• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುಣಿಗಲ್ ಮಾರ್ಗದ ಬೆಂಗಳೂರು-ಹಾಸನ ರೈಲಿಗೆ ಚಾಲನೆ

By Mahesh
|

ತುಮಕೂರು, ನ.30: ಬಹುವರ್ಷಗಳ ಬೇಡಿಕೆಗೆ ಇದು ಬೆಲೆ ಸಿಗುತ್ತಿದೆ. ಬೆಂಗಳೂರು-ಹಾಸನ ರೈಲು ಕುಣಿಗಲ್ ಮಾರ್ಗದ ಪ್ರಯೋಗಾತ್ಮಕ ಚಾಲನೆ ಭಾನುವಾರ ಸಂಜೆಯಿಂದ ಅರಂಭವಾಗಲಿದೆ.

ನೆಲಮಂಗಲ, ಕುಣಿಗಲ್ ಹಾಗೂ ಬೆಳ್ಳೂರು ನಡುವಿನ ರೈಲು ಸಂಚಾರದ ಕಾಮಗಾರಿ ಬಹುತೇಕ ಭಾಗ ಮುಗಿದಿದ್ದು, ಬೆಳ್ಳೂರಿನಿಂದ ಯಡಿಯೂರಿನವರೆಗೂ ಸುಮಾರು 30 ಕಿ.ಮೀ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ಹಳಿಗಳ ಮೇಲೆ ಅಧಿಕಾರಿಗಳು ಪ್ರಯೋಗಾತ್ಮಕ ರೈಲು ಸಂಚಾರ ಮಾಡಲಿದ್ದಾರೆ.

2006ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕಕ್ಕಾಗಿ ಹಾಸನದಿಂದ ಶ್ರವಣ ಬೆಳಗೊಳಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಲಾಗಿತ್ತು ಆನಂತರ ಹಲವಾರು ಸಮಸ್ಯೆಗಳಿಂದ ಈ ಮಾರ್ಗದ ಕಾಮಗಾರಿ ಕುಂಠಿತವಾಗಿತ್ತು.

1996ರಲ್ಲಿ ಪ್ರಧಾನಿ ದೇವೇಗೌಡರ ಸಚಿವ ಸಂಪುಟದಲ್ಲಿ ಅಂದಿನ ರೈಲ್ವೆ ಸಚಿವರಾದ ಜಾಫರ್ ಷರೀಫ್ ಅವರು ರಾಜಧಾನಿಯಿಂದ ಹಾಸನಕ್ಕೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ನಂತರ 2008-09ರ ವೇಳೆಗೆ ಶೈಕ್ಷಣಿಕ ಕ್ಷೇತ್ರವಾದ ಬೆಳ್ಳೂರಿಗೂ ಕೂಡ ರೈಲ್ವೆ ಸಂಪರ್ಕಗಳಿಗೆ ಚಾಲನೆ ನೀಡಲಾಗಿತ್ತು. 2011-14ರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಚೆಲುವರಾಯಸ್ವಾಮಿ, ಎಚ್.ಡಿ.ಕುಮಾರಸ್ವಾಮಿ, ಡಿವಿ ಸದಾನಂದ ಗೌಡ ಅವರ ಪರಿಶ್ರಮದಿಂದ ರೈಲ್ವೆ ಕಾಮಗಾರಿ ಮತ್ತೆ ಆರಂಭವಾಯಿತು.

ಕುದುರೆ ಫಾರಂ ಭೂಸ್ವಾದೀನ ಸಮಸ್ಯೆ: ಆದರೆ ಯಡಿಯೂರು ಕುಣಿಗಲ್, ನೆಲಮಂಗಲ ಭಾಗಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಯಿತು. ಕುಣಿಗಲ್ ಪಟ್ಟಣದಲ್ಲಿ ಹಾದುಹೋಗುವ ರೈಲ್ವೆ ಹಳಿ ನಿರ್ಮಾಣಕ್ಕೆ ಇತಿಹಾಸ ಪ್ರಸಿದ್ಧ ಟಿಪ್ಪು ಸುಲ್ತಾನ್ ಕಾಲದ ಕುದುರೆ ಫಾರಂ ಅಡ್ಡ ಬಂದ ಪರಿಣಾಮ ಕಾಮಗಾರಿಗೆ ತೊಡಕು ಉಂಟಾಯಿತು. ರೈಲ್ವೆ ಹಳಿ ಹಾಕಲು ಉದ್ಯಮಿ ವಿಜಯ್ ಮಲ್ಯ ಕೂಡಾ ಅಡ್ಡಿಪಡಿಸಿದ್ದರು.

ಶಾಸಕ ಡಿ.ನಾಗರಾಜಯ್ಯನವರು ರೈಲ್ವೆ ಅಧಿಕಾರಿಗಳು ಮತ್ತು ಕುದುರೆ ಫಾರಂ ಅಧಿಕಾರಿಯೊಂದಿಗೆ ಸಭೆ ನಡೆಸಿ ಸಮಸ್ಯೆಯನ್ನು ಇತ್ಯರ್ಥಪಡಿಸಿ ಕಾಮಗಾರಿ ನಡೆಯಲು ಅನುವು ಮಾಡಿಕೊಟ್ಟರು.

ಕಾಮಗಾರಿ ಇನ್ನೂ ಬಾಕಿಯಿದೆ: ಇನ್ನು ನೆಲಮಂಗಲದವರೆಗೆ ಸೇತುವೆ ಕಾಮಗಾರಿಗಳು ಮುಗಿದಿದ್ದು ಹಳಿ ಜೋಡಣೆ ಮಾಡುವ ಕಾರ್ಯ ಬಾಕಿ ಇದೆ. ಬೆಳ್ಳೂರಿನಿಂದ ಯಡಿಯೂರಿನವರೆಗೆ ಜೋಡಿಸಿರುವ ಹಳಿಯ ಮೇಲೆ ಪ್ರಯೋಗಾತ್ಮಕವಾಗಿ ರೈಲು ಸಂಚರಿಸಲಿದೆ. ನಂತರ ಮಿಕ್ಕ ಭಾಗದಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟಾರೆ, ಬೆಂಗಳೂರು-ಹಾಸನದ ಸಾರ್ವಜನಿಕರ ಮಹತ್ವಾಕಾಂಕ್ಷೆಯ ರೈಲು ಯೋಜನೆ ಮುಂದಿನ ವರ್ಷದ ವೇಳೆಗೆ ಕಾರ್ಯರೂಪಕ್ಕೆ ಬರುವ ಎಲ್ಲಾ ಲಕ್ಷಣಗಳು ಕಾಣಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tumkur: The Union railway ministry has also given a nod to the Hassan–Bangalore railway line via Shravanabelagola, it would take the line bifurcating the Kunigal stud farm in Tumkur district. The trail run will begin from Nov.30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more