ಕುಂದಾಪುರದ ವಂಡ್ಸೆ ಚಕ್ರ ನದಿಗೆ ಹಾರಿ ಯುವತಿ ಆತ್ಮಹತ್ಯೆ
ಕುಂದಾಪುರ, ಫೆಬ್ರವರಿ 27 : ಯುವತಿಯೋರ್ವೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಂಡ್ಸೆ ಬಳಿ ನಡೆದಿದೆ.
24 ವರ್ಷದ ಸುಪ್ರೀತಾ ಪೂಜಾರಿ ಸೋಮವಾರ ಮುಂಜಾನೆ 3 ಘಂಟೆಗೆ ವಂಡ್ಸೆ ಚಕ್ರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಾನಸಿಕ ಒತ್ತಡದಿಂದ ಈಕೆ ಆತ್ಮಹತ್ಯೆ ಮಾಡಿರಬಹುದೆಂದು ಶಂಕಿಸಲಾಗಿದೆ. ಈ ಹಿಂದೆ ಈಕೆ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು ಎನ್ನಲಾಗಿದೆ.












Click it and Unblock the Notifications