• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಗೆ ನೀಡಿರುವ ಖಾತೆ ಬಗ್ಗೆ ಸಚಿವ ಮಾಧುಸ್ವಾಮಿ ಏನು ಹೇಳಿದ್ರು?

|

ತುಮಕೂರು, ಆಗಸ್ಟ್ 30: ನನಗೆ ನೀಡಿರುವ ಖಾತೆ ನನಗೆ ತೃಪ್ತಿದಾಯಕವಾಗಿದೆ. ಕಾನೂನು ಖಾತೆ ಜೊತೆಗೆ ಸಣ್ಣ ನೀರಾವರಿ ಖಾತೆ ಕೂಡ ನೀಡಿರುವುದರಿಂದ ನನಗೆ ಸಮಾಧಾನವಾಗಿದೆ ಎಂದು ಸಚಿವ ಸಿಎಸ್ ಮಾಧುಸ್ವಾಮಿ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೇವಲ ಕಾನೂನು ಖಾತೆ ಮಾತ್ರ ನೀಡಿದ್ದರೆ ನನಗೆ ನೋವಾಗುತ್ತಿತ್ತು ಆದರೆ ಜೊತೆಗೆ ಸಣ್ಣ ನೀರಾವರಿ ಖಾತೆಯನ್ನೂ ನೀಡಿದ್ದಾರೆ ಹಾಗಾಗಿ ತೃಪ್ತಿ ಇದೆ ಎಂದರು.

'ಮುಖ್ಯಮಂತ್ರಿ'ಯಾಗಿ ಪ್ರಮಾಣವಚನ: ಮಾಧುಸ್ವಾಮಿ ಯಡವಟ್ಟು

ಸಣ್ಣ ನೀರಾವರಿ ಖಾತೆ ಕೊಟ್ಟಿರುವ ಕಾರಣ ಕೃಷಿಗೆ ಸಂಬಂಧಿಸಿದಂತೆ ಸಾಕಷ್ಟು ಕೆಲಸಗಳನ್ನು ಮಾಡಲು ಅವಕಾಶ ನಿಗಲಿದೆ. ಕೆರೆಕಟ್ಟೆಗಳಿಗೆ ನೀರು ಹರಿಸುವ ಕೆಲಸವನ್ನೂ ಮಾಡಬಹುದು.

ಸಚಿವಸ್ಥಾನ ಎನ್ನುವುದು ನಾಟಕದಲ್ಲಿನ ರಾಜನ ಪಾತ್ರ ಇದ್ದಹಾಗೆ. ನಾಟಕದಲ್ಲಿ ಮಹಾಪ್ರಭು ಎನ್ನುತ್ತಾರೆ. ಪಾತ್ರ ಮುಗಿದ ಬಳಿಕ ಯಾರೂ ಪಾತ್ರದ ವ್ಯಕ್ತಿಗೆ ಬೆಲೆ ಕೊಟ್ಟು ಪ್ರಭು ಅನ್ನೋದಿಲ್ಲ. ನಾಟಕದ ರಾಜನಪಾತ್ರಕ್ಕೆ ಹೆಚ್ಚಿಗೆ ಬೆಲೆ ಕೊಡಬೇಡಿ. ಅವು ಯಾವಾಗ ಬರುತ್ತೊ ಯಾವಾಗಾ ಹೋಗುತ್ತೋ ಗೊತ್ತಿಲ್ಲ ಎಂದು ಹೇಳಿದರು.

ಶಾಸಕನಾಗಿ 30 ವರ್ಷ ಆಯಿತು. ಆದರೂ ನನಗೆ ಸಚಿವನಾಗಬೇಕು ಅನ್ನಿಸಿರಲಿಲ್ಲ. ಜನ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರಲ್ವ ಸಾಕು ಅಂತ ಊರಲ್ಲಿ ಆರಾಮಾಗಿದ್ದೆ. ನಿನ್ನೆನೂ ನಾಯಕರೊಬ್ಬರು ಎಲ್ಲಿದ್ದೀಯಾ ಎಂದು ಕೇಳಿದ್ರೆ. ಆಗ ನಾನು ಊರಲ್ಲಿ ಅಂದೆ. ಮಂತ್ರಿ ಆಗಿದ್ದಿ ಮಾರಾಯ ಎಂದು ಅವರು ಹೇಳಿದ್ರು. ಆಗ ನಾನು ಏನು ಮಾಡೋದು ನನ್ನ ಕ್ಷೇತ್ರ ಬಿಡೋಕಾಗುತ್ತೆ ಎಂದು ಉತ್ತರಿಸಿದೆ ಎಂದರು.

English summary
Minister Madhuswamy Said that The Portfolio has given to me is satisfactory to me. He said that I am satisfied with the portfolio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X