Tumakuru Metro: ತುಮಕೂರಿನಲ್ಲಿ ಮೆಟ್ರೋ ನಿರ್ಮಾಣದ ಬಗ್ಗೆ ಮಹತ್ವದ ಅಪ್ಡೇಟ್; ಸಿಎಂ ಏನಂದ್ರು?
Tumakuru Metro: ರಾಜ್ಯ ರಾಜಧಾನಿ ಬೆಂಗಳೂರಿಗರ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ಇಲ್ಲಿನ ಬಹುತೇಕ ಮಂದಿ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ಮೆಟ್ರೋವನ್ನೇ ಅವಲಂಬನೆ ಮಾಡಿದ್ದಾರೆ. ಒಂದೆಡೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಮೆಟ್ರೋ ವಿಸ್ತರಣೆಗೆ ಬೇಡಿಕೆಯಿಡುತ್ತಿದ್ದಾರೆ. ಇದರಂತೆಯೇ ನಗರದಲ್ಲಿ ಮೆಟ್ರೋ ಜಾಲವೂ ಕೂಡ ವಿಸ್ತರಣೆಯಾಗುತ್ತಿದೆ.
ನಮ್ಮ ಮೆಟ್ರೋ ಬೆಂಗಳೂರಿನಲ್ಲಿನ ಸಾರ್ವಜನಿಕರು, ಕಂಪನಿ ಉದ್ಯೋಗಿಗಳ ಜೀವನಾಡಿ ಸಾರಿಗೆಯಾಗಿದೆ. ಅಲ್ಲದೆ, ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಲೇ ಇದೆ. ನಗರದಲ್ಲಿ ಬಹುತೇಕ ಮಂದಿ ಟ್ರಾಫಿಕ್ ಜಂಜಾಟದಿಂದ ಈ ಸಾರಿಗೆಯನ್ನೇ ಆಯ್ಕೆ ಮಾಡಿಕೊಂಡಿದ್ದು, ಇನ್ನೂ ಹೆಚ್ಚುವರಿ ಮೆಟ್ರೋ ರೈಲುಗಳನ್ನು ಬಿಡಲು ಬೇಡಿಕೆಯಿಟ್ಟಿದ್ದಾರೆ. ಮತ್ತೊಂದೆಡೆ ಮೆಟ್ರೋ ಇಲ್ಲದ ಕಡೆಗಳಲ್ಲಿ ಮೆಟ್ರೋ ತರಲು ಕೂಡ ಆಗ್ರಹಗಳು ಕೇಳಿ ಬರುತ್ತಿವೆ. ಈಗಾಗಲೇ ಸಾರ್ವಜನಿಕರ ಬೇಡಿಕೆಗೆ ತಕ್ಕಂತೆ ಬಿಎಂಆರ್‌ಸಿಎಲ್ ಮೆಟ್ರೋ ಜಾಲವನ್ನು ವಿಸ್ತರಣೆ ಮಾಡುವ ಕೆಲಸವನ್ನು ಕೂಡ ಮಾಡುತ್ತಿದೆ.

ತುಮಕೂರು ಮೆಟ್ರೋ: ಇದರ ನಡುವೆಯೇ ತುಮಕೂರು ಮೆಟ್ರೋ ನಿರ್ಮಾಣದ ಬಗ್ಗೆ ಸಚಿವ ಜಿ.ಪರಮೇಶ್ವರ್ ಮಹತ್ವದ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆಯ ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಅವರು ಮಾತನಾಡಿದರು.
ಜಿಲ್ಲೆಯು ಅಭಿವೃದ್ಧಿಯೆಡೆಗೆ ಸಾಗುತ್ತಿದೆ. ಏಷ್ಯಾದ ಅತಿದೊಡ್ಡ ಕೈಗಾರಿಕಾ ಘಟಕವನ್ನು ಸ್ಥಾಪಿಸಲು 20,000 ವೆಚ್ಚದ ಭೂಮಿಯನ್ನು ನೀಡಲಾಗಿದೆ. ಇನ್ನು ಜಿಲ್ಲೆಗೆ ಮೆಟ್ರೋ ರೈಲು ಯೋಜನೆ ತರಲು ಸಿಎಂ ಸಿದ್ದರಾಮಯ್ಯ ಅವರನ್ನು ಕೇಳಿಕೊಂಡಾಗ, ಅದಕ್ಕೆ ಒಪ್ಪಿ ಕಾರ್ಯಸಾಧ್ಯತೆ ವರದಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವನ್ನು ನಿರ್ಮಾಣ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಅಡಿಗಲ್ಲು ಹಾಕಿದ್ದಾರೆ.
52.41 ಕಿಲೋ ಮೀಟರ್ ಉದ್ದದ ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಮಾರ್ಗದಲ್ಲಿ 19 ಎತ್ತರದ ನಿಲ್ದಾಣಗಳ ನಿರ್ಮಾಣ ಮಾಡಲು ಯೋಜನೆ ಮಾಡಲಾಗಿದೆ. ಮಾದಾವರ ನಿಲ್ದಾಣದಿಂದ ಪ್ರಾರಂಭ ಆಗುವ ಮೆಟ್ರೋ ಮಾರ್ಗವು ತುಮಕೂರು ಬಸ್ ನಿಲ್ದಾಣದವರೆಗೆ ವಿಸ್ತರಣೆ ಮಾಡುವ ಗುರಿ ಹೊಂದಲಾಗಿದೆ. ಬಹು ನಿರೀಕ್ಷಿತ ಈ ಯೋಜನೆಯು ತುಮಕೂರು ಬೆಂಗಳೂರು ನಡುವಿನ ಸಾರಿಗೆ ಸೌಲಭ್ಯವನ್ನು ಮತ್ತಷ್ಟು ಸುಲಭ ಆದಂತಾಗಲಿದೆ.
ಟೌನ್‌ಶಿಪ್ ನಿರ್ಮಾಣದ ಬಗ್ಗೆ ಹೇಳಿದ್ದೇನು?: ವಸಂತನರಸಾಪುರದಲ್ಲಿ ಟೌನ್‌ಶಿಪ್ ನಿರ್ಮಾಣ ವಿಚಾರವಾಗಿ ಇತ್ತೀಚೆಗಷ್ಟೇ ಮಾತನಾಡಿದ್ದ ಅವರು, ಈಗಾಗಲೇ ಜಾದ ಗುರುತು ಮಾಡಲಾಗಿದೆ. ಪಿಪಿಪಿ ಮಾಡೆಲ್ನಲ್ಲಿ ಟೌನ್ಶಿಫ್ ನೀಡಲಾಗುತ್ತದೆ. ಇನ್ನು, ನಮ್ಮ ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ನಿರ್ಮಾಣ ಬಗ್ಗೆ ಚರ್ಚೆ ಇಲ್ಲ. ದಾಬಸ್ ಪೇಟೆ ನೆಲಮಂಗಲ ಬಳಿ ನಿರ್ಮಾಣ ಮಾಡಲು ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದರು.












Click it and Unblock the Notifications