ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಗೂಢ ರೀತಿಯಲ್ಲಿ 40 ಲಕ್ಷ ಹಣ ನಾಪತ್ತೆ: ತುಮಕೂರು ಪೊಲೀಸರಿಗೆ ಸವಾಲಿನ ಕೇಸು

|
Google Oneindia Kannada News

ತುಮಕೂರು, ಜನವರಿ 30: 'ಇದ್ದ ಮೂವರಲ್ಲಿ ಕದ್ದವರ್ಯಾರು?' ಎಂಬ ಗಾದೆಯನ್ನು ಸ್ವಲ್ಪ ಬದಲಾಯಿಸಿ 'ಇದ್ದ ನಾಲ್ವರಲ್ಲಿ ಕದ್ದವರ್ಯಾರು?' ಎಂದು ಬದಲಾಯಿಸಿಕೊಳ್ಳಬೇಕಾಗಿದೆ. ಅಂತಹಾ ಘಟನೆ ತುಮಕೂರಿನಲ್ಲಿ ನಡೆದಿದೆ.

ನಿನ್ನೆ ತುಮಕೂರಿನ ಶಿರಾ ಪೊಲೀಸ್ ಠಾಣೆಗೆ ದೂರೊಂದು ಬಂದಿದೆ. ದೂರಿನ ಪ್ರಕಾರ ಕಾರಿನ ಒಳಗೆ ಇದ್ದ ನಲವತ್ತು ಲಕ್ಷ ರೂಪಾಯಿ ಹಣ ಇಟ್ಟಿದ್ದ ಬ್ಯಾಗು ಮಾಯವಾಗಿದೆ. ಅದೂ ಆ ಕಾರಿನ ಸುತ್ತಾ ನಾಲ್ವರು ಕಾವಲು ಕಾಯುತ್ತಿರುವಾಗಲೇ(!?).

ಬೆಂಗಳೂರು: 'ಎಣ್ಣೆ' ಖರೀದಿಸಲು ಹೋಗಿ 1.27 ಲಕ್ಷ ಕಳೆದುಕೊಂಡ ಟೆಕ್ಕಿಬೆಂಗಳೂರು: 'ಎಣ್ಣೆ' ಖರೀದಿಸಲು ಹೋಗಿ 1.27 ಲಕ್ಷ ಕಳೆದುಕೊಂಡ ಟೆಕ್ಕಿ

ಘಟನೆ ನಡೆದಿರುವುದು ಹೀಗೆ, ನಿನ್ನೆ ಆಂಧ್ರ ಪ್ರದೇಶದ ರೊಳ್ಳದ ಪ್ರಗತಿ ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ಶ್ರೀನಿವಾಸಮೂರ್ತಿ ಮತ್ತು ಪೆದ್ದಮಂತೂರು ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ಕೃಷ್ಣಮೋಹನ್ ಮತ್ತು ಪ್ರಗತಿ ಸೊಸೈಟಿಯ ಕಚೇರಿ ಸಹಾಯಕ ಶಿರಾ ನಗರದ ಎಸ್‌ಬಿಐ ಬ್ಯಾಂಕ್‌ ಗೆ ಆಗಮಿಸಿದ್ದಾರೆ.

ಬೆಂಗಳೂರಿನ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಹಣ ಕಳವುಬೆಂಗಳೂರಿನ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಹಣ ಕಳವು

ನಲವತ್ತು ಲಕ್ಷ ಹಣವಿದ್ದ ಬಿಳಿ ಬಣ್ಣದ ಬ್ಯಾಗು

ನಲವತ್ತು ಲಕ್ಷ ಹಣವಿದ್ದ ಬಿಳಿ ಬಣ್ಣದ ಬ್ಯಾಗು

ಬ್ಯಾಂಕ್‌ ಗೆ ಬರುವಾಗ ಅವರ ಬಳಿ ನಲವತ್ತು ಲಕ್ಷ ರೂಪಾಯಿ ತುಂಬಿದ್ದ ಬಿಳಿ ಬಣ್ಣದ ಬ್ಯಾಗ್ ಇತ್ತು (ಅವರೇ ಪೊಲೀಸರಿಗೆ ಹೇಳಿರುವಂತೆ). ಬ್ಯಾಂಕ್‌ ಗೆ ಬಂದು ಒಂದು ಕೋಟಿ ರೂಪಾಯಿ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. ಅದನ್ನು ಕಂದು ಬಣ್ಣದ ಎರಡು ಸೂಟ್‌ ಕೇಸ್‌ನಲ್ಲಿ ಇಟ್ಟಿದ್ದಾರೆ. ಇದರ ಜೊತೆ ನಲವತ್ತು ಲಕ್ಷ ರೂಪಾಯಿ ಇದ್ದ ಮತ್ತೊಂದು ಬಿಳಿ ಬಣ್ಣದ ಬ್ಯಾಗ್ ಅನ್ನು ಸಹ ತೆಗೆದುಕೊಂಡು ಬ್ಯಾಂಕ್‌ ನಿಂದ ಹೊರಟಿದ್ದಾರೆ.

ಅರ್ಧ ಕಿ.ಮೀ ಹೋಗುತ್ತಿದ್ದಂತೆ ಕಾರು ಪಂಕ್ಚರ್‌

ಅರ್ಧ ಕಿ.ಮೀ ಹೋಗುತ್ತಿದ್ದಂತೆ ಕಾರು ಪಂಕ್ಚರ್‌

ಬ್ಯಾಂಕ್‌ನಿಂದ ಕಾರಿನಲ್ಲಿ ಹೊರಟು ಕೇವಲ ಅರ್ಧ ಕಿ.ಮೀ ದೂರ ಹೋಗುತ್ತಿದ್ದಂತೆ ಕಾರು ಪಂಕ್ಚರ್ ಆಗಿದೆ. ಕಾರಿನ ಡ್ರೈವರ್ ಚಕ್ರ ಬದಲಿಸಿದ್ದಾನೆ. ಈ ಸಮಯದಲ್ಲಿ ಹಣವಿದ್ದ ಬ್ಯಾಗುಗಳನ್ನು ಕಾರಿನಲ್ಲಿಟ್ಟು ಕಾರಿನಲ್ಲಿದ್ದ ಮೂವರೂ ಕಾರಿನ ಮೂರೂ ಬದಿಗೆ ನಿಂತು ಕಾವಲು ಕಾದಿದ್ದಾರೆ. ಟೈರು ಬದಲಿಸಿದ ನಂತರ ಕಾರು ಹತ್ತಿದವರಿಗೆ ಆಶ್ಚರ್ಯ, ಕಾರಿನಲ್ಲಿದ್ದ ನಲವತ್ತು ಲಕ್ಷ ಹಣವಿದ್ದ ಬಿಳಿ ಬಣ್ಣದ ಬ್ಯಾಗು ನಾಪತ್ತೆ!

ತುಮಕೂರು ಪೊಲೀಸರಿಗೆ ಸವಾಲಿನ ಕೇಸು

ತುಮಕೂರು ಪೊಲೀಸರಿಗೆ ಸವಾಲಿನ ಕೇಸು

ನಿನ್ನೆ ಸಂಜೆ 4:30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಬ್ಯಾಗು ನಾಪತ್ತೆ ಆಗಿರುವ ವಿಷಯ ಗೊತ್ತಾದ ಕೂಡಲೇ ಶಿರಾ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆಂಧ್ರದಿಂದ ಬಂದಿದ್ದ ಮೂವರನ್ನೂ ಹಾಗೂ ಡ್ರೈವರ್‌ ಅನ್ನೂ ವಶಕ್ಕೆ ಪಡೆದು ರಾತ್ರಿಪೂರಾ ವಿಚಾರಣೆ ನಡೆಸಿದ್ದಾರೆ. ಇಂದು ಬೆಳಿಗ್ಗೆ ಎಸ್‌ಪಿ ಸಹ ಸ್ಥಳಕ್ಕೆ ಬಂದಿದ್ದಾರೆ. ತುಮಕೂರು ಪೊಲೀಸರಿಗೆ ಸವಾಲಿನ ಕೇಸು ಇದಾಗಿದೆ.

ಹಣ ಕೊಂಡೊಯ್ಯುವಾಗ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ

ಹಣ ಕೊಂಡೊಯ್ಯುವಾಗ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ

ನಿಯಮಗಳ ಅನುಸಾರ 30 ಲಕ್ಷಕ್ಕೂ ಹೆಚ್ಚು ಹಣ ಡ್ರಾ ಮಾಡಿದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಸೂಕ್ತ ಭದ್ರತೆಯಲ್ಲಿ ಹಣ ಸಾಗಣೆ ಮಾಡಬೇಕು. ಆದರೆ ಸಹಕಾರ ಸಂಘದ ಸಿಬ್ಬಂದಿ ಒಂದು ಕೋಟಿ ಹಣ ತೆಗೆದುಕೊಂಡು ಹೋಗುತ್ತಿದ್ದರೂ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ ಇದು ಆಶ್ಚರ್ಯಕ್ಕೆ ಕಾರಣವಾಗಿದೆ. ಶಿರಾ ನಗರದ ಜನನಿಬಿಡವಾಗಿರುವ ಸ್ಥಳದಲ್ಲಿಯೇ ಹಣ ನಾಪತ್ತೆಯಾಗಿದೆ ಎಂದು ಹೇಳುತ್ತಿರುವುದು ಸಹ ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ.

ಸಹಕಾರಿ ಬ್ಯಾಂಕ್ ಸಿಬ್ಬಂದಿಯೇ ಹಣ ಎಗರಿಸಿದ್ದಾರೆಯೇ?: ಶಂಕೆ

ಸಹಕಾರಿ ಬ್ಯಾಂಕ್ ಸಿಬ್ಬಂದಿಯೇ ಹಣ ಎಗರಿಸಿದ್ದಾರೆಯೇ?: ಶಂಕೆ

ಸಹಕಾರ ಬ್ಯಾಂಕ್‌ನ ಸಿಬ್ಬಂದಿಯೇ ಹಣ ಎಗರಿಸಿದರೋ ಅಥವಾ ಯಾವನೋ ಐನಾತಿ ಕಳ್ಳ ಮಂಕುಬೂದಿ ಎರಚಿ ಹಣ ಲಪಟಾಯಿಸಿದನೋ ತನಿಖೆಯಿಂದ ಗೊತ್ತಾಗಬೇಕಿದೆ. ಸ್ಥಳದ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

English summary
In Tumkuru's Sira 40 lakh rupees gone miss mysterious way. police started investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X