ತುಮಕೂರು ನಗರ ಬಿಜೆಪಿ ಟಿಕೆಟ್ ಶೀಘ್ರ ಪ್ರಕಟಿಸಲು ಬಿಎಸ್‌ವೈಗೆ ಮನವಿ

ತುಮಕೂರು, ಮಾರ್ಚ್ 20: ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಶೀಘ್ರವಾಗಿ ಘೋಷಿಸುವಂತೆ ಒತ್ತಾಯಿಸಿ ತುಮಕೂರು ನಗರ ವೀರಶೈವ ಸಮಾಜದ ಮುಖಂಡರ ನಿಯೋಗ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿತು.

ತುಮಕೂರಿನಲ್ಲಿ ಬಿಜೆಪಿ ಯಾರಿಗೂ ಖಚಿತವಾಗದೆ ಕಾರ್ಯಕರ್ತರಲ್ಲಿ ಗೊಂದಲ ಏರ್ಪಟ್ಟಿರುವ ಕಾರಣ, ಬೆಂಗಳೂರಿನಲ್ಲಿ ಮಂಗಳವಾರ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ವೀರಶೈವ ಸಮಾಜದ ಮುಖಂಡರು ಆದಷ್ಟು ಬೇಗ ಸಮರ್ಥ ಮತ್ತು ಈಗ ಕ್ಷೇತ್ರದಲ್ಲಿ ನಿರ್ಮಾಣವಾಗಿರುವ ಗೊಂದಲವನ್ನು ನಿವಾರಿಸುವ ಶಕ್ತಿ, ಜಾಣ್ಮೆಯುಳ್ಳ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದರು.

ತುಮಕೂರಿನಲ್ಲಿ ಪ್ರಸ್ತುತ ಬಿಜೆಪಿಯ ಟಿಕೆಟ್‌ ಬಗ್ಗೆ ಭಾರಿ ಚರ್ಚೆ ಮತ್ತು ಗೊಂದಲ ಏರ್ಪಟ್ಟಿದ್ದು, ಟಿಕೆಟ್‌ಗಾಗಿ ಹಲವು ಅಭ್ಯರ್ಥಿಗಳು ಪ್ರಯತ್ನಿಸುತ್ತಿದ್ದಾರೆ, ಹೀಗಾಗಿ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ ಎಂದು ವೀರಶೈವ ಮುಖಂಡರು ಬಿಎಸ್‌ವೈ ಅವರಿಗೆ ಮನವರಿಕೆ ಮಾಡಿಕೊಟ್ಟರು.

Veerashaiva leaders demand to announce Tumkur urban ticket urgently

ತುಮಕೂರು ನಗರ ವೀರಶೈವ ಸಮಾಜದ ಅಧ್ಯಕ್ಷರಾದ ಟಿ.ಬಿ ಶೇಕರ್. ಉಪಾಧ್ಯಕ್ಷ ಚಂದ್ರಮೌಳಿ.ವೀರಶೈವ ಸಮಾಜದ ಮುಖಂಡರಾದ ಹೆಬ್ಬಾಕ ಮಲ್ಲಿಕಾರ್ಜುನ್.ಕೋರಿ ಮಂಜಣ್ಣ.ಕಲ್ಯಾಣ್ ಕುಮಾರ್ .ಕೆಜೆ ರುದ್ರಪ್ಪ.ಏಕಾಂತ್ ಇತರರು ಈ ವೇಳೆ ಉಪಸ್ತಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+