ಶ್ರೀಗಳ ಪುಣ್ಯಸ್ಮರಣೆ: ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಂದ ಸಾಮೂಹಿಕ ಕೇಶ ಮುಂಡನೆ
ತುಮಕೂರು, ಜನವರಿ 27: ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಜನವರಿ 29ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದ ವಿದ್ಯಾರ್ಥಿಗಳು ಸಾಮೂಹಿಕ ಕೇಶ ಮುಂಡನೆ ಮಾಡಿಸಿಕೊಳ್ಳಲಿದ್ದಾರೆ.
ಶ್ರೀಗಳು ಅಗಲಿದ ಬಳಿಕ ವಿದ್ಯಾರ್ಥಿಗಳು ಅನಾಥ ಭಾವದಿಂದ ನೊಂದಿಕೊಂಡಿದ್ದರು. ಈಗ ತಮ್ಮ ಕೇಶ ಮುಂಡನೆ ಮಾಡಿಸುವ ಮೂಲಕ ವಿದ್ಯಾರ್ಥಿಗಳು ಶ್ರೀಗಳಿಗೆ ನಮನ ಸಲ್ಲಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ, ಇಷ್ಟೊಂದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಕೇಶ ಮುಂಡನೆಯನ್ನು ಉಚಿತವಾಗಿ ಮಾಡಲು ಅಖಿಲ ಕರ್ನಾಟಕ ಸವಿತಾ ಸಮಾಜ ಯುವಕರ ಸಂಘದವರು ಮುಂದಾಗಿದ್ದಾರೆ.
ಶಿವಕುಮಾರ ಸ್ವಾಮೀಜಿಗೆ ಭಾರತರತ್ನ ನೀಡದಿರುವುದಕ್ಕೆ ಡಿಕೆಶಿ ಏನಂದ್ರು?
ಇದಕ್ಕಾಗಿ ಅಖಿಲ ಕರ್ನಾಟಕ ಸವಿತಾ ಸಮಾಜ ಯುವಕರ ಸಂಘದವರಿಗೆ ಸಿದ್ದಗಂಗಾ ಮಠದಿಂದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಆಶೀರ್ವಾದ ಪತ್ರವನ್ನು ಬರೆದಿದ್ದು,ಪತ್ರದ ವಿವರ ಹೀಗಿದೆ...

"ಅಖಿಲ ಭಾರತ ಸವಿತಾ ಸಮಾಜ ಯುವಕರ ಸಂಘದವರು ಜನವರಿ 29ರ ಮಂಗಳವಾರದಂದು ಶ್ರೀಕ್ಷೇತ್ರದ ವಿದ್ಯಾರ್ಥಿಗಳಿಗೆ ಉಚಿತ ಕೇಶ ಮುಂಡನ ಸೇವೆ ಮಾಡಲು ಮುಂದೆ ಬಂದಿರುವುದು ತುಂಬಾ ಸಂತೋಷದ ವಿಷಯ.
ಸವಿತಾ ಸಮಾಜದ ಎಲ್ಲಾ ಕಾರ್ಯಕರ್ತರಿಗೆ ಪರಮಾತ್ಮನು ಹಾಗೂ ಶ್ರೀ ಸಿದ್ದಗಂಗಾ ಗುರುಪರಂಪರೆ ಸಕಲ ಸನ್ಮಂಗಳವನ್ನುಂಟು ಮಾಡಲೆಂದು ಹಾರೈಸುತ್ತೇವೆ" ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಆಶೀರ್ವಾದ ಪತ್ರ ಬರೆದಿದ್ದಾರೆ.












Click it and Unblock the Notifications