ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಗಳ ಆರೋಗ್ಯ ಹೇಗಿದೆ?
ತುಮಕೂರು, ಜನವರಿ 8: ಸಿದ್ದಗಂಗಾ ಶ್ರೀ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ, ಯಾವುದೇ ಭಯ ಬೇಡ ಎಂದು ವೈದ್ಯರು ತಿಳಿಸಿದ್ದು, ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ.
ಶ್ರೀಗಳ ಆರೋಗ್ಯ ಚೇತರಿಕೆ ಕಂಡಿದ್ದು, ಬಿಪಿ, ಪಲ್ಸ್ ಎಲ್ಲವೂ ಸ್ಥಿರವಾಗಿದೆ. ಪ್ರೋಟೀನ್ ಅಂಶ 3.2 ಮಿ.ಗ್ರಾಂಗೆ ಏರಿಕೆಯಾಗಿದೆ. ಪ್ಲಾಸ್ಮಾ ಅಲ್ಟ್ರಾ ಫಿಲ್ಟರ್ ಮೂಲಕ ರಕ್ತ ಶುದ್ದೀಕರಣ ಮಾಡಲಾಗಿತ್ತು. ಮೊನ್ನೆ ರಕ್ತ ಶುದ್ಧೀಕರಣ ಮಾಡಿದಾಗಿನಿಂದಲೂ ಶ್ರೀಗಳ ಆರೋಗ್ಯದಲ್ಲಿ ಗಣನೀಯ ಚೇತರಿಕೆಯಾಗಿದೆ. ಎಂದಿನಂತೆ ದ್ರವಾಹಾರ ಸ್ವೀಕರಿಸಿದ್ದಾರೆ ಎಂದು ತಿಳಿಸಲಾಗಿದೆ.
ಆಸ್ಪತ್ರೆಯ ವೈದ್ಯ ಡಾ. ಪರಮೇಶ್ ಮಾತನಾಡಿ, ಶ್ರೀಗಳು ಮಾತಾಡುತ್ತಿದ್ದು, ಅವರು ಕಣ್ಣು ಬಿಟ್ಟು ನೋಡುತ್ತಿದ್ದಾರೆ. ಇನ್ನು ಚಿಕಿತ್ಸೆ ನೀಡಬೇಕಾಗುತ್ತದೆ. ಶ್ರೀಗಳು ಗುಣಮುಖರಾಗಲು ಬಹಳಷ್ಟು ಸಮಯಬೇಕು.

ಶ್ರೀಗಳಿಗೆ ಸಾದ್ಯವಾದಷ್ಟು ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸೆ ಫಲಕಾರಿಯಾಗುವ ವಿಶ್ವಾಸವಿದೆ. ಸೋಂಕು ಕೂಡ ಕಡಿಮೆಯಾಗಿದೆ. ನಿನ್ನೆ ಸಂಜೆ ವೇಳೆಗೆ ಬಹಳಷ್ಟು ಚೇತರಿಕೆ ಕಂಡಿದ್ದಾರೆ. ಪ್ರೊಟೀನ್ ಅಂಶ ಕೂಡ ಜಾಸ್ತಿಯಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವಾರ ತೀವ್ರ ಅನಾರೋಗ್ಯದಿಂದಾಗಿ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಇದೀಗ ಅವರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.












Click it and Unblock the Notifications