ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕ ಜಂಗಮ: ಸಿದ್ದಗಂಗಾಶ್ರೀ ಸಾಕ್ಷ್ಯಚಿತ್ರ ಲೋಕಾರ್ಪಣೆ

By Mahesh
|
Google Oneindia Kannada News

ತುಮಕೂರು, ಡಿ.23: ತ್ರಿವಿಧ ದಾಸೋಹಿ ಪರಮಪೂಜ್ಯ ಸಿದ್ದಗಾಂಗಾಶ್ರೀ ಪರಮಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಬದುಕಿನ ಹಾದಿಯ ಕುರಿತ ಸಮಗ್ರ ಸಾಕ್ಷ್ಯಚಿತ್ರ ಇತ್ತೀಚೆಗೆ ಮಠದ ಆವರಣದಲ್ಲಿ ಲೋಕಾರ್ಪಣೆಗೊಂಡಿದೆ.

ಶ್ರೀಸಿದ್ದಗಂಗಾ ಮಠದಲ್ಲಿ ಪ್ರತಿ ವರ್ಷ ಜರುಗುವ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವಾರ್ಷಿಕ ಸಭೆಯ ವೇದಿಕೆಯಲ್ಲಿ, ಸುಮಾರು 5,000 ಜನ ಹಳೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪರಮಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಯವರು "ಲೋಕಜಂಗಮ" ಡಿವಿಡಿಗಳನ್ನು ಲೋಕಾರ್ಪಣೆಗೊಳಿಸಿದರು.

ಸಾಕ್ಷ್ಯಚಿತ್ರ ನಿರ್ಮಾಪಕರಾದ ಜರಗನಹಳ್ಳಿ ಕಾಂತರಾಜು, ನಿರ್ದೇಶಕ ಕೆ. ಎಸ್ ಪರಮೇಶ್ವರ ಮತ್ತವರ ತಂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. [ನಿರ್ದೇಶಕ ಪರಮೇಶ್ವರ. ಕೆ ಕಿರುಪರಿಚಯ]

ಸಾಕ್ಷ್ಯಚಿತ್ರದ ಡಿವಿಡಿಗಳು ಈಗಾಗಲೇ ಕರ್ನಾಟಕದಾದ್ಯಂತ ಮಾರಾಟಕ್ಕೆ ದೊರೆಯುವ ವ್ಯವಸ್ಥೆಯನ್ನು ತಂಡ ಮಾಡಿದೆ.ಒಟ್ಟು 90 ನಿಮಿಷಗಳ ಅವಧಿಯ ಈ ಸಾಕ್ಷ್ಯಚಿತ್ರದ ಪ್ರತಿ ಡಿವಿಡಿಯ ಬೆಲೆ 150 ರೂ ಮಾತ್ರ.

ಪ್ರತಿಯೊಬ್ಬ ಶಿವಕುಮಾರ ಸ್ವಾಮೀಜಿಯವರ ಭಕ್ತರ, ಅಭಿಮಾನಿಗಳ, ಶ್ರೀಮಠದ ಅನುಯಾಯಿಗಳ ಮನೆಯಲ್ಲಿ ಇರಲೇಬೇಕಾದ ಪವಿತ್ರ ಸಾಕ್ಷ್ಯಚಿತ್ರ ಇದಾಗಿದೆ ಎಂದು ನಿರ್ದೇಶಕ ಕೆಎಸ್ ಪರಮೇಶ್ವರ್ ಅವರು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.

ಪರಿಣಾಮಕಾರಿ ಮೂಡಿದ ಬಂದಿದೆ ಸಾಕ್ಷ್ಯಚಿತ್ರ

ಪರಿಣಾಮಕಾರಿ ಮೂಡಿದ ಬಂದಿದೆ ಸಾಕ್ಷ್ಯಚಿತ್ರ

"ಲೋಕ ಜಂಗಮ" ಸಾಕ್ಷ್ಯಚಿತ್ರದಲ್ಲಿ 107 ವಸಂತಗಳನ್ನು ಕಂಡು 108ರ ಹೊಸ್ತಿನಲ್ಲಿ ಮುನ್ನಡೆಯುತ್ತಿರುವ, ಪೂಜ್ಯರಾದ ಡಾ. ಶಿವಕುಮಾರ ಸ್ವಾಮಿಜಿಯವರು ನಡೆದು ಬಂದ ದಾರಿ, ಸಿದ್ದಗಂಗೆ ಪುಣ್ಯ ಕ್ಷೇತ್ರದ ಮಹಾತ್ಮೆ ಹಾಗೂ ಇತಿಹಾಸ ಇವುಗಳನ್ನು ಪರಿಣಾಮಕಾರಿಯಾಗಿ ತರುವ ಪ್ರಯತ್ನವಾಗಿ ಮೂಡಿ ಬಂದಿದೆ.

ಪರಮೇಶ್ವರ ಅವರ ಸಮರ್ಥ ನಿರ್ದೇಶನ

ಪರಮೇಶ್ವರ ಅವರ ಸಮರ್ಥ ನಿರ್ದೇಶನ

ಜೆ.ಕೆ ಮೂವೀಸ್ ಸಂಸ್ಥೆಯಡಿ ಜರಗನಹಳ್ಳಿ ಕಾಂತರಾಜುರವರು ನಿರ್ಮಿಸುತ್ತಿರುವ ಈ ಸಾಕ್ಷ್ಯಚಿತ್ರವನ್ನು ಯುವ ನಿರ್ದೇಶಕರಾದ ಪರಮೇಶ್ವರ ಮತ್ತವರ ತಂಡ ಸೇರಿ ಅತ್ಯಂತ ಶ್ರದ್ಧೆ, ಪರಿಶ್ರಮದಿಂದ ರೂಪಿಸುತ್ತಿದ್ದಾರೆ. ಈ ಹಿಂದೆ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಕುರಿತ 'ಮತ್ತೆ ಮತ್ತೆ ತೇಜಸ್ವಿ' ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ ಅನುಭವ ಪರಮೇಶ್ವರ್ ಅವರಿಗಿದೆ.

ಸುಮಾರು ಒಂದು ವರ್ಷಗಳ ಕಾಲ ಚಿತ್ರೀಕರಣ

ಸುಮಾರು ಒಂದು ವರ್ಷಗಳ ಕಾಲ ಚಿತ್ರೀಕರಣ

ಸುಮಾರು ಒಂದು ವರ್ಷಗಳ ಕಾಲ ತುಮಕೂರು, ಮೈಸೂರು, ಬೆಂಗಳೂರು, ಚಾಮರಾಜನಗರ, ಮಾಗಡಿ ತಾಲ್ಲೂಕು, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ನೆಲೆಸಿರುವ ಮಠದ ಹಾಗೂ ಪರಮಪೂಜ್ಯರ ಹಲವು ಅಪರೂಪದ ಸುಮಾರು 90 ಜನ ಒಡನಾಡಿಗಳನ್ನು, ಭಕ್ತರನ್ನು, ಹಳೆಯ ವಿದ್ಯಾರ್ಥಿಗಳನ್ನು, ಹಲವು ಧರ್ಮಗಳ ಮಠಾಧೀಶರನ್ನು, ಶರಣ ಪರಂಪರೆಯ ಕುರಿತು ಆಳವಾಗಿ ಸಂಶೋಧನೆ ಮಾಡಿರುವ ವಿದ್ವಾಂಸರನ್ನೂ ಮಾತನಾಡಿಸಿ ಸಾಕ್ಷ್ಯಚಿತ್ರಕ್ಕಾಗಿ ಮಾಹಿತಿ ಸಂಗ್ರಹ ಹಾಗೂ ಚಿತ್ರೀಕರಣ ಮಾಡಿಕೊಳ್ಳಲಾಗಿದೆ.

ಆಸಕ್ತರು ಡಿವಿಡಿಗಳಿಗಾಗಿ ಸಂಪರ್ಕಿಸಿ:

ಆಸಕ್ತರು ಡಿವಿಡಿಗಳಿಗಾಗಿ ಸಂಪರ್ಕಿಸಿ:

ಸಿದ್ದಗಂಗಾಶ್ರೀ ಸಾಕ್ಷ್ಯಚಿತ್ರ ಪಡೆಯಲು ಸಂಪರ್ಕಿಸಿ
Jaraganahalli Kantharaaju: 99807 66267

K.S Parameshwar : 90080 99686

English summary
A documentary film about Dr. Sri Sri Shivakumara Swamiji & Sri Siddaganga mutt, named "Loka Jangama" released recently at Siddaganga mutt premises. Its a 90 minutes documentary film directed by Parameshwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X