Amit Shah Visit to Siddaganga Mutt : ಸಿದ್ದಗಂಗಾ ಮಠದಲ್ಲಿ ಅಮಿತ್ ಶಾ: ಅಪ್‌ಡೇಟ್ಸ್
ತುಮಕೂರು, ಏಪ್ರಿಲ್ 01: ಇಂದು (ಏಪ್ರಿಲ್ 01) ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿದ್ಧಲಿಂಗಾ ಮಠಕ್ಕೆ ಭೇಟಿ ನೀಡಲಿದ್ದು, ಸಿದ್ಧಲಿಂಗಾ ಮಠವು ಅಮಿತ್ ಶಾ ಸ್ವಾಗತಕ್ಕೆ ಸಜ್ಜಾಗಿದೆ. ನಡೆದಾಡುವ ದೇವರ ಜನ್ಮ ದಿನೋತ್ಸವದ ಹಿನ್ನೆಲೆ ಮಠದಲ್ಲಿ ಹಬ್ಬದ ವಾತಾವರಣ ನೆಲೆಯಾಗಿದೆ.
ನಡೆದಾಡುವ ದೇವರ 115 ನೇ ಜನ್ಮ ದಿನೋತ್ಸವದ ಹಿನ್ನೆಲೆ ತುಮಕೂರಿನಲ್ಲಿ ಹಬ್ಬದ ವಾತಾವರಣ ನೆಲೆನಿಂತಿದೆ. ಭಕ್ತಾದಿಗಳು ಶ್ರೀಗಳ ಹುಟ್ಟುಹಬ್ಬದ ತಯಾರಿ ನಡೆಸಿದ್ದಾರೆ. ಜೊತೆಗೆ ಅಮಿತ್ ಶಾ ಸ್ವಾಗತಕ್ಕೆ ಸಿದ್ಧತೆಯನ್ನು ಮಾಡಿದ್ದಾರೆ. ಶ್ರೀಗಳಿಗೆ ಇಂದು ನಾಲ್ಕು ಲಕ್ಷ ಜನರು ನುಡಿನಮನ ಸಲ್ಲಿಸಲಿದ್ದಾರೆ.
ಇಂದು ಮುಂಜಾನೆಯೇ ಶ್ರೀಮಠದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಿದೆ. ಮುಂಜಾನೆಯೇ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಪುಷ್ಪ ವೃಷ್ಟಿ ಮತ್ತು ಅರ್ಚಕರಿಂದ ಮಂತ್ರ ಪಠಣ ಕಾರ್ಯಗಳು ನಡೆದಿದೆ. ಇನ್ನು ಸಾವಿರಾರು ಮಂದಿಗೆ ಭೋಜನದ ವ್ಯವಸ್ಥೆಯನ್ನು ಕೂಡಾ ಮಠದಲ್ಲಿ ಮಾಡಲಾಗಿದೆ. ಇದಕ್ಕಾಗಿ ಮಠದಲ್ಲಿರುವ ವಿದ್ಯಾರ್ಥಿಗಳು ಕೂಡಾ ಕೈಜೋಡಿಸಿದ್ದಾರೆ.

ಇಂದು ಸುಮಾರು 1.5 ರಿಂದ 2 ಲಕ್ಷ ಭಕ್ತಾಧಿಗಳು ಬರುವ ನಿರೀಕ್ಷೆ ಇದ್ದು, ಭಕ್ತಾದಿಗಳಿಗೆ ಎಂಟು ಕಡೆಗಳಲ್ಲಿ ಊಟ, ತಿಂಡಿಯ ವ್ಯವಸ್ಥೆ ಮಾಡಿಸಲಾಗಿದೆ. ಉಪ್ಪಿಟ್ಟು, ಕೇಸರಿಬಾತ್, ಬೋಂದಿ ಪಾಯಸ, ಅನ್ನಸಾಂಬಾರ್, ವಿವಿಧ ಖಾದ್ಯಗಳನ್ನು ಮಠದಲ್ಲಿ ತಯಾರು ಮಾಡಲಾಗಿದೆ. ಗುರುವಂದನಾ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಭಕ್ತರಿಗೂ ಭೋಜನದ ವ್ಯವಸ್ಥೆ ಮಾಡಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತುಮಕೂರು ಹೆಲಿಪ್ಯಾಡ್ ನಲ್ಲಿ ಸ್ವಾಗತಿಸಲಾಯಿತು.@AmitShah #Tumkur @BJP4Karnataka pic.twitter.com/8oEUBAKk3T
— oneindiakannada (@OneindiaKannada) April 1, 2022
ಸಿದ್ದಗಂಗಾ ಮಠದ ಆವರಣದಲ್ಲಿರುವ ಹಳೇ ಊಟದ ಮನೆ, ಹೊಸ ಊಟದ ಮನೆ, ಕೆಂಪಹೊನ್ನಯ್ಯ ಅತಿಥಿ ಗೃಹ, ಪ್ರಾರ್ಥನಾ ಮಂದಿರ, ಸಿದ್ದಾರ್ಥ ಅತಿಥಿ ಗೃಹ, ಸೌದೆ ಕೊಪ್ಪಲು, ಉದ್ದಾನೇಶ್ವರ ಊಟದ ಮನೆ, ವಸ್ತು ಪ್ರದರ್ಶನದ ಊಟದ ಮನೆಗಳಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟದ ವ್ಯವಸ್ಥೆಯನ್ನು ಭಕ್ತರಿಗೆ ಏರ್ಪಡಿಸಲಾಗಿದೆ.
Koo Appತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಆಯೋಜಿಸಿರುವ ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ ಡಾ: ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ “115ನೇ ಜಯಂತೋತ್ಸವ ಹಾಗೂ ಗುರುವಂದನಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರದ ಗೃಹ ಹಾಗೂ ಸಹಕಾರ ಸಚಿವ #AmitShah ಹಾಗೂ ಇತರರೊಂದಿಗೆ ಪಾಲ್ಗೊಂಡು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದೆನು. - Basavaraj Bommai (@bsbommai) 1 Apr 2022
ಅರಮನೆ ಮೈದಾನದಲ್ಲಿ ಸಹಕಾರ ಕಾರ್ಯಕ್ರಮ
ಇನ್ನು ಅರಮನೆ ಮೈದಾನದಲ್ಲಿ ಸಹಕಾರ ಕಾರ್ಯಕ್ರಮ ನಡೆಯುತ್ತಿದ್ದು, ಇದರಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಸಹಕಾರ ಇಲಾಖೆಯು ಶುಕ್ರವಾರ ಅರಮನೆ ಮೈದಾನದಲ್ಲಿ(Palace Ground) ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಭಾರೀ ಸಂಖ್ಯೆಯಲ್ಲಿ ಗಣ್ಯರು, ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದೆ.
ಅಮಿತ್ ಶಾ ಭೇಟಿ: ಅಪ್‌ಡೇಟ್ಸ್
* ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ತಲುಪಿದ್ದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ತುಮಕೂರಿಗೆ ತಲುಪಲಿದ್ದಾರೆ.
* ಮುಖ್ಯಮಂತ್ರಿ ಬೊಮ್ಮಾಯಿ, ಅಮಿತ್ ಶಾರ ಜೊತೆಯಾಗಿದ್ದಾರೆ
* ಈ ಕಾರ್ಯಕ್ರಮದಿಂದ ಹುರುಪು ಹೆಚ್ಚಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
* ಅರಮನೆ ಮೈದಾನ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಾಧ್ಯತೆ ಇದೆ.
* ಪ್ರಧಾನಿ ಮೋದಿ, ಅಮಿತ್ ಶಾ ವೇಷದಲ್ಲಿ ಕಾಣಿಸಿಕೊಂಡ ಪುಟಾಣಿಗಳು
* ತುಮಕೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಅಮಿತ್ ಶಾ
* ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡಾ ಅಮಿತ್ ಶಾ ಜೊತೆ ಆಗಮಿಸಿದ್ದಾರೆ.
* ಕೇಂದ್ರ ಸಚಿವರನ್ನು ಬರಮಾಡಿಕೊಂಡ ಆರಗ ಜ್ಞಾನೇಂದ್ರ
* ತುಮಕೂರಿನಲ್ಲಿ ಅಮಿತ್ ಶಾಗೆ ಅದ್ದೂರಿ ಸ್ವಾಗತ
* ಹೆಲಿಕಾಪ್ಟರ್‌ನಿಂದ ಇಳಿದು ರಸ್ತೆ ಮಾರ್ಗದಲ್ಲಿ ಸಿದ್ಧಗಂಗಾ ಮಠದತ್ತ ಅಮಿತ್ ಶಾ
* ಸಿದ್ಧಗಂಗಾ ಮಠಕ್ಕೆ ತಲುಪಿದ ಅಮಿತ್ ಶಾ
* ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗೆ ಭಾರತರತ್ನ ನೀಡುವಂತೆ ನ್ಯಾಯಾಲಯದಲ್ಲಿ ಅರ್ಜಿ
* ಪ್ರಧಾನಮಂತ್ರಿಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್
* ಭಾರತರತ್ನ ನೀಡುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದ ಕರ್ನಾಟಕ ಹೈಕೋರ್ಟ್
* ರಾಷ್ಟ್ರಪತಿ ಗಳು ಸರಕಾರದೊಂದಿಗೆ ಚರ್ಚಿಸಿ ನಿರ್ಧರಿಸುತ್ತಾರೆ: ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ
* ಅಮಿತ್ ಶಾರಿಂದ ಶ್ರೀಗಳ ಗದ್ದುಗೆ ದರ್ಶನ
* ದೀಪಾ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಅಮಿತ್ ಶಾ ಚಾಲನೆ
* ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯೇಂದ್ರ
* ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ
* ಶಿವಕುಮಾರ ಸ್ವಾಮೀಜಿಯವರು ಬದುಕನ್ನು ಕಟ್ಟಿಕೊಟ್ಟಿರುವವರು: ಮುಖ್ಯಮಂತ್ರಿ ಬೊಮ್ಮಾಯಿ
* ಫಾರ್ಮಸಿ ಕಾಲೇಜಿನ ಕಟ್ಟದ ಉದ್ಘಾಟನೆ ಮಾಡಿದ ಪ್ರಹ್ಲಾದ್ ಜೋಶಿ
* ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರು
* ಸಿದ್ದಗಂಗಾ ಮಠದಲ್ಲಿ ಗುರುವಂದನಾ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿಯಿಂದ ಘೋಷಣೆ
* ಡಾ ಶಿವಕುಮಾರ ಸ್ವಾಮಿಗಳ 115ನೇ ಜನ್ಮದಿನಾಚರಣೆ, ನುಡಿ ನಮನ ಸಲ್ಲಿಸಿದ ಬೊಮ್ಮಾಯಿ
* ಶ್ರೀಗಳ ಹುಟ್ಟುಹಬ್ಬದ ಅಂಗವಾಗಿ ನಡೆದಾಡೋ ದೇವರ ಬಸವ ಭಾರತ ಕಾರ್ಯಕ್ರಮ ಆಯೋಜನೆ
* ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಉಪಸ್ಥಿತಿ
* ಯುಗಾದಿ ಹಬ್ಬದ ಶುಭಾಶಯ ಕೋರಿದ ಮಾಜಿ ಸಿಎಂ ಬಿಎಸ್‌ವೈ
* ವಿಶ್ವಕ್ಕೆ ಶಾಂತಿ, ಸೌಹಾರ್ಧ ಸಂದೇಶ ನೀಡಿದವರು ಲಿಂಗೈಕ ಶ್ರೀಗಳು: ಯಡಿಯೂರಪ್ಪ
* ದಣಿವರಿಯದ ಲಿಂಗೈಕ ಶಿವಕುಮಾರ ಶ್ರೀಗಳ ದಾಸೋಹ: ಬಿಎಸ್‌ವೈ
* ಅಮಿತ್ ಶಾ, ಮೋದಿಯನ್ನು ಹಾಡಿಹೊಗಳಿದ ಬಿಎಸ್‌ವೈ
* ಶಿವಕುಮಾರ ಸ್ವಾಮೀಜಿಯವರ ಜೀವನದ ಪಠ್ಯ ಅಳವಡಿಕೆಗೆ ಸಿಎಂ ಬೊಮ್ಮಾಯಿಗೆ ಬಿಎಸ್‌ವೈ ಮನವಿ
* ಇದು ಶಿಳ್ಳೆ ಹಾಕುವ ಸಮಾವೇಶವಲ್ಲ ಎಂದು ಶಿಳ್ಳೆ ಹಾಕಿದ ಸಭಿಕರಿಗೆ ಹೇಳಿದ ಸಿದ್ಧಲಿಂಗ ಮಹಾಸ್ವಾಮಿಗಳು
* ಇದು ಭಕ್ತಿಯ ಸಮಾವೇಶ ಎಂದ ಸಿದ್ಧಲಿಂಗ ಮಹಾಸ್ವಾಮಿಗಳು
* ಜೀವನದಲ್ಲಿ ಮೂರನೇ ಬಾರಿ ಸಿದ್ದಗಂಗಾ ಮಠಕ್ಕೆ ಬಂದಿದ್ದೇನೆ: ಅಮಿತ್ ಶಾ
* ಬಸವಣ್ಣನ ವಚನವನ್ನು ಪ್ರಚಾರ ಮಾಡಿದ ಸಿದ್ಧಲಿಂಗ ಸ್ವಾಮಿಗಳು: ಅಮಿತ್ ಶಾ
* ಉತ್ತರ ಗಂಗಾ, ದಕ್ಷಿಣದಲ್ಲಿ ಸಿದ್ದಗಂಗಾ ಎಂದು ಅಟಾಲ್ ಜಿ ಹೇಳಿದ್ದರು: ಅಮಿತ್ ಶಾ
* ಗಂಗಾದಲ್ಲಿ ಸ್ನಾನ ಮಾಡಿದರೆ ಪವಿತ್ರ, ಸಿದ್ದಗಂಗಾಕ್ಕೆ ಬಂದರೆ ಪವಿತ್ರ: ಅಮಿತ್
* ಅನ್ನ, ಆಶ್ರಯ, ಅಕ್ಷರ ಸಿದ್ದಗಂಗಾ ಮಠದ ಮಂತ್ರ ಎಂದ ಅಮಿತ್ ಶಾ
* ಅನ್ನ, ಆಶ್ರಯ, ಅಕ್ಷರ ಎಂಬ ತಂತ್ವವನ್ನು ನರೇಂದ್ರ ಮೋದಿ ಕೂಡಾ ಪಾಲಿಸುತ್ತಿದ್ದಾರೆ: ಶ್ರಿಗಳ ಜಯಂತೋತ್ಸವದಲ್ಲಿ ಅಮಿತ್ ಶಾ
* ಸಂದೇಶ ಬೇರೆ ಬೇರೆ ರೀತಿಯಲ್ಲಿ ನೀಡಬಹುದು. ಶ್ರೀಗಳು ತನ್ನ ಕಾರ್ಯದ ಮೂಲಕ ಸಂದೇಶ ನೀಡಿದ್ದಾರೆ: ಅಮಿತ್ ಶಾ
* ಮಠದ ಪರವಾಗಿ ಅಮಿತ್ ಶಾ ಅವರಿಗೆ ಭಕ್ತಿ, ಗೌರವ ಸಮರ್ಪನೆ ಸಲ್ಲಿಕೆ
Recommended Video
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications