• search
 • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಚಿವ ಜಮೀರ್ ಹೆಲ್ಮೆಟ್ ಇಲ್ಲದೇ ತ್ರಿಬಲ್ ರೈಡ್: ನಾವಾದ್ರೆ ಸುಮ್ನೆ ಬಿಡ್ತಾ ಇದ್ರಾ?

|
   ಕುಣಿಗಲ್ ನಲ್ಲಿ ಸಂಚಾರಿ ನಿಯಮವನ್ನ ಮುರಿದ ಜಮೀರ್ ಅಹ್ಮದ್ ಖಾನ್ | Oneindia Kannada

   ತುಮಕೂರು, ಸೆ 29: ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೇ ಕಾನೂನು ಉಲ್ಲಂಘಿಸಿದರೆ ಹೇಗೆ ಅದನ್ನು ನೋಡಿಯೂ ಪೊಲೀಸರು ಸುಮ್ಮನಾದರೆ ಏನು ಮಾಡೋಣ? ಈ ರೀತಿಯ ಪ್ರಶ್ನೆ ಜಿಲ್ಲೆಯ ಕುಣಿಗಲ್ ಜನತೆಗೆ ಕಾಡಿದ್ದು, ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯ ಸಚಿವ ಜಮೀರ್ ಅಹಮದ್ ಖಾನ್ ಅವರಿಂದ..

   ಜಮೀರ್ ಅಹಮದ್ ಕಾಂಗ್ರೆಸ್‌ನ ಹೊಸ ಟ್ರಬಲ್ ಶೂಟರ್!

   ಹೆಲ್ಮೆಟ್ ಹಾಕಿಕೊಳ್ಳದೇ ಬೈಕ್ ರೈಡ್ ಮಾಡಿದ ಜಮೀರ್, ತಮ್ಮ ಜೊತೆ ಇನ್ನಿಬ್ಬರನ್ನು ಕೂರಿಸಿಕೊಂಡು ಕುಣಿಗಲ್ ರಸ್ತೆಯಲ್ಲಿ ಬೈಕ್ ಚಲಾಯಿಸಿದ್ದಾರೆ. ಸಚಿವರೂ ಹೆಲ್ಮೆಟ್ ಹಾಕಿಕೊಂಡಿರಲಿಲ್ಲ, ಅವರ ಜೊತೆಗಿದ್ದ ಇನ್ನಿಬ್ಬರು ಪಿಲ್ಲನ್ ಡ್ರೈವರ್ಸ್ ಶಿರಸ್ತ್ರಾಣ ಧರಿಸಿರಲಿಲ್ಲ.

   ಅನ್ನಭಾಗ್ಯ ಯೋಜನೆ : ಮುಖ್ಯಮಂತ್ರಿಗಳಿಗೆ ಜಮೀರ್ ಪತ್ರ

   ಸಚಿವ ಜಮೀರ್ ಜೊತೆ, ಕುಣಿಗಲ್ ಶಾಸಕ ರಂಗನಾಥ್ ಕೂಡಾ ತ್ರಿಬಲ್ ರೈಡ್ ಮಾಡುವ ಮೂಲಕ ಟ್ರಾಫಿಕ್ ನಿಯಮವನ್ನು ಗಾಳಿಗೆ ತೂರಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ದರೂ, ಪೊಲೀಸರು ಸಚಿವರಿಗೆ ಮತ್ತು ಶಾಸಕರಿಗೆ ಬಂದೋಬಸ್ತ್ ನೀಡಿದ್ದಾರೆ.

   ಕಾನೂನು ಅನ್ನೋದು ಎಲ್ಲರಿಗೂ ಒಂದೇ, ಇದೇ ಜನಸಾಮಾನ್ಯ ಏನಾದರೂ ಕಾನೂನು ಉಲ್ಲಂಘನೆ ಮಾಡಿದ್ದರೆ, ನೀವು ಕ್ರಮ ತೆಗೆದುಕೊಳ್ಳುತ್ತಿರಲಿಲ್ಲವೇ ಎಂದು ಸಾರ್ವಜನಿಕರು ಪೊಲೀಸರನ್ನು ಪ್ರಶ್ನಿಸಿದ್ದಾರೆ.

   ಮೈತ್ರಿ ಸರ್ಕಾರದ ಬಜೆಟ್‌ಗೆ ಮಂತ್ರಿಗಳಿಂದಲೇ ಅಸಮಾಧಾನ!

   ಖಾಸಗಿ ಕಾರ್ಯಕ್ರಮದ ನಿಮಿತ್ತ, ಕುಣಿಗಲ್ ಪಟ್ಟಣದ ದಿವ್ಯಾ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದ ಜಮೀರ್‌ ಅವರನ್ನು ಕಾಂಗ್ರೆಸ್‌ ಕಾರ್ಯಕರ್ತರು ಸ್ವಾಗತಿಸಿದರು. ನಂತರ, ಕಾರ್ಯಕರ್ತರ ಬುಲೆಟ್ ಬೈಕ್ ಅನ್ನು ತಾವೇ ಓಡಿಸಿಕೊಂಡು, ಜೊತೆಗೆ ಇನ್ನಿಬ್ಬರನ್ನು ಕೂರಿಸಿಕೊಂಡು ಕಲ್ಯಾಣ ಮಂಟಪದತ್ತ ತೆರಳಿದ್ದಾರೆ.

   ಹಜ್ ಭವನಕ್ಕೆ ಟಿಪ್ಪು ಹೆಸರು : ಸ್ಪಷ್ಟನೆ ನೀಡಿದ ಜಮೀರ್ ಅಹಮದ್

   ಬೆಂಬಲಿಗರ ಮತ್ತು ಕಾರ್ಯಕರ್ತರ ಜೈಕಾರದೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ ಜಮೀರ್ ಅವರನ್ನು, ಶಾಸಕ ರಂಗನಾಥ್ ಜೊತೆಗೂಡಿದ್ದಾರೆ. ಅವರೂ, ತಮ್ಮ ಬೈಕ್ ನಲ್ಲಿ ಮೂವರನ್ನು ಕೂರಿಸಿಕೊಂಡು, ಹೆಲ್ಮೆಟ್ ಇಲ್ಲದೇ ಬರುತ್ತಿದ್ದರು.

   English summary
   Karnataka food and civil supply Minister Zameer Ahmed Khan and Kunigal MLA Dr. Ranganath not followed the traffic rules, by not wearing the helmet.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X