ದೇಶಕ್ಕೆ ಆಸ್ತಿ ನೀಡಿದ ಪಾವಗಡ ರೈತರ ತ್ಯಾಗ ಸ್ಮರಣೀಯ: ಡಿಕೆಶಿ

ತಿರುಮಣಿ (ಪಾವಗಡ), ಮಾರ್ಚ್ 2: ಪಾವಗಡದ ರೈತರು ಈ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಈ ದೇಶಕ್ಕೊಂದು ಆಸ್ತಿ ನೀಡಿದ್ದಾರೆ. ಇಂಥ ದೊಡ್ಡ ಯೋಜನೆ ಸಾಕಾರ ಆಗುವುದಕ್ಕೆ ಸಹಕರಿಸಿದ ಇಲ್ಲಿನ ರೈತರಿಗೆ ಕೃತಜ್ಞತೆ ಹೇಳ್ತೀನಿ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಪಾವಗಡ ತಾಲೂಕು ತಿರುಮಣಿಯಲ್ಲಿ ಸೋಲಾರ್ ಪಾರ್ಕ್ ನ ಮೊದಲ ಹಂತದ ಉತ್ಪಾದನೆಯಾದ ಆರು ನೂರು ಮೆಗಾವಾಟ್ ಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ನಮ್ಮ ಸಾಧನೆ ಬಗ್ಗೆ ಕೇಂದ್ರ ಸರಕಾರ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಹೇಳಿದರು.

ಇದು 14 ಸಾವಿರ ಕೋಟಿ ರುಪಾಯಿಯ ಯೋಜನೆ. ಇದಕ್ಕಾಗಿ ಕೇಂದ್ರ ಸರಕಾರದಿಂದಲೂ ಹಣ ಬಂದಿದೆ. ಆದ್ದರಿಂದ ನಾವು ಅದನ್ನು ಸ್ಮರಿಸಬೇಕು. ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ಸ್ವಾವಲಂಬನೆ ಸಾಧಿಸಲಿದೆ. ಕೈಗಾರಿಕೆಗಳಿಗೆ, ಜನರಿಗೆ ವಿದ್ಯುತ್ ಪೂರೈಕೆಗೆ ಏನೂ ಸಮಸ್ಯೆ ಆಗುವುದಿಲ್ಲ ಎಂದರು.

We should praise the sacrifice of Pavagada farmers: DK Shivakumar

ಅಂಕಿ- ಅಂಶಗಳ ಸಮೇತ ಇಂಧನ ಇಲಾಖೆಯ ಸಾಧನೆಯನ್ನು ಸಭೆಯ ಮುಂದಿಟ್ಟ ಅವರು, ಇಂಥ ಬ್ಠಹತ್ ಯೋಜನೆಗಳ ಸಾಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರ ಬಹಳ ಮುಖ್ಯ. ಪಾವಗಡ ಪ್ರವಾಸಿ ತಾಣವಾಗಿಯೂ ಅಭಿವೃದ್ಧಿ ಆಗಬೇಕು. ಇದಕ್ಕಾಗಿ ಎಲ್ಲ ಪ್ರಯತ್ನ ಮಾಡಲಾಗುವುದು ಎಂದರು.

ಸಚಿವ ಟಿ.ಬಿ.ಜಯಚಂದ್ರ, ಶಾಸಕ ತಿಮ್ಮರಾಯಪ್ಪ, ಉಗ್ರಪ್ಪ, ಸೋಲಾರ್ ಪಾರ್ಕ್ ನ ರಾಜಕುಮಾರ್ ಸಿಂಗ್ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದ ಪುಸ್ತಕವೊಂದನ್ನು ಬಿಡುಗಡೆ ಮಾಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+