ಆಜಾನ್ ಸದ್ದು ಕೇಳಿ ಕೂಡಲೇ ಭಾಷಣ ನಿಲ್ಲಿಸಿದ ರಾಹುಲ್ ಗಾಂಧಿ
ತುಮಕೂರು, ಮೇ 1: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಸೋಮವಾರ ತುಮಕೂರಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಜಾನ್ ಶಬ್ದ ಕೇಳಿ ತಮ್ಮ ಭಾಷಣವನ್ನು ತಕ್ಷಣ ನಿಲ್ಲಿಸಿದ ಘಟನೆ ನಡೆದಿದೆ.
ಇತ್ತಿಚೆಗೆ ಆಚರಿಸಲಾಗಿದ್ದ ಮುಸ್ಲಿಮರ ಪವಿತ್ರ ರಂಜಾನ್‌ಗೆ ರಾಹುಲ್ ಗಾಂಧಿಗೆ ಎಲ್ಲರಿಗೂ ಈದ್ ಮುಬಾರಕ್! ಈ ಪವಿತ್ರ ಹಬ್ಬವು ಎಲ್ಲರಿಗೂ ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ ಎಂದು ಶುಭ ಕೋಡಿದ್ದರು.

ಕಳೆದ ಮೂರು ದಿನಗಳ ಹಿಂದೆ ಮಂಗಳೂರಿನಲ್ಲಿ ಭಾಷಣ ಮಾಡುವಾಗಲೂ ರಾಹುಲ್ ಗಾಂಧಿ ಅವರು ಅಜಾನ್ ಕೂಗಲು ಆರಂಭವಾದಗ ತಮ್ಮ ಭಾಷಣ ನಿಲ್ಲಿಸಿ ಗೌರವ ಸೂಚಿಸಿದ್ದರು. ಈ ಮೂಲಕ ತಾವು ಒಬ್ಬ ಧರ್ಮ ಸಹಿಷ್ಣು ಎಂದು ತೋರಿಸಿಕೊಂಡಿದ್ದರು. ಮಂಗಳೂರಿನಲ್ಲಿ ಗುರುವಾರ ಮಂಗಳೂರಿನ ಐಸ್ ಕ್ರೀಂ ಪಾರ್ಲರ್ ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿ.ಕೆ.ಶಿವಕುಮಾರ್ ಅವರೊಂದಿಗೆ ಆಗಮಿಸಿದ್ದರು.
अज़ान की आवाज सुनकर राहुल गांधी ने अपने भाषण को रोक दिया
— News24 (@news24tvchannel) May 1, 2023
◆ राहुल गांधी कर्नाटक में जनसभा को संबोधित कर रहे थे
Rahul Gandhi | #RahulGandhi | #KarnatakaElections2023 pic.twitter.com/wLTUlO5WNN
ಅವರು ಅಂಗಡಿಗೆ ತಲುಪುತ್ತಿದ್ದಂತೆ ಅವರ ದರ್ಶನ ಪಡೆಯಲು ಅನೇಕ ಜನರು ಪಬ್ಬಾಸ್ ಪಾರ್ಲರ್‌ನಲ್ಲಿ ನೆರೆದಿದ್ದರು. ರಾಹುಲ್ ಸ್ಥಳೀಯರೊಂದಿಗೆ ಸಂವಾದ ನಡೆಸಿದರು ಮತ್ತು ಪಾರ್ಲರ್‌ನಲ್ಲಿ ಸ್ವಲ್ಪ ಸಮಯ ಕಳೆದ ನಂತರ ಅವರು ನಿರ್ಗಮಿಸಿದರು. ಸದ್ಯ ರಾಹುಲ್ ಗಾಂಧಿ ಕರ್ನಾಟಕದಲ್ಲಿದ್ದು, ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಗುರುವಾರದಂದು ಮಂಗಳೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಹುಲ್, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸಲಾಗುವುದು ಎಂದು ಚುನಾವಣಾ ಭರವಸೆ ನೀಡಿದ್ದರು.

ಬಳಿಕ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಬಿಜೆಪಿ ಇಲ್ಲಿ ಭ್ರಷ್ಟಾಚಾರವನ್ನು ಮಾತ್ರ ಮಾಡಿದೆ. ಕರ್ನಾಟಕದ ಜನರು ಈ ಆಡಳಿತವನ್ನು "40 ಪ್ರತಿಶತ ಸರ್ಕಾರ" ಎಂದು ಕರೆಯುತ್ತಾರೆ. 40 ಪರ್ಸೆಂಟ್ ಕಡಿತ ಅಥವಾ ಗುತ್ತಿಗೆದಾರರಿಂದ ಕಮಿಷನ್. ಈ ಬಗ್ಗೆ ಪ್ರಧಾನಿ ಅವರಿಗೂ ತಿಳಿದಿತ್ತು. ಹಾಗಾಗಿ ಅವರು ಈ ಬಗ್ಗೆ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ ಎಂದರು.
ನನ್ನನ್ನು 91 ಬಾರಿ ನಿಂದನೆ ಮಾಡಲಾಗಿದೆ ಎಂಬ ಪ್ರಧಾನಿ ವಿರುದ್ಧ ಆರೋಪದ ಮೇಲೆ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕರ್ನಾಟಕ ಚುನಾವಣೆ ತನ್ನ ಬಗ್ಗೆ ಅಲ್ಲ ಎಂಬುದನ್ನು ನರೇಂದ್ರ ಮೋದಿ ಅರ್ಥಮಾಡಿಕೊಳ್ಳಬೇಕು. ತಮ್ಮ ಬಗ್ಗೆ ಮಾತನಾಡುವ ಬದಲು ಬಿಜೆಪಿ ಸರ್ಕಾರದ ಕಾರ್ಯಗಳು ಮತ್ತು ಕರ್ನಾಟಕದ ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ಮಾತನಾಡುವಂತೆ ಪ್ರಧಾನಿಯನ್ನು ಕೋರಿದ ಅವರು, ನೀವು (ಮೋದಿ) ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದೀರಿ, ಆದರೆ ಕರ್ನಾಟಕದ ಬಗ್ಗೆ ಮಾತನಾಡಬೇಡಿ. ನೀವು ನಿಮ್ಮ ಬಗ್ಗೆ ಮಾತನಾಡುತ್ತೀರಿ. ಕಳೆದ ಮೂರು ವರ್ಷಗಳಿಂದ ಕರ್ನಾಟಕದಲ್ಲಿ ಏನು ಮಾಡಿದ್ದೀರಿ ಎಂದು ಹೇಳಬೇಕು ಎಂದರು.












Click it and Unblock the Notifications