• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತುಮಕೂರು ಮಾಜಿ ಮೇಯರ್ ಗಡ್ಡರವಿ ಹತ್ಯೆ ಆರೋಪಿಗೆ ಪೊಲೀಸರ ಗುಂಡೇಟು

By ತುಮಕೂರು ಪ್ರತಿನಿಧಿ
|

ತುಮಕೂರು, ಅಕ್ಟೋಬರ್ 7: ತುಮಕೂರು ಮಾಜಿ ಮೇಯರ್ - ರೌಡಿಶೀಟರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಹತ್ಯೆ ಪ್ರಕರಣದ ಆರೋಪಿಗಳ ಪೈಕಿ ಒಬ್ಬನಾದ ರಾಜೇಶ್ ಅಲಿಯಾಸ್ ರಾಜಿ ಮೇಲೆ ಶನಿವಾರ ಡಿಎಸ್ ಪಿ ನಾಗರಾಜು ಗುಂಡು ಹಾರಿಸಿದ್ದು, ಸದ್ಯಕ್ಕೆ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ರವಿ ಕುಮಾರ್ ಹತ್ಯೆಗಾಗಿ ಬಳಸಿದ್ದು ಎನ್ನಲಾದ ಲಾಗ್ ಹಾಗೂ ಮೊಬೈಲ್ ಗಳ ಜಪ್ತಿಗಾಗಿ ವಸಂತನರಸಾಪುರದ ಹತ್ತಿರ ಲಿಂಗನಹಳ್ಳಿ ಅರಣ್ಯಪ್ರದೇಶಕ್ಕೆ ರಾಜೇಶ್ ಅಲಿಯಾಸ್ ರಾಜಿಯನ್ನು ಪೊಲೀಸರು ಕರೆದೊಯ್ದಿದ್ದರು. ಆ ವೇಳೆ ಪೊಲೀಸರನ್ನು ತಳ್ಳಿದ ಆತ, ಕೋರಾ ಸಬ್ ಇನ್ ಸ್ಪೆಕ್ಟರ್ ರವಿಕುಮಾರ್ ತಲೆ ಮೇಲೆ ಕಲ್ಲು ಹಾಕಲು ಯತ್ನಿಸಿದ್ದಾನೆ. ಅದು ಅವರ ತೋಳಿಗೆ ಬಿದ್ದಿದೆ.

ತುಮಕೂರು ಮಾಜಿ ಮೇಯರ್ ರವಿ ಕುಮಾರ್ ಹತ್ಯೆ ನಡೆದಿದ್ದು ಹೇಗೆ?

ತನಿಖಾ ತಂಡದ ಅಧಿಕಾರಿ ಡಿಎಸ್ ಪಿ ನಾಗರಾಜು ತಮ್ಮ ರಿವಾಲ್ವರ್ ನಿಂದ ರಾಜೇಶ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಆ ನಂತರ ರಾಜೇಶ್ ಹಾಗೂ ಗಾಯಗೊಂಡ ಸಬ್ ಇನ್ ಸ್ಪೆಕ್ಟರ್ ರವಿಕುಮಾರ್ ರನ್ನು ತುಮಕೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ತುಮಕೂರಿನ ಗಡ್ಡ ರವಿಯದು ನೂರಾರು ಕೋಟಿ ಸಾಮ್ರಾಜ್ಯವೆ? ಕೊಲೆಗೆ ಕಾರಣ?

ಸೆಪ್ಟೆಂಬರ್ ಮೂವತ್ತನೇ ತಾರೀಕು ತುಮಕೂರಿನ ಬಟವಾಡಿ ಸೇತುವೆ ಬಳಿ ಗಡ್ಡ ರವಿಯನ್ನು ಹತ್ಯೆ ಮಾಡಲಾಗಿತ್ತು. ಆ ನಂತರ ಸುಜಯ್ ಭಾರ್ಗವ್ ಹಾಗೂ ರಘು ಎಂಬಿಬ್ಬರು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದರು.

English summary
Tumakuru police shoot out on former mayor murder accused Rajesh on Saturday. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X