Breaking: ಉಡುಪಿಯಲ್ಲಿ ಇಂದು ಒಂದೇ ದಿನ 25 ಮಂದಿಗೆ ಕೊರೊನಾ

ಉಡುಪಿ, ಮೇ 21: ಕೃಷ್ಣನಗರಿಯಲ್ಲಿ ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಅಕ್ಷರಶಃ ಸ್ಫೋಟ ಕಂಡುಬಂದಿದೆ. ಹದಿನೈದು ಮಕ್ಕಳೂ ಸೇರಿದಂತೆ ಇಂದು ಒಂದೇ ದಿನ 25 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

Recommended Video

      ಜನ್ಮ ಕೊಟ್ಟವಳಿಗೆ ಕೊರೊನಾ ಸೋಂಕು ಆದ್ರೆ ಹುಟ್ಟಿದ ಮಗುವಿಗೆ ಸೋಂಕಿಲ್ಲ! | Vijaypura | karnataka

      ಕಳೆದೆರಡು ದಿನಗಳಿಂದ ಹತ್ತು ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದರೆ, ಇಂದು ಏಕಾಏಕಿ 25 ವ್ಯಕ್ತಿಗಳಿಗೆ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ.

      25 People Including 15 Children Reported Coronavirus Positive In Udupi District Today

      ಉಡುಪಿಯಲ್ಲಿ ಇಂದು ಮತ್ತೆ ಆರು ಕೊರೊನಾ ಕೇಸ್ ಪತ್ತೆ
      ಇವರೆಲ್ಲ ಹೊರರಾಜ್ಯಗಳಿಂದ ಉಡುಪಿಗೆ ಆಗಮಿಸಿ ಕ್ವಾರಂಟೈನ್ ನಲ್ಲಿದ್ದವರಾಗಿದ್ದಾರೆ. ಮುಂಬೈನಿಂದ ಬಂದಿದ್ದ 21 ಮಂದಿಯಲ್ಲಿ, ತೆಲಂಗಾಣದಿಂದ ಬಂದಿದ್ದ 3 ಮಂದಿಯಲ್ಲಿ ಹಾಗೂ ಕೇರಳದಿಂದ ಬಂದಿದ್ದ ಒಬ್ಬರಲ್ಲಿ ಕೊರೊನಾ ಇರುವುದು ಇಂದು ದೃಢಪಟ್ಟಿದೆ.

      ಇವರನ್ನೆಲ್ಲ ಜಿಲ್ಲಾಡಳಿತ ಕ್ವಾರಂಟೈನ್ ಕೇಂದ್ರದಿಂದ ನೇರ ಟಿ.ಎ.ಪೈ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡುತ್ತಿದೆ. ಇಂದು ಒಂದೇ ದಿನ ಒಂಬೈನೂರಕ್ಕೂ ಅಧಿಕ ಜನರ ವರದಿಗಳು ಬರುವ ನಿರೀಕ್ಷೆಯಿತ್ತು. ಆದರೆ 199 ವರದಿಗಳು ಕೈಸೇರಿವೆ. ಉಳಿದವು ನಾಳೆ ನಾಡಿದ್ದರಲ್ಲಿ ಬರಲಿದ್ದು, ಸೋಂಕಿತರ ಸಂಖ್ಯೆ ಹೆಚ್ಚುವ ಆತಂಕ ಮನೆ ಮಾಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+