ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪಡೆದ ಗುರುರಾಜ್ ಗೆ 25 ಲಕ್ಷ ನಗದು
ಉಡುಪಿ, ಏಪ್ರಿಲ್ 5 : ಆಸ್ಟ್ರೇಲಿಯಾದ ಗೋಲ್ಡ್ ಸ್ಟೈನ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿರುವ ಗುರುರಾಜ್ ಪೂಜಾರಿ ಬಗ್ಗೆ ಉಡುಪಿಯಲ್ಲಿ ಭಾರೀ ಸಂತಸ ಮತ್ತು ಹೆಮ್ಮೆ ವ್ಯಕ್ತವಾಗುತ್ತಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮದವರು ಗುರುರಾಜ್. ಕರಾವಳಿ ಭಾಗದ ಈ ಯುವ ಪ್ರತಿಭೆ ಭಾರತಕ್ಕೆ ಪದಕ ತಂದಿರುವುದು ನಾಡಿನೆಲ್ಲೆಡೆ ಸಂಭ್ರಮ ಮೂಡಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಗುರುರಾಜ್ ಪೂಜಾರಿಗೆ ರಾಜ್ಯ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.

ವೇಟ್ ಲಿಫ್ಟಿಂಗ್ ನಲ್ಲಿ ಗುರುರಾಜ್ ಬೆಳ್ಳಿ ಪದಕ ಗಳಿಸಿರುವುದರಿಂದ ರಾಷ್ಟ್ರ ಮಟ್ಟದಲ್ಲಿ ಉಡುಪಿ ಜಿಲ್ಲೆಯನ್ನು ಗುರುತಿಸುವಂತೆ ಆಗಿದೆ. ಈ ಬಾರಿಯ ಕ್ರೀಡಾ ಕೂಟದಲ್ಲಿ ನಮ್ಮ ದೇಶಕ್ಕೆ ಮೊದಲ ಪದಕವನ್ನು ಗುರುರಾಜ್ ಪಡೆದಿದ್ದಾರೆ. ನನ್ನ ಕೈಯಿಂದಲೇ ಗುರುರಾಜ್ ಏಕಲವ್ಯ ಪ್ರಶಸ್ತಿ ಪಡೆದಿದ್ದರು ಎಂದರು.
ಗುರುರಾಜ್ ಗೆ ನೇರವಾಗಿ ಗ್ರೂಪ್ ಬಿ ಹುದ್ದೆ ದೊರಕುತ್ತದೆ. ರಾಜ್ಯ ಸರಕಾರದಿಂದ 25 ಲಕ್ಷ ನಗದು ನೀಡಲಾಗುವುದು. ಸರಕಾರದ ಆದೇಶದಂತೆ, ನಿಗದಿಪಡಿಸಿದಂತೆ ಈ ಗೌರವ ನೀಡಲಿದ್ದೇವೆ ಎಂದು ಸಚಿವರು ಹೇಳಿದರು.












Click it and Unblock the Notifications