ತುಮಕೂರು: ನಿಶ್ಚಿತಾರ್ಥದ ದಿನ ಯುವಕನನ್ನು ಸುಟ್ಟುಹಾಕಿದ ದುರುಳರು!
ತುಮಕೂರು, ಸೆಪ್ಟೆಂಬರ್ 2: ನಿಶ್ಚಿತಾರ್ಥದ ದಿನವೇ ಯುವಕನೊಬ್ಬ ಸುಟ್ಟ ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ತುಮಕೂರು ಜಿಲ್ಲೆಯ ದಂಡಿನಶಿವರ ಎಂಬಲ್ಲಿ ನಡೆದಿದೆ.
ಇಂದು(ಸೆಪ್ಟೆಂಬರ್ 2) ನಿಶ್ಚಿತಾರ್ಥವಾಗಿ ಹೊಸ ಬದುಕಿನ ಕನಸು ಹೊಸೆಯಬೇಕಿದ್ದ ಯುವಕ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ.

ಯಾರೋ ಕಿಡಿಗೇಡಿಗಳು ಯುವಕನನ್ನು ಕೊಲೆ ಮಾಡಿ, ಶವವನ್ನು ಕಾರಿನಲ್ಲಿಟ್ಟು ಸುಟ್ಟಿದ್ದಾರೆಂದು ಶಂಕಿಸಲಾಗಿದ್ದು, ದಂಡಿನಶಿವರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಲಾಗುತ್ತಿದೆ.












Click it and Unblock the Notifications