಂಗಾಧರ್ ಅವರ ಸಾಹಸ ಕಂಡು ಅಚ್ಚರಿಯಾಗಿದೆ. ಕೈ ಕಾಲು ಕಟ್ಟಿ ಡಾಲ್ಫಿನ್ ಮಾದರಿಯಲ್ಲಿ 66 ವಯಸ್ಸಿನಲ್ಲಿ ಈಜಾಡಿದ್ದು ಗ್ರೇಟ್. ನಾನು ಇಂತಹ ಸಾಧನೆ ಹಿಂದೆಂದೂ ಕಂಡಿಲ್ಲ ಎಂದು ಗಂಗಾಧರ್ ಸಾಧನೆಯನ್ನು ಕೊಂಡಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಮನೀಶ್, ಇದೊಂದು ಅಪರೂಪದ ಸಾಧನೆಯಾಗಿದೆ. ಕಡಲಿನ ಅಬ್ಬರದ ನಡುವೆಯೂ ಗಂಗಾಧರ್ ನಿರಂತರ ಐದೂವರೆ ಗಂಟೆಗಳ ಕಾಲ ಈಜಿ ಸಾಧನೆ ಮಾಡಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಗಂಗಾಧರ್ ಸಾಧನೆ ಸೇರ್ಪಡೆಯಾಗಿರುವುದು ತುಂಬ ಖುಷಿಯಾಗಿದೆ ಅಂತಾ ಹೇಳಿದ್ದಾರೆ.

ಒಟ್ಟಿನಲ್ಲಿ ಸಾಧನೆಗೆ ವಯಸ್ಸು ಅಡ್ಡ ಬರುವುದಿಲ್ಲ ಅನ್ನುವುದನ್ನು ಕಡಲ ಸಾಹಸ ಮಾಡುವ ಮೂಲಕ ಗಂಗಾಧರ್ ತೋರಿಸಿಕೊಟ್ಟಿದ್ದಾರೆ.‌ ಕಡಲ ತೀರದ ಯುವಕರಿಗೂ ಸ್ಫೂರ್ತಿಯಾಗಿದ್ದಾರೆ.

English summary
66-year-old man from Udupi has entered the Golden Book of World Records after Swimming 3.5 km in the Arabian sea for 5 hours and 30 minutes with his hands and legs chained.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X