ತುಮಕೂರು-ರಾಯದುರ್ಗ ರೈಲು ಮಾರ್ಗ ಯೋಜನೆ ಬಗ್ಗೆ ಮಹತ್ವದ ಅಪ್ಡೇಟ್
Indian Railways: ರಾಜ್ಯದಲ್ಲಿ ರೈಲ್ವೇ ಮಾರ್ಗ ಜಾಲ ವಿಸ್ತರಣೆ ಆಗುತ್ತಲಿದೆ. ಕೆಲವೆಡೆ ಕಾಮಗಾರಿಗಳು ವೇಗ ಪಡೆದುಕೊಂಡಿದ್ದರೆ, ಇನ್ನೂ ಹಲವು ಭಾಗಗಳಲ್ಲಿ ಆಮೆಗತಿಯಲ್ಲಿ ಸಾಗಿವೆ. ಈ ನಡುವೆ ಇದೀಗ ಬಹುನಿರೀಕ್ಷಿತ ತುಮಕೂರು-ರಾಯದುರ್ಗ ರೈಲ್ವೆ ಮಾರ್ಗ ಯೋಜನೆ ಬಗ್ಗೆ ಅಪ್ಡೇಟ್ ಮಾಹಿತಿಯೊಂದು ಲಭ್ಯವಾಗಿದೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಹುನಿರೀಕ್ಷಿತ ತುಮಕೂರು - ರಾಯದುರ್ಗ ರೈಲ್ವೆ ಯೋಜನೆ ಯಾವಾಗ ಮುಕ್ತಾಯವಾಗಲಿದೆ ಎಂದು ಪ್ರಯಾಣಿಕರು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಇದರ ಕಾಮಗಾರಿ ಆಂಧ್ರಪ್ರದೇಶ ಭಾಗದಲ್ಲೇನೋ ಮುಕ್ತಾಯವಾಗಿದೆ. ಆದರೆ, ಕರ್ನಾಟಕ ಭಾಗದಲ್ಲಿ ಮಾತ್ರ ಆಮೆಗತಿಯಲ್ಲಿ ಸಾಗಿದೆ. ಇದೇ ಕಾರಣಕ್ಕೆ ಉದ್ಘಾಟನೆ ವಿಳಂಬವಾಗುತ್ತಿದೆ. ಯಾಕೆ ಹಾಗೂ ಎಲ್ಲೆಲ್ಲಿ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಪ್ರಯಾಣಿಕರ ಆಸೆ ನಿರಾಸೆ: ಬಹುದಿನಗಳ ಕನಸಾಗಿರುವ ತುಮಕೂರು - ರಾಯದುರ್ಗ ರೈಲ್ವೆ ಯೋಜನೆ ಪಾವಗಡಕ್ಕೆ ಕೊನೆಗೊಂಡಿದೆ. ಆದರೆ, ಅಲ್ಲಿಂದ ಮುಂದಿನ ಭಾಗ ಮಾತ್ರ ಆಮೆಗತಿಯಲ್ಲಿ ಸಾಗಿದೆ. ಪಾವಗಡದಲ್ಲಿ 14 ವರ್ಷಗಳ ಕನಸು ನನಸಾದ ಸಂಭ್ರಮ ಇದ್ದರೆ, ಕೊರಟಗೆರೆ, ಮಧುಗಿರಿ, ತುಮಕೂರು ಗ್ರಾಮಾಂತರ ಭಾಗದಲ್ಲಿ ಮಾತ್ರ ಕಾಮಗಾರಿ ಮುಂದಕ್ಕೆ ಹೋಗದೇ ಆಮೆಗತಿಯಲ್ಲಿ ಸಾಗಿದೆ. ಇದರಿಂದ ಈ ಭಾಗದ ಪ್ರಯಾಣಿಕರ ಆಸೆ ನಿರಾಸೆ ಆದಂತಾಗಿದೆ.
ಕಾಮಗಾರಿ ನಿಧಾನಗತಿಗೆ ಕಾರಣ: ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ ಯೋಜನೆ ತುಮಕೂರು-ರಾಯದುರ್ಗ ರೈಲ್ವೆ ಮಾರ್ಗವಾಗಿದೆ. ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ, ಆಂಧ್ರಪ್ರದೇಶದ ಮಡಕಶಿರಾ ಮೂಲಕ ಪಾವಗಡ, ಕಲ್ಯಾಣದುರ್ಗ, ರಾಯದುರ್ಗಕ್ಕೆ ಸಂಪರ್ಕ ಕಲ್ಪಿಸುವ ಈ ರೈಲ್ವೆ ಯೋಜನೆಗೆ 2012ರಲ್ಲಿ ಚಾಲನೆಗೊಳಿಸಲಾಗಿತ್ತು. ಆರಂಭಿಕ 900 ಕೋಟಿ ರೂಪಾಯಿ ಯೋಜನಾ ವೆಚ್ಚ ಆಗಿತ್ತು. ಇದೀಗ ಇದೆ ವೆಚ್ಚ ಮತ್ತಷ್ಟು ಹೆಚ್ಚಾಗಿದೆ. ಇದೇ ಕಾರಣದಿಂದ ಈ ಭಾಗದಲ್ಲಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ ಅಂತಾ ಹೇಳಬಹುದು.
ಈ ಮಾರ್ಗದಲ್ಲಿ ರೈಲು ಸಂಚಾರ ಆತಂಭ: 1395 ಎಕರೆ ಭೂಮಿ ಒದಗಿಸಿಸುವ ಮೂಲಕ 2018ರ ವೇಳೆಗೆ ಕಾಮಗಾರಿ ಮುಗಿಸುವ ಉದ್ದೇಶ ಹೊಂದಲಾಗಿತ್ತು. ಆಂಧ್ರಪ್ರದೇಶದಲ್ಲಿ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ನಿಧಾನಗತಿಯಲ್ಲಿ ಸಾಗಿದೆ. ಕರ್ನಾಟಕ ಗಡಿಯ ಕದಿರಿದೇವರಪಲ್ಲಿ ರೈಲ್ವೆ ನಿಲ್ಧಾಣದಿಂದ ತಿರುಪತಿವರೆಗೆ ರೈಲು ಸಂಚಾರವನ್ನು ಆರಂಭ ಮಾಡಲಾಗಿದೆ ಎಂದು ವರದಿಯಾಗಿದೆ.
ಯೋಜನೆಯ ವೆಚ್ಚದ ವಿವರ: ಆದರೆ, ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ಮೊದಲಿನಿಂದಲೂ ಭೂಸ್ವಾಧೀನ ನೆಪ ಹೇಳಿಕೊಂಡು ಬರಲಾಗುತ್ತಿದೆ. ಇದರಿಂಸ ಕಾಮಗಾರಿಯಲ್ಲಿ ವಿಳಂಬ ಆಗಿದೆ ಎನ್ನಲಾಗಿದ್ದು, ಯೋಜನೆಯ ಮೊತ್ತ 4,000 ಕೋಟಿ ರೂಪಾಯಿ ದಾಟಿದರೂ ಯೋಜನೆ ಮಾತ್ರ ಪೂರ್ಣ ಆಗಿಲ್ಲ ಎನ್ನುವುದೇ ಬೇಸರದ ಸಂಗತಿಯಾಗಿದೆ.
ಕರ್ನಾಟಕ ಭಾಗದಲ್ಲಿ ಕಾಮಗಾರಿ ವಿಳಂಬ: ರಾಯದುರ್ಗ-ತುಮಕೂರು ರೈಲ್ವೆ ಯೋಜನೆ 205 ಕಿಲೋ ಮೀಟರ್ ಆಗಿದೆ. ಇದರಲ್ಲಿ ಆಂಧ್ರ ಭಾಗದ 103 ಕಿಲೋ ಮಿಟರ್ ಕಾಮಗಾರಿಯನ್ನು ಈಗಾಗಲೇ ಅಲ್ಲಿನ ಸರ್ಕಾರ ಪೂರ್ಣಗೊಳಿಸಿದೆ. ಆದರೆ, ಕರ್ನಾಟಕ ಭಾಗದ ಆಂಧ್ರ ಗಡಿಯಿಂದ-ತುಮಕೂರುವರೆಗಿನ 102 ಕಿಲೋ ಮೀಟರ್ ಯೋಜನೆ ಮಂದಗತಿಯಲ್ಲಿ ಸಾಗಿದೆ.
ಹಳಿಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು: ಆಂಧ್ರ ಗಡಿಯಿಂದ ಪಾವಗಡದವರೆಗೆ ಎಚ್‌ವಿವಿ ಹಾಗೂ ಆಂಧ್ರಪ್ರದೇಶದ ಸಿದ್ದಾರ್ಥ ಕನ್‌ಸ್ಟ್ರಕ್ಷನ್ 27 ಕಿಲೋ ಮೀಟರ್ ಕಾಮಗಾರಿ ಮುಕ್ತಾಯವಾಗುದೆ. ಕೆ.ರಾಮಪುರ ರೈಲ್ವೆ ನಿಲ್ದಾಣದಿಂದ ಪಾವಗಡ ರೈಲ್ವೆ ನಿಲ್ದಾಣದವರೆಗೆ ಕಾಮಗಾರಿ ಪೂರ್ಣಗೊಳಿಸಿ ರೈಲ್ವೆ ಅಧಿಕಾರಿಗಳ ತಂಡ ಹಳಿಗಳ ಪರಿಶೀಲನೆಯನ್ನೂ ಕೂಡ ನಡೆಸಿದೆ. ಇದರಿಂದ ಈ ಭಾಗದ ಜನರ ಮುಖದಲ್ಲಿ ಸಂತಸ ಮೂಡಿದಂತಾಂಗಿದೆ.
ಆದರೆ, ಮಧುಗಿರಿ, ಕೊರಟಗೆರೆ ಮತ್ತು ತುಮಕೂರು ಗ್ರಾಮಾಂತರ ಪ್ರದೇಶದಲ್ಲಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಈ ಭಾಗದ ಜನರು ಇಟ್ಟುಕೊಂಡಿದ್ದ ನಿರೀಕ್ಷೆ ಸುಳ್ಳದಂತಾಗಿದೆ. ಯಾಕಂದ್ರೆ ಈ ಭಾಗದಲ್ಲೂ ಕೂಡ ಕಾಮಗಾರಿ ಬೇಗ ಮುಗಿದು ರೈಲು ಸೇವೆ ಸಿಗಲಿದೆ ಅಂದುಕೊಂಡಿದ್ದರು. ಆದರೆ, ಇಲ್ಲಿನ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಇದರಿಂದ ಪ್ರಯಾಣಿಕರು ಬೇಸರಗೊಂಡಿದ್ದಾರೆ.
ಇನ್ನೂ ಈ ಭಾಗದಲ್ಲಿ ಭೂಸ್ವಾಧೀನ ನೆಪ ಹೇಳಿಕೊಂಡುಬರುತ್ತಿರುವ ಕಾರಣ ಕಾಮಗಾರಿಯಲ್ಲಿ ವಿಳಂಬ ಆಗುತ್ತಿದೆ ಎನ್ನುವ ಆರೋಪ ಕೂಡ ಕೇಳಿಬಂದಿದೆ. ಅದೇನೆ ಇರಲಿದೆ ಈ ಭಾಗದಲ್ಲಿ ಕಾಮಗಾರಿ ಬೇಗ ಮುಗಿಸಿ ಪ್ರಯಾಣಿಕರಿಗೆ ಅಕುನೂಲ ಕಲ್ಪಿಸಿಕೊಡಬೇಕೆಂಬುದೇ ಜನರ ಆಸೆಯಾಗಿದೆ. ಈ ಆಸೆ ಯಾವಾಗ ನೆರವೇರುತ್ತದೆಯೋ ಎಂದು ಕಾದುನೋಡಬೇಕಿದೆ.
-
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
Opinion - Kalyana Karnataka Train: ಕೇಂದ್ರ ಸಚಿವ ವಿ ಸೋಮಣ್ಣ ಅವರೇ ಕನ್ನಡಿಗರ ಸಂಕಷ್ಟ ಸ್ವಲ್ಪ ನೋಡಿ -
New Railway Line: 6000 ಕಿಮೀ ರೈಲ್ವೆ ಜಾಲ ವಿಸ್ತರಣೆ, 100 ಯೋಜನೆಗಳ ಜಾರಿಗೆ ₹1.53 ಲಕ್ಷ ಕೋಟಿ ಹೂಡಿಕೆ -
CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; ಕನ್ನಡಿಗರಿಗೂ ಇದೆ ಮೀಸಲಾತಿ -
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
ಏಪ್ರಿಲ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ












Click it and Unblock the Notifications