ಮತ್ತೊಂದು ದುರಂತ: ವಿಷ ಪ್ರಸಾದ ಸೇವಿಸಿ ಬಾಲಕ ಸಾವು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ತುಮಕೂರು, ಮೇ 22: ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದಲ್ಲಿ ವಿಷ ಪೂರಿತ ಪ್ರಸಾದ ಸೇವಿಸಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆ ಹಸಿಯಾಗಿರುವಾಗಲೇ ಮತ್ತೊಂದು ದುರಂತ ಸಂಭವಿಸಿದೆ.
ತುಮಕೂರಿನ ಪಾವಗಡ ತಾಲ್ಲೂಕಿನ ನಿಡಗಲ್ಲು ಗ್ರಾಮದಲ್ಲಿರುವ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ವಿಷಪೂರಿತ ಪ್ರಸಾದ ಸ್ವೀಕರಿಸಿದ ಒಬ್ಬ ಬಾಲಕ ಮೃತಪಟ್ಟಿದ್ದಾನೆ. ಸುಮಾರು 20 ಮಂದಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ನಾಲ್ವರ ಸ್ಥಿತಿ ಇನ್ನೂ ಗಂಭೀರವಾಗಿದೆ.
ಮೃತಬಾಲಕನನ್ನು ವೀರಭದ್ರ (11) ಎಂದು ಗುರುತಿಸಲಾಗಿದೆ. ಅಸ್ವಸ್ಥರನ್ನು ಬೆಂಗಳೂರು, ತುಮಕೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಸ್ವಸ್ಥರು ತೀವ್ರ ವಾಂತಿ ಬೇಧಿಯಿಂದ ಬಳಲುತ್ತಿದ್ದಾರೆ.

ದೇವಸ್ಥಾನಕ್ಕೆ ನೂರಾರು ಭಕ್ತರು ಭೇಟಿ ನೀಡುತ್ತಿದ್ದು, ಸೋಮವಾರ ದೇವಸ್ಥಾನದ ಸಮೀಪದಲ್ಲಿಯೇ ಪ್ರಸಾದ ತಯಾರಿಸಲಾಗಿತ್ತು. ಅಲ್ಲಿ ನೀರು ದೊರಕದ ತೊಟ್ಟಿಯಲ್ಲಿದ್ದ ನೀರನ್ನು ಪ್ರಸಾದ ತಯಾರಿಕೆಗೆ ಬಳಸಿಕೊಂಡಿದ್ದರು. ಈ ನೀರು ಶುದ್ಧವಾಗಿರಲಿಲ್ಲ ಎನ್ನಲಾಗಿದೆ. ಅದನ್ನು ಸೇವಿಸಿದ ಭಕ್ತರಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತು. ಬಳಿಕ ವಾಂತಿ ಬೇಧಿಗೆ ಒಳಗಾದರು ಎನ್ನಲಾಗಿದೆ.












Click it and Unblock the Notifications