ಚುನಾವಣೆ ದಿನ ಗೃಹ ಸಚಿವರ ತವರು ಕ್ಷೇತ್ರದಲ್ಲಿ 10 ಗುಡಿಸಲುಗಳಿಗೆ ಬೆಂಕಿ: ಆಗಿದ್ದೇನು?
ಬೆಂಗಳೂರು, ಏಪ್ರಿಲ್ 26: ರಾಜ್ಯದಲ್ಲಿ ಎಲ್ಲರ ಚಿತ್ತ ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನದತ್ತ ನೆಟ್ಟಿದೆ. ತುಮಕೂರು ಕ್ಷೇತ್ರದಲ್ಲಿ ಇಂದು ಮತದಾನ ನಡೆದಿದೆ. ಇದೇ ವೇಳೆ ಗೃಹ ಸಚಿವರ ತವರು ಕ್ಷೇತ್ರದಲ್ಲಿ ಹಲವು ಗುಡಿಸಲುಗಳಿಗೆ ಬಂಕಿ ಬಿದ್ದು, ಎಲ್ಲವು ಸುಟ್ಟು ಭಸ್ಮವಾಗಿವೆ.
ಹೌದು, ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪ್ರತಿನಿಧಿಸುವ ತುಮಕೂರು ಜಿಲ್ಲೆಯ ಕೊರಟಗೆರೆ (ತಾಲೂಕು) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮದಲ್ಲಿ ಸುಮಾರು 10 ಗುಡಿಸಲುಗಳಿಗೆ ಬೆಂಕಿಗೆ ಆಹುತಿಯಾಗಿವೆ. ಇದರಿಂದ ಎಲ್ಲ ಗುಡಿಸಲುಗಳು ಸುಟ್ಟು ಬೂದಿಯಾಗಿವೆ. ಹತ್ತಾರು ಕುಟುಂಬಸ್ಥರು ಗುಡಿಸಲು ಕಳೆದುಕೊಂಡು ಪರದಾಡಿದ್ದಾರೆ.

ಸ್ಥಳಕ್ಕೆ ಬಂದ ಚುನಾವಣಾಧಿಕಾರಿಗಳು
ಸಾರ್ವತ್ರಿಕ ಲೋಕಸಭಾ ಚುನಾವಣೆ ದಿನದಂದು ಗುಡಿಸಲಿಗೆ ಬಿದ್ದ ಬೆಂಕಿ ಬಿದ್ದಿವೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಕರ್ತವ್ಯನಿರತ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸುಮಾರು 5 ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿವೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಸುಟ್ಟು ಕರಕಲಾದ ಗುಡಿಸಲಲ್ಲಿದ್ದ ವಸ್ತುಗಳು
ಮತದಾನ ಮಾಡಲು ಮತಗಟ್ಟೆಗೆ ತೆರಳಿದ್ದ ವೇಳೆ ಗುಡಿಸಲಿಗೆ ಬಿದ್ದ ಬೆಂಕಿ ಅಪಾರ ದಾಸ್ತಾನು, ದವಸ, ಧಾನ್ಯಗಳು ಸೇರಿದಮತೆ ಇನ್ನಿತರ ವಸ್ತುಗಳು ಬೆಂಕಿಗೆ ಸುಟ್ಟು ಕರಕಲಾಗಿವೆ. ಖಾಲಿ ನಿವೇಶನದಲ್ಲಿದ್ದ ಗುಡಿಸಲುಗಳು ಸುಟ್ಟಿರುವುದು ಗೊತ್ತಾಗಿದೆ. ಇದು ಯಾರು ಮಾಡಿದ್ದು, ಆಕಸ್ಮಿಕವಾಗಿ ನಡೆದ ದುರ್ಘನೆಯೇ ಅಥವಾ ಇದರ ಹಿಂದೆ ದುರುದ್ದೇಶ ಇದೆಯೋ ಎಂದು ತನಿಖೆಯಿಂತ ಬಹಿರಂಗವಾಗಬೇಕಿದೆ.
ಮೇಕೆಗಳ ಸ್ಥಿತಿ ಚಿಂತಾಜನಕ
ಈ ಹಿಂದೆಯೂ ಸಿಲಿಂಡರ್ ಬ್ಲಾಸ್ಟ್ಆಗಿ ಅನೇಕ ಗುಡಿಸಲುಗಳು ಬೆಂಕಿಗೆ ಆಹುತಿಯಾಗಿದ್ದ ಸ್ಥಳದಲ್ಲಿ ಮತ್ತೆ ಈ ಘಟನೆ ನಡೆದಿರುವುದು ಅನುಮಾನ ಮೂಡಿಸಿದೆ. ಗುಡಿಸಲಿಗೆ ಬೆಂಕಿ ಬಿದ್ದಾಗ ಪಕ್ಕದಲ್ಲಿಯೇ ಕಟ್ಟಿದ್ದ ಮೇಕೆಗಳಿಗೆ ಸುಟ್ಟ ಗಾಯಗಳಾಗಿವೆ. ಅವುಗಳ ಸ್ಥಿತಿ ಚಿಂತಾಜನಕವಾಗಿದೆ.

ಚಿಂಪುಗಾನಹಳ್ಳಿ ಗ್ರಾಮದ ಸುತ್ತಮುತ್ತ ಈ ರೀತಿ ಬೆಂಕಿ ಅವಘಡದ ಘಟನೆಗಳು ಆಗಾಗ ಮರುಕಳಿಸುತ್ತಲೇ ಇವೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ನಿವೇಶನ ಹಂಚಿ ಮನೆ ಕಟ್ಟಿಸಿ ಕೊಡಬೇಕು. ಸಂಭವನೀಯ ಅಪಾಯಗಳನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.












Click it and Unblock the Notifications