• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿಯಲ್ಲಿ ಭಾರೀ ಗಾಳಿ ಮಳೆ: ಸಿಡಿಲಿಗೆ ಯುವಕ ಬಲಿ

By ಉಡುಪಿ ಪ್ರತಿನಿಧಿ
|

ಉಡುಪಿ, ಮೇ 18: ಉಡುಪಿ ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದೆ. ಸಿಡಿಲು, ಗಾಳಿಯಿಂದ ಕೂಡಿದ ಮಳೆಗೆ ಹಲವೆಡೆ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ನಿನ್ನೆ ರಾತ್ರಿ ಕಾಪು ತಾಲೂಕಿನ ಕಟಪಾಡಿ ಏಣಗುಡ್ಡೆಯಲ್ಲಿ ಯುವಕನೊಬ್ಬ ಸಿಡಿಲಿನ ಆಘಾತದಿಂದಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಕಟಪಾಡಿ ಜೆ.ಎನ್. ನಗರ ಪಡು ಏಣಗುಡ್ಡೆ ನಿವಾಸಿ ಭರತ್ (22) ಮೃತ ದುರ್ದೈವಿ. ನಿನ್ನೆ ರಾತ್ರಿ ಸಿಡಿಲು ಸಹಿತ ಮಳೆ ಬರುವಾಗ ಮನೆಯೊಳಗೆ ಕುಳಿತಿದ್ದ ಈ ಯುವಕನಿಗೆ ಸಿಡಿಲು ಬಡಿದಿದೆ. ತಕ್ಷಣವೇ ಯುವಕ ಕುಸಿದು ಬಿದ್ದಿದ್ದಾನೆ.

ಅಂಫಾನ್ ಚಂಡಮಾರುತ; 24 ಗಂಟೆ ಭಾರಿ ಮಳೆ ಮುನ್ಸೂಚನೆ

ಆಘಾತಗೊಂಡ ಭರತ್ ನನ್ನು ಮನೆಯವರು ತಕ್ಷಣವೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಈ ಯುವಕ ಆಸ್ಪತ್ರೆಯಲ್ಲಿ‌ ಕೊನೆಯುಸಿರೆಳೆದಿದ್ದಾನೆ.

ಕಾಪು ಠಾಣೆಯ ಠಾಣಾಧಿಕಾರಿ ರಾಜ್ ಶೇಖರ್ ಸಾಗನೂರ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡರು. ಜಿಲ್ಲೆಯ ಹಲವೆಡೆ ಇಂದೂ ಭಾರಿ ಗಾಳಿ ಮಳೆಯಾಗುವ ಮುನ್ಸೂಚನೆ ಇದೆ.

English summary
Heavy rain reported yesterday night in udupi, youth died due to thunderstorm in katapadi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X