• search
 • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಪದ ಕೊಡ ತುಂಬಿ ಮೈತ್ರಿ ಸರ್ಕಾರ ಬಿದ್ದಿದೆ: ಕೆಎನ್ ರಾಜಣ್ಣ

|
   ಪಾಪದ ಕೊಡ ತುಂಬಿ ಮೈತ್ರಿ ಸರ್ಕಾರ ಬಿದ್ದಿದೆ: ಕೆಎನ್ ರಾಜಣ್ಣ

   ತುಮಕೂರು, ಜುಲೈ 27: 'ಸರ್ಕಾರವನ್ನು ನಾವು ಬೀಳಿಸಿಲ್ಲ, ಅದೇ ಬಿದ್ದುಹೋಗಿದೆ. ಪಾಪದ ಕೊಡ ತುಂಬಿ ಪತನಗೊಂಡಿದೆ' ಎಂದು ಮಧುಗಿರಿಯ ಮಾಜಿ ಶಾಸಕ, ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆಎನ್ ರಾಜಣ್ಣ ಹೇಳಿದರು.

   ಮೈತ್ರಿ ಸರ್ಕಾರದಿಂದ 'ಸೂಪರ್ ಸೀಡ್‌'ಗೆ ಒಳಗಾಗಿದ್ದ ಡಿಸಿಸಿ ಬ್ಯಾಂಕ್‌ಅನ್ನು ನ್ಯಾಯಾಲಯದ ಆದೇಶದ ಬಳಿಕ ಪುನಃ ಅಧ್ಯಕ್ಷಗಿರಿ ವಹಿಸಿಕೊಂಡ ಬಳಿಕ ಅವರು ಶನಿವಾರ ಮಾತನಾಡಿದರು.

   ತುಮಕೂರು: 'ಸೂಪರ್ ಸೀಡ್' ಗೆದ್ದು ಮೀಸೆ ತಿರುವಿದ ಕೆ ಎನ್ ರಾಜಣ್ಣತುಮಕೂರು: 'ಸೂಪರ್ ಸೀಡ್' ಗೆದ್ದು ಮೀಸೆ ತಿರುವಿದ ಕೆ ಎನ್ ರಾಜಣ್ಣ

   ಜೆಡಿಎಸ್ ಜತೆ ಮೈತ್ರಿ ಮುಂದುವರಿದರೆ ಕಾಂಗ್ರೆಸ್ ಪಕ್ಷ ಶೂನ್ಯವಾಗಲಿದೆ. ಯಾವ ಕಾರಣಕ್ಕೂ ಜೆಡಿಎಸ್ ಜತೆ ಮೈತ್ರಿ ಬೇಡ ಎಂದು ಹೇಳಿದರು.

   ಬಿಜೆಪಿಗೆ ಬಾಹ್ಯ ಬೆಂಬಲ ನೀಡುವುದಾಗಿ ಜೆಡಿಎಸ್ ಹೇಳುತ್ತಿದೆ. ಜೆಡಿಎಸ್‌ನವರು ವ್ಯಾಪಾರಸ್ಥರು ಏನು ಬೇಕಾದರೂ ಮಾಡಲಿ. ವ್ಯವಹಾರಕ್ಕಾಗಿ ಏನು ಬೇಕಾದರೂ ಮಾಡಲು ಅವರು ಸಿದ್ಧ ಎಂದು ಟೀಕಿಸಿದರು.

   'ಸಿದ್ದರಾಮಯ್ಯ ಅವರೇ ನಮ್ಮ ವಿರೋಧಪಕ್ಷದ ನಾಯಕರು. ಜಿ. ಪರಮೇಶ್ವರ್ ಅವರ ಹಿಂದೆ ಒಬ್ಬ ಶಾಸಕನೂ ಇಲ್ಲ. ಅವರು ಹೇಗೆ ವಿಪಕ್ಷ ನಾಯಕರಾಗುತ್ತಾರೆ. ಪರಮೇಶ್ವರ್ ಅವರ ಡಿಸಿಎಂ ಹುದ್ದೆ ಸ್ಥಾನ ಹೋಗಿರುವುದರಿಂದ ತುಮಕೂರಿನಲ್ಲಿ ಟ್ರಾಫಿಕ್ ಸಮಸ್ಯೆ ತಪ್ಪಿದೆ' ಎಂದು ವ್ಯಂಗ್ಯವಾಡಿದ ಅವರು, 'ನಾನು ಯಾವ ಕಾರಣಕ್ಕೂ ಬಿಜೆಪಿ ಸೇರೊಲ್ಲ' ಎಂದು ಸ್ಪಷ್ಟಪಡಿಸಿದರು.

   ಕೆ.ಎನ್‌.ರಾಜಣ್ಣಗೆ ಶಾಕ್, ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ಕೆ.ಎನ್‌.ರಾಜಣ್ಣಗೆ ಶಾಕ್, ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್

   'ಸೂಪರ್‌ ಸೀಡ್‌ಗೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ನನಗೆ ಅಧ್ಯಕ್ಷಗಿರಿಯ ಚಾರ್ಜ್ ನೀಡಿದ್ದಾರೆ. 2003ರಲ್ಲಿಯೂ ಬ್ಯಾಂಕ್ ಸೂಪರ್ ಸೀಡ್ ಆಗಿತ್ತು. ಆಗಲೂ ನಾನೇ ಅಧ್ಯಕ್ಷನಾಗಿದ್ದೆ. ಮೊದಲು ಹೇಗೆ ವ್ಯವಹಾರ ನಡೆಯುತ್ತಿತ್ತೋ, ಮುಂದೆಯೂ ಹಾಗೆಯೇ ನಡೆಯುತ್ತದೆ' ಎಂದು ತಿಳಿಸಿದರು.

   'ಗ್ರಾಹಕರಿಗೆ ಅನುಕೂಲ ಮಾಡುವ ಸಲುವಾಗಿ ಲೋಪ ಆಗಿದೆ. ಸಣ್ಣಪುಟ್ಟ ಲೋಪಗಳು ಸಹಜ. ಹಣಕಾಸಿನ ಲೋಪವಾಗಿ ಅದನ್ನು ಪ್ರಶ್ನಿಸಿದರೆ ಒಪ್ಪಿಕೊಳ್ಳುತ್ತೇನೆ. ಪಕ್ಷಾತೀತವಾಗಿ ನಾಯಕರು ಸಾಲ ಪಡೆದು ಬಡ್ಡಿ ಕಟ್ಟಿದ್ದಾರೆ' ಎಂದು ಹೇಳಿದರು.

   English summary
   Former MLA of Madhugiri Congress and DCC bank president KN Rajanna said that, Congress will become zero if the alliance with JDS continues.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X