ಸದಾಶಿವ ಆಯೋಗ ವರದಿ ಜಾರಿಗೆ ನನ್ನ ವಿರೋಧವಿಲ್ಲ: ಜಿ. ಪರಮೇಶ್ವರ್

ತುಮಕೂರು, ಜನವರಿ 16: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಜಾರಿಗೆ ನನ್ನ ವಿರೋಧವಿಲ್ಲ. ಈಗಾಗಲೇ ಸಿಎಂ ಜೊತೆ ಚರ್ಚಿಸಿ ಎಲ್ಲರ ಸಲಹೆ ಸೂಚನೆ ಪಡೆಯಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.

ತುಮಕೂರಿನ ಕೊರಟಗೆರೆ ತಾಲೂಕಿನ ಕೋಳಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಈ ವರದಿ ಸರ್ಕಾರದ ಮಟ್ಟದಲ್ಲಿ ಮಾತ್ರ ಬಹಿರಂಗವಾಗಿದೆ. ನಿನ್ನೆ ಸಭೆಯಲ್ಲಿ ಅನೇಕ ಸಚಿವರು ಹಾಗೂ ಶಾಸಕರೂ ಈ ವರದಿ ಬಗ್ಗೆ ಗೊತ್ತಿಲ್ಲದವರೇ ಇದ್ದರು. ಕಾನೂನು ಸಲಹೆ ಪಡೆದು ತೀರ್ಮಾನ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ ಎಂದರು.

ಈ ವಿಚಾರವನ್ನೇ ಇಟ್ಟುಕೊಂಡು ಹಲವರು ರಾಜಕೀಯ ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ಪರಮೇಶ್ವರ್ ನ ಕಟ್ಟಿಹಾಕಬೇಕು ಎಂದು ಅಪಪ್ರಚಾರ ಮಾಡುತ್ತಿದ್ದಾರೆ, ಬಿಜೆಪಿಯ ಹುಚ್ಚಯ್ಯ,ಅವರಿಗೆ ತಿಳಿದಿರೋ ಭಾಷೆಯಲ್ಲಿ ಮಾತನಾಡುತ್ತಾರೆ .ಸಾರ್ವಜನಿಕ ಜೀವನದಲ್ಲಿ ನಾವೆಲ್ಲಾ ಚುನಾವಣೆಗೆ ಬರುತ್ತೇವೆ ಆದರೆ ಮತ ಹಾಕೋದು ಬಿಡೋದು ಜನರ ತಿರ್ಮಾನ ಎಂದು ಹೇಳಿದರು.

Parameshwar clarifies never opposed implementation of internal reservations

ಸಾರ್ವಜನಿಕವಾಗಿ‌ ನಾವು ಹೇಗೆ ನಡೆದುಕೊಳ್ಳುತ್ತೇವೆ, ಬೇರೆ ಅವರ‌ ಬಗ್ಗೆ ಹೇಗೆ ಮಾತನಾಡುತ್ತೇವೆ ಎನ್ನುವುದು ಅವರಿಗೆ ಬಿಟ್ಟಿದ್ದು. ಅವರ ವ್ಯಕ್ತಿತ್ವ ಎಂಥದ್ದು ಎಂದು ಅದರ ಮೇಲೆ ಗೊತ್ತಾಗುತ್ತದೆ ನಾನು ಟೀಕೆ ಮಾಡುವುದಿಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+