ಓವರ್‌ಟ್ಯಾಂಕ್ ಏರಿ ವಾಟರ್ ಮ್ಯಾನ್ ಅನುಮಾನಾಸ್ಪದ ಸಾವು: ಗೃಹ ಸಚಿವರು ಹೇಳೋದೇನು?
ತುಮಕೂರು, ಏಪ್ರಿಲ್ 26: ಜಿಲ್ಲೆಯ ವ್ಯಾಪ್ತಿಯಲ್ಲಿನ ವಾಟರ್‌ಮ್ಯಾನ್ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ವಾಟರ್‌ಮ್ಯಾನ್ ಚಂದ್ರಪ್ಪ (56) ವಾಟರ್ ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಮತ್ತೊಂದೆಡೆ ಅವರ ಕುಟುಂಬಸ್ಥರು ಇದು ಕೊಲೆ ಎಂದು ಆರೋಪಿಸಿದ್ದು, ಇದು ರಾಜಕೀಯ ತಿರುವು ಪಡೆಯುತ್ತಿದೆ. ಈ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ತುಮಕೂರು ಎಸ್ ಪಿ ಅಶೋಕ್ ಕೆವಿ ಪ್ರತಿಕ್ರಿಯಿಸಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಕಿಚ್ಚೇವಾಡಿ ಗ್ರಾಮದಲ್ಲಿ ವಾಟರ್ ಮ್ಯಾನ್ ಚಂದ್ರಪ್ಪ (56) ಮೃತಪಟ್ಟಿದ್ದಾರೆ. ಇವರ ಶವ ಗುರುವಾರ ರಾತ್ರಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಸ್ಥಳಕ್ಕೆ ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ಬಳಿಕ ಮೃತದೇಹವನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.

ವಾಟರ್ ಮ್ಯಾನ್ ಚಂದ್ರಪ್ಪ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮೃತ ಚಂದ್ರಪ್ಪ ಅವರು, ಮದ್ಯ ವ್ಯಸನಿಯಾಗಿದ್ದು, ಪ್ರತಿ ದಿನ ಕುಡಿದು ಗಲಾಟೆ ಮಾಡುತ್ತಿದ್ದರು. ಕುಟುಂಬದೊಂದಿಗೆ ಜಗಳವಾಡಿದ್ದರು. ಇದೇ ಕಾರಣಕ್ಕಾಗಿಯೇ ಮನನೊಂದು ಕಳೆದ ರಾತ್ರಿ ಓವರ್ ಟ್ಯಾಂಕ್ ಹತ್ತಿ ಆತ್ಮಹತ್ಯೆ ಯತ್ನಸಿದ್ದರು ಎಂದು ತಿಳಿದು ಬಂದಿದೆ.
ಚಂದ್ರಪ್ಪನ ರಕ್ಷಣೆಗೆ ಮುಂದಾದರೂ ಪ್ರಯೋಜವಾಗಿಲ್ಲ
ಆತ್ಮಹತ್ಯೆ ವೇಳೆ ಕುಟುಂಬಸ್ಥರು, ಗ್ರಾಮಸ್ಥರು ಮನವೊಲಿಕೆ ಯತ್ನಿಸಿದರೂ ವಿಫಲವಾಗಿದರು. ಬಳಿಕ ಹುಲಿಯೂರು ದುರ್ಗ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಚಂದ್ರಪ್ಪನ ಮನವೊಲಿಕೆಗೆ ಯತ್ನಸಿದ್ರು.

ಟ್ಯಾಂಕ್ ಹತ್ತಿ ರಕ್ಷಣೆ ಮಾಡಲು ಮುಂದಾದರು.
ಆದರೆ ಚಂದ್ರಪ್ಪ ಅವರು ಕೈಯಲ್ಲಿದ್ದ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡರು. ಪೊಲೀಸರು ಕೂಡಲೇ ಆತನನ್ನ ಕೆಳಗಿಳಿಸಿ ಆಸ್ಪತ್ರೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ದಾರಿ ಮಧ್ಯೆಯೇ ಅವರು ಸಾವಿಗೀಡಾದರು. ಸ್ಥಳಕ್ಕೆ ಖುದ್ದು ಭೇಟಿ ನೀಡಿರುವ ತುಮಕೂರು ಎಸ್‌ಪಿ ಅಶೋಕ್ ಕೆ.ವಿ. ಅವರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಗೃಹ ಸಚಿವರು ಹೇಳೋದೇನು?
ವಾಟರ್‌ಮ್ಯಾನ್ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, ಯಾವುದೇ ಕೊಲೆ, ಆತ್ಮಹತ್ಯೆಯಂತಹ ಘಟನೆಗಳು ನಡೆದರೆ ಅದರ ತನಿಖೆ ನಡೆಯಬೇಕು. ಸಾರ್ವಜನಿಕರು ದಯಮಾಡಿ ಇಂತಹ ಘಟನೆಗಳು ಆದಾಗ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಬಿಟ್ಟು ಬಿಡಿ, ತನಿಖೆಯಿಂದ ಸತ್ಯ ತಿಳಿಯಲಿದೆ ಎಂದು ಅವರು ಹೇಳಿದರು.
ದೂರು ನೀಡದ ಕುಟುಂಬಸ್ಥರು: ಎಸ್‌ಪಿ ಅಶೋಕ್
ಚುನಾವಣೆ ವಿಚಾರದಲ್ಲಿ ಗಲಾಟೆ ನಡೆದಿಲ್ಲ ಎಂದು ಈ ಸಾವಿನ ಕುರಿತು ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಮಾಹಿತಿ ನೀಡಿದ್ದಾರೆ. ಹುಲಿಯೂರು ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆದರೆ ಈವರೆಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಚಂದ್ರಪ್ಪನ ಸಾವಿನ ಕುರಿತು ಕುಟುಂಬಸ್ಥರು, ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆ ನಡೆಸಿದ್ದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಎಂದು ಹೇಳುತ್ತಿದ್ದಾರೆ.












Click it and Unblock the Notifications