ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಸೃಷ್ಟಿ: ಪ್ರೊ ಸಿದ್ದೇಗೌಡ
ತುಮಕೂರು, ಸೆ. 20: ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ, ವೃತ್ತಿಪರತೆ, ಪ್ರತಿಭೆಯನ್ನು ವಿದ್ಯಾರ್ಥಿಯಲ್ಲಿ ಬೆಳೆಸುವುದಷ್ಟೇ ಅಲ್ಲದೆ, ಮೌಲ್ಯಗಳನ್ನೂ ಪೋಷಿಸುವ ಗುರಿ ಇಟ್ಟುಕೊಂಡಿದೆ ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ(ಪಿಆರ್ ಸಿಐ)ದಿಂದ ಉತ್ತಮ ಆಡಳಿತಕ್ಕಾಗಿ 'ಚಾಣಕ್ಯ' ಪ್ರಶಸ್ತಿ ಸ್ವೀಕರಿಸಿದ ಹಿನ್ನೆಲೆಯಲ್ಲಿ ತುಮಕೂರು ವಿಶ್ವ ವಿದ್ಯಾಲಯ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಜವಾಬ್ದಾರಿ ವಹಿಸಿದವರ ನಂಬಿಕೆಗೆ ಚ್ಯುತಿ ಬರದ ಮತೆ ಕರ್ತವ್ಯ ನಡೆಸುವುದು ಉತ್ತಮ ಆಡಳಿತಗಾರರ ಲಕ್ಷಣ. ಹೀಗಾಗಿ ಪ್ರತಿಯೊಬ್ಬರು ತಮಗೆ ನೀಡಿದ ಜವಾಬ್ಧಾರಿಯನ್ನು ಯಾರ ನಂಬಿಕೆಗೂ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಕರ್ನಲ್ ಪ್ರೊ. ಸಿದ್ದೇಗೌಡ ಅವರು ತಿಳಿಸಿದರು.

ಯಾರನ್ನೂ ಮೆಚ್ಚಿಸಲು ನಾವು ಕೆಲಸ ಮಾಡಬಾರದು. ನಮ್ಮ ಆತ್ಮ ತೃಪ್ತಿಗಾಗಿ ಕೆಲಸ ಮಾಡಬೇಕು. ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಮೌಲ್ಯವರ್ಧನೆಯಾಗುವಂತೆ ನೋಡಿಕೊಳ್ಳಬೇಕು. ಸಮಾಜದಲ್ಲಿ ನಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕು ಎಂದು ಕಿವಿಮಾತು ಹೇಳಿದರು.
ಸದಾ ಸಮಾಜಮುಖಿ ಹಾಗೂ ಸಕಾರಾತ್ಮಕ ಯೋಚನೆ ಮಾಡಬೇಕು. ಆಗ ಆರೋಗ್ಯ ಮತ್ತು ಆಯುಷ್ಯ ಎರಡೂ ವೃದ್ಧಿಯಾಗುತ್ತದೆ. ಇದರಿಂದ ಕುಟುಂಬ, ಸಮಾಜ ಹಾಗೂ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಇದೇ ಚೌಕಟ್ಟನ್ನು ಇಟ್ಟುಕೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ, ವೃತ್ತಿಪರತೆ, ಪ್ರತಿಭೆಯನ್ನು ವಿದ್ಯಾರ್ಥಿಯಲ್ಲಿ ಬೆಳೆಸುವುದಷ್ಟೇ ಅಲ್ಲದೆ, ಮೌಲ್ಯಗಳನ್ನೂ ಪೋಷಿಸುವ ಗುರಿ ಇಟ್ಟುಕೊಂಡಿದೆ. ನೂತನ ಶಿಕ್ಷಣ ನೀತಿಯನ್ನು ಪ್ರಾಮಾಣಿಕವಾಗಿ ಜಾರಿಗೆ ಎಲ್ಲರೂ ಪ್ರಯತ್ನಿಸಬೇಕು ಎಂದರು.

ಸಕಾರಾತ್ಮಕ ಯೋಚನೆಯಿಂದ ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗುತ್ತದೆ. ಇದರಿಂದ ಕುಟುಂಬ, ಸಮಾಜ ಹಾಗೂ ಇಡೀ ರಾಷ್ಟ್ರಕ್ಕೆ ಒಳ್ಳೆಯದಾಗುತ್ತದೆ. ಇದೇ ಚೌಕಟ್ಟನ್ನು ಇಟ್ಟುಕೊಂಡಿರುವ ಕುಲಪತಿಗಳನ್ನು ಅಭಿನಂದಿಸಿ ಮಾತನಾಡಿದ ಕುಲಸಚಿವ ಪ್ರೊ. ಕೆ. ಶಿವಚಿತ್ತಪ್ಪ, ಕುಲಪತಿಗಳಿಗೆ ಸಂದ ಪ್ರಶಸ್ತಿ ತುಮಕೂರು ವಿವಿಯ ಗೌರವವನ್ನು ಹೆಚ್ಚಿಸಿದೆ. ಅವರ ಕಾರ್ಯವೈಖರಿ, ಬದ್ಧತೆ, ಸಮಯಪ್ರಜ್ಞೆ ಹಾಗೂ ನಾಯಕತ್ವ ಎಲ್ಲರಿಗೂ ಮಾದರಿ ಎಂದರು.
ಪ್ರೊ. ಸಿದ್ದೇಗೌಡ ಅವರು ಜೀವನದಲ್ಲಿ ಕಷ್ಟಪಟ್ಟು ಮುಂದೆ ಬಂದವರು. ತಮ್ಮ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳು ಉನ್ನತ ಸ್ಥಾನಮಾನ ಪಡೆಯಬೇಕೆಂದು ಬಯಸಿದವರು. ನಡೆನುಡಿಯಲ್ಲಿ ಎಲ್ಲರನ್ನೂ ಪ್ರಭಾವಿಸಿದವರು. ಕೋವಿಡ್ ಸಮಯದಲ್ಲಿ ಅವರು ತೋರಿದ ನಾಯಕತ್ವದಿಂದ ತುಮಕೂರು ವಿವಿಗೆ ರಾಷ್ಟ್ರಮಟ್ಟದಲ್ಲಿ ಒಳ್ಳೆಯ ಹೆಸರು ಬಂದಿದೆ ಎಂದು ಅವರು ಅಭಿಪ್ರಾಯಪಟ್ಟರು. ಪರೀಕ್ಷಾಂಗ ಕುಲಸಚಿವ ಪ್ರೊ. ನಿರ್ಮಲ್‍ರಾಜು ಸ್ವಾಗತಿಸಿದರು. ಹಣಕಾಸು ಅಧಿಕಾರಿ ನರಸಿಂಹಮೂರ್ತಿ ವಂದಿಸಿದರು. ಡಾ. ಜಾಯ್ ನೆರೆಲ್ಲಾ, ಡಾ. ಡಿ. ಸುರೇಶ್ ಹಾಗೂ ಡಾ. ಮಂಗಳಾಗೌರಿ ಎಂ. ಉಪಸ್ಥಿತರಿದ್ದರು.

ಹದಿನಾಲ್ಕು ವಿಷಯಗಳ ಪಠ್ಯ ಕ್ರಮ ಸಮಿತಿಗೆ ನಾಯಕತ್ವ: ಕರ್ನಲ್ ಪ್ರೊ. ಸಿದ್ದೇಗೌಡ ಅವರು ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಮ್ಮದೇ ಅಮೂಲ್ಯ ಕೊಡುಗೆ ನೀಡಿದ್ದಾರೆ. ಪ್ರಸಕ್ತ ಸಾಲಿನ ಮೊದಲ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳಿಗೆ ಹದಿನಾಲ್ಕು ವಿಷಯಗಳಿಗೆ ಪಠ್ಯ ಕ್ರಮವನ್ನು ರಚಿಸಿದ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾಲಮಿತಿಯೊಳಗೆ ಹದಿನಾಲ್ಕು ವಿಷಯಗಳ ಪಠ್ಯಕ್ರಮ ತಯಾರಿಸಿ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ಗೆ ಸಲ್ಲಿಸಿದ್ದರು. ಈ ಮೂಲಕ ಮುಂದಿನ ತಿಂಗಳು ಐದರಿಂದ ಆರಂಭವಾಗಲಿರುವ ಕಾಲೇಜು ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳಿಗೆ ಅಲೆದಾಡದಂತೆ ಪಠ್ಯಕ್ರಮ ರಚನೆ ಮಾಡಿ ಸರ್ಕಾರಕ್ಕೆ ಸಲ್ಲಿಸಿ ಶಿಕ್ಷಣ ಇಲಾಖೆಯಲ್ಲಿ ಗಮನ ಸೆಳೆದಿದ್ದಾರೆ.
ಕರ್ನಲ್ ಪ್ರೊ. ಸಿದ್ದೇಗೌಡ ಅವರು ಕಳೆದ 39 ವರ್ಷ ರಾಜ್ಯದ ಶೈಕ್ಷಣಿಕ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಈವರೆಗೂ 147 ಸಂಶೋಧನೆ ಆಧಾರಿತ ಲೇಖನ ಬರೆದಿದ್ದು, ಆರು ಪುಸ್ತಕ ಬರೆದಿದ್ದಾರೆ. ಬರೋಬ್ಬರಿ ಹದಿನೇಳು ಸಂಶೋಧನಾ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಸುಮಾರು 26 ಮಂದಿ ಪಿಎಚ್‌ಡಿ ಡಾಕ್ಟರೇಟ್ ಪದವಿ ಪಡೆಯಲು ಗುರುಗಳಾಗಿ ಜ್ಞನವನ್ನು ಧಾರೆ ಎರೆದಿದ್ದಾರೆ. ಅಂತಾರಾಷ್ಟ್ರಯ ಮಟ್ಟದ ಜರ್ನಲ್‌ಗಳ ಸಂಪಾದಕರಾಗಿ ಸೇವೆ ಮಾಡಿದ್ದು, ಪ್ರಸ್ತುತ ತುಮಕೂರು ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತುಮಕೂರು ವಿವಿಗೆ ಹೊಸ ಕಾಯಕಲ್ಪ: ತನ್ನ ಅನುಭವ ಹಾಗೂ ಜ್ಞಾನದಿಂದ ತುಮಕೂರು ವಿಶ್ವ ವಿದ್ಯಾಲಯದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ಮಹಿಳಾ ಅಧ್ಯಯನ, ಸಮಾಜ ಕಾರ್ಯ, ಹಾಗು ಪತ್ರಿಕೋದ್ಯಮ ವಿಭಾಗದಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಕಲೋನಲ್, ಕಲೋನಲ್ ಕಮಾಂಡಂಟ್ ಆಫ್ ನ್ಯಾಷನಲ್ ಕ್ರೆಡಿಟ್ ಕಾರ್ಪ್ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದಿಂದ ಪಡೆದಿದ್ದಾರೆ. ಇದಲ್ಲದೇ "The Most Dedicated Vice Chancellor." ಎಂಬ ಪ್ರಶಸ್ತಿಯನ್ನು ಸಿದ್ದೇಗೌಡರು ಪಡೆದಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ -
ಬೆಂಗಳೂರು ಏರ್ಪೋರ್ಟ್ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್ಪೋರ್ಟ್'ಪ್ರಶಸ್ತಿ -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ












Click it and Unblock the Notifications