ತುಮಕೂರು: 'ನಿನ್ ಯೋಗ್ಯತೆಗೆ ಬೆಂಕಿ ಹಾಕಾ'; ಪರಸ್ಪರ ಕಿತ್ತಾಡಿಕೊಂಡ ಸಂಸದ- ಶಾಸಕ
ತುಮಕೂರು, ಆಗಸ್ಟ್ 14: ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಹಾಗೂ ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಸಾರ್ವಜನಿಕ ವೇದಕೆಯಲ್ಲೇ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿ. ನಂದಿಹಳ್ಳಿಯಲ್ಲಿ ಶನಿವಾರ ಬೆಸ್ಕಾಂ ವಿದ್ಯುತ್ ಎಂಎಸ್ಎಸ್ ಸ್ಟೇಷನ್ ಉದ್ಘಾಟನೆ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಇಬ್ಬರು ಪರಸ್ಪರ ಕೈ ಕೈ ತೋರಿಸಿಕೊಂಡು ಬೈದಾಡಿಕೊಂಡಿದಿದ್ದಾರೆ.
ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ 500 ಕೋಟಿ ರೂ. ಮೀಸಲಿಟ್ಟಿದೆ ಎಂದು ಕಾರ್ಯಕ್ರಮದಲ್ಲಿ ತುಮಕೂರು ಸಂಸದ ಜಿ.ಎಸ್. ಬಸವರಾಜು ಹೇಳಿದ್ದಾರೆ. ಈ ವೇಳೆ ಅಲ್ಲೇ ಇದ್ದ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್, "ರೈತರಿಗೆ ಯಾಕೆ ಸುಳ್ಳು ಹೇಳ್ತೀಯಾ, ನಿನ್ ಯೋಗ್ಯತೆಗಿಷ್ಟು ಬೆಂಕಿ ಹಾಕಾ. ಸುಳ್ಯಾಕೆ ಬೊಗಳ್ತೀಯಾ, ವಯಸ್ಸಾಗಿದೆ ಈಗಲಾದರೂ ಸುಳ್ಳು ಹೇಳುವುದನ್ನು ನಿಲ್ಲಿಸು,'' ಎಂದು ಸಂಸದ ಬಸವರಾಜು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ಇಲ್ಲದ ವಿಚಾರವನ್ನು ಮಾತನಾಡಬೇಡ ನೀನು, ಅಯೋಗ್ಯ ನನ್ಮಗ," ಎಂದು ಶಾಸಕ ಹಾಗೂ ಸಂಸದರು ಪರಸ್ಪರ ಜಗಳವಾಡಿಕೊಂಡಿದ್ದಾರೆ.
Recommended Video
ಬೆಸ್ಕಾಂ ವಿದ್ಯುತ್ ಎಂಎಸ್ಎಸ್ ಸ್ಟೇಷನ್ ಉದ್ಘಾಟನೆ ವೇಳೆ ಸಂಸದ ಜಿ.ಎಸ್. ಬಸವರಾಜು, "ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ ಸರ್ಕಾರ 550 ಕೋಟಿ ರೂಪಾಯಿ ತಂದಿದ್ದೀವಿ ಎಂದು ಹೇಳಿದ್ದಕ್ಕೆ, ಶಾಸಕ ಎಸ್.ಆರ್.ಶ್ರೀನಿವಾಸ್ 550 ಕೋಟಿ ನಿನ್ನ ತಾತ ತಂದಿದ್ದಾನಾ. 550 ಕೋಟಿ ರೂಪಾಯಿ ಎಲ್ಲಿ ತಂದಿದ್ದೀರಿ ತೋರಿಸಿ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications