Get Updates
Get notified of breaking news, exclusive insights, and must-see stories!

ತುಮಕೂರು; ಪರಿಶಿಷ್ಟ ಕುಟುಂಬದ ಪೂಜೆ ನಿರಾಕರಿಸಿದ ದೇವಾಲಯದ ಅರ್ಚಕ

ತುಮಕೂರು ಅಕ್ಟೋಬರ್‌ 13: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿರುವ ಮುಳುಕಟ್ಟಮ್ಮ ದೇವಾಲಯದಲ್ಲಿ ಪರಿಶಿಷ್ಟ ಕುಟುಂಬವೊಂದು ಪೂಜೆ ಸಲ್ಲಿಸಲು ಅರ್ಚಕರು ಅವಕಾಶ ಮಾಡಿಕೊಟ್ಟಿಲ್ಲ. ಪೂಜೆ ಮಾಡದೇ ಅವರನ್ನು ಹೊರಗಡೆ ಕಳುಹಿಸಿರುವ ಆರೋಪ ಕೇಳಿಬಂದಿದೆ.

ತುಮಕೂರಿನ ಕಡಬ ಗ್ರಾಮದ ಪರಿಶಿಷ್ಟ ವರ್ಗದ ಕುಟುಂಬವೊಂದು ಗುರುವಾರ ಬೆಳಗ್ಗೆ ನಿಟ್ಟೂರು ಗ್ರಾಮದಲ್ಲಿರುವ ಮುಳುಕಟ್ಟಮ್ಮ ದೇವಾಲಯಕ್ಕೆ ಪೂಜೆ ಸಲ್ಲಿಸಲು ಬಂದಿತ್ತು. ಈ ವೇಳೆ ದೇವಾಲಯದ ಅರ್ಚಕರು ಜಾತಿಧೋರಣೆ ತೋರಿದ್ದು, ಪೂಜೆ ಮಾಡದೆ ಕುಟುಂಬದವರನ್ನು ಹೊರಗಡೆ ಕಳುಹಿಸಿದ್ದಾರೆ.

ನಿಟ್ಟೂರು ಗ್ರಾಮದ ಯುವಕ ಅನಿಲ್‌ ರಾಜ್‌ ಈ ಬಗ್ಗೆ ಮಾತನಾಡಿದ್ದು, "ಮುಳುಕಟ್ಟಮ್ಮ ದೇವರನ್ನು ನಂಬಿರುವ ಕಡಬ ಗ್ರಾಮದ ಕುಟುಂಬ ಹೂವು, ಕಾಯಿಯೊಂದಿಗೆ ಬೆಳಗ್ಗೆ ದೇವಾಲಯಕ್ಕೆ ತೆರಳಿದೆ. ಈ ವೇಳೆ . ದೇವಾಲಯದ ಅರ್ಚಕ ಅವರನ್ನು ದೇವಾಲಯದ ಬಾಗಿಗಲ್ಲೇ ತಡೆದಿದ್ದಾರೆ. ಕಾಣಿಕೆಯನ್ನು ಸಹ ಸ್ವೀಕರಿಸಲು ನಿರಾಕರಿಸಿದ್ದಾರೆ. ಬಳಿಕ ಹೊರಗೆ ಕಳುಹಿಸಿದ್ದಾರೆ," ಎಂದು ಹೇಳಿದ್ದಾರೆ.

Priest In Tumakuru Refuses To Perform Puja For Scheduled Caste Family

ಇನ್ನು ಮತ್ತೋರ್ವ ಯುವಕ ಶಶಿ ಕೂಡ ಈ ಘಟನೆಯ ಬಗ್ಗೆ ಮಾತನಾಡಿ, "ಮುಳುಕಟ್ಟಮ್ಮ ದೇವಾಲಯದಲ್ಲಿ ಪೂಜೆ ಮಾಡಲು ನಿರಾಕರಿಸಿದ ಅರ್ಚಕರು ನಮ್ಮ ಸಂಬಂಧಿಕರನ್ನು ಗದರಿ ಹೊರಗೆ ಕಳುಹಿಸಿದ್ದರು. ವಿಷಯ ತಿಳಿದು ಕಡಬದಿಂದ ನಿಟ್ಟೂರಿಗೆ ಹೋದಾಗ ಅವರು ದೇವಾಲಯದಿಂದ ಹೊರಗೆ ನಿಂತಿದ್ದರು. ಕೇಳಿಕೊಂಡರೂ ಅರ್ಚಕರೂ ಪೂಜೆ ಮಾಡಲಿಲ್ಲ. ಟ್ರಸ್ಟಿಗಳು ಹೇಳಿದರೆ ಮಾತ್ರ ಪೂಜೆ ಮಾಡುವುದಾಗಿ ಹೇಳಿದರು" ಎಂದರು.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸಮಾಜ ಕಲ್ಯಾಣ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ದೇವಾಲಯಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೇ ದೇವಾಲಯದಲ್ಲಿ ಎಲ್ಲರಿಗೂ ಮುಕ್ತ ಪ್ರವೇಶವಿದೆ ಎಂದು ಬೋರ್ಡ್ ಅಳವಡಿಸುವಂತೆ ಸೂಚಿಸಿದ್ದಾರೆ.

ಘಟನೆಯ ಗಂಭೀರತೆ ಬಗ್ಗೆ ತಿಳಿದ ಮುಳುಕಟ್ಟಮ್ಮ ದೇವಾಲಯದ ಟ್ರಸ್ಟಿಗಳು ಕೂಡಲೇ ಸಭೆ ನಡೆಸಿ, ಮಾತುಕತೆ ನಡೆಸಿ ಶಾತಿಯುತವಾಗಿ ಪ್ರಕರಣವನ್ನು ಬಗೆ ಹರಿಸಿದ್ದಾರೆ. ಅಲ್ಲದೇ ಎಲ್ಲಾ ಸಮುದಾಯದವರಿಗೂ ದೇವಾಲಯದ ಒಳಗೆ ಮುಕ್ತ ಪ್ರವೇಶಕ್ಕೆ ಅವಕಾಶ ನೀಡುತ್ತೇವೆ. ಇಂತಹ ಪ್ರಕರಣಗಳು ಮುಂದೆ ನಡೆಯದಂತೆ ಎಚ್ಚರ ವಹಿಸುತ್ತೇವೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಇನ್ನು ತಹಶೀಲ್ದಾರ್ ಬಿ. ಆರತಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇನ್ನು ಸ್ಥಳೀಯ ಪೊಲೀಸರು ಕೂಡ ಘಟನಾ ಸ್ಥಳಕ್ಕೆ ತೆರಳಿದ್ದು, ಈ ರೀತಿಯ ಘಟನೆಗಳು ನಡೆಯಬಾರದು ಎಲ್ಲರ ನಡುವೆ ಉತ್ತಮ ಬಾಂಧವ್ಯ ಬೆಳಸಿಕೊಳ್ಳಬೇಕು ಇಲ್ಲವಾದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+