Get Updates
Get notified of breaking news, exclusive insights, and must-see stories!

ಬರ ತಂದ ಕರುಳು ಕತ್ತರಿಸುವಂಥ ಸನ್ನಿವೇಶ, ಅನ್ನದಾತನ ತಟ್ಟೆಯೇ ಖಾಲಿಖಾಲಿ

ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಗೋಶಾಲೆಗಳನ್ನು ತೆರೆದಿದೆ. ಮೇವಿನಿಂದ ರಾಸುಗಳೇನೋ ಜೀವ ಉಳಿಸಿಕೊಳ್ಳುವಂತಿವೆ. ಆದರೆ ಅದನ್ನು ಕರೆತರುತ್ತಿರುವ ರೈತರು, ರೈತರ ಮನೆ ಮಕ್ಕಳೇ ಹೊಟ್ಟೆಗಿಲ್ಲದೆ ಸಾಯುವಂತಾಗಿದ್ದಾರೆ.

ನಾವು ದೇಶದ ಬಗ್ಗೆ ಹೆಮ್ಮೆಯಿಂದ ಮಾತನಾಡ್ತೀವಿ. ನಮ್ಮ ಸೈನಿಕರ ಬಗ್ಗೆ, ರೈತರ ಬಗ್ಗೆಯೂ ಹೆಮ್ಮೆಯಿಂದ ಮಾತನಾಡ್ತೀವಿ. ಆದರೆ ಈಗ ಮಾತಿನಿಂದ ಹೊರತಾಗಿ ಒಂದಿಷ್ಟು ಜವಾಬ್ದಾರಿ, ಕಾಳಜಿ ತೋರಿಸಬೇಕಾದ ಸಂದರ್ಭ ಬಂದಿದೆ. ಇಡೀ ರಾಜ್ಯದಲ್ಲಿ ಬರವಿದೆ. ಬಿತ್ತಿದ್ದ ಬೀಜ ಭೂಮಿಯಲ್ಲೇ ಕರಗಿ ಹೋಗ್ತಿದೆ.

ಬೆಳೆ ಇಲ್ಲ. ಆಹಾರ ಧಾನ್ಯ-ಮೇವಿನ ಕೊರತೆಯಿಂದ ಹಳ್ಳಿಗಳಲ್ಲಿ ಜನ ಅಕ್ಷರಶಃ ಕಂಗಾಲಾಗಿದ್ದಾರೆ. ರಾಜ್ಯ ಸರಕಾರ ಈ ಸಲ ಸಕಾಲಕ್ಕೆ ಗೋಶಾಲೆಗಳನ್ನು ತೆರೆದಿದೆ. ಅವುಗಳಿಲ್ಲದಿದ್ದರೆ ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಪಶುಗಳು ಹೇಳ ಹೆಸರಿಲ್ಲದಂತೆ ಆಗಿರುತ್ತಿದ್ದವು.[ಎಲ್ಲ ಜಾನುವಾರುಗಳಿಗೂ ವಿಮೆ ಸೌಲಭ್ಯಕ್ಕೆ ಸೂಚನೆ: ಸಿದ್ದರಾಮಯ್ಯ]

ಗೋಶಾಲೆಗಳಲ್ಲಿ ರಾಸುಗಳಿಗೆ ಮೇವು, ಸ್ವಚ್ಛವಾದ ಕುಡಿಯುವ ನೀರು ಹಾಗೂ ವೈದ್ಯಕೀಯ ಸೌಲಭ್ಯವೂ ಇದೆ. ಈ ವಿಚಾರದಲ್ಲಿ ಸರಕಾರದ ಕೆಲಸವನ್ನು ಮನಸಾರೆ ಮೆಚ್ಚಲೇಬೇಕು. ಆದರೆ ಇನ್ನೊಂದು ಸೂಕ್ಷ್ಮ ಹಾಗೂ ಮಾನವೀಯ ವಿಚಾರವೊಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನಸು ಮಾಡಿದರೆ ಖಂಡಿತಾ ಅದಕ್ಕೊಂದು ಪರಿಹಾರ ಮಾಡಬಲ್ಲರು.

ಆದರೆ, ಅವರಿಗೆ ಆ ವಿಚಾರ ದುಬಾರಿ ಅಥವಾ ಇವರು ಅತಿ ಎನಿಸುವಷ್ಟು ಕೇಳುತ್ತಿದ್ದಾರೆ ಅನ್ನಿಸೋ ಸಾಧ್ಯತೆಯೂ ಇದೆ. ಆದ್ದರಿಂದ ನಾವು ಅಂದರೆ ಸಾರ್ವಜನಿಕರು ಒಂದಿಷ್ಟು ಉದಾರಿಗಳಾಗಿದರೆ ನಮ್ಮ ಅನ್ನದ ತಟ್ಟೆಯಲ್ಲಿ ಬಗೆಬಗೆ ಆಹಾರ ಕಾಣುವಂತೆ ಮಾಡಿದ ರೈತರ ಒಂದು ಹೊತ್ತಿನ ಹಸಿವು ತಣಿಸಬಹುದು.[ಭೀಕರ ಬರ ಎದುರಿಸಲು ಸರ್ಕಾರ ಸನ್ನದ್ದ : ಸಿದ್ದರಾಮಯ್ಯ]

ಹಿರಿಯ ಜೀವಗಳೇ ಹೆಚ್ಚು

ಹಿರಿಯ ಜೀವಗಳೇ ಹೆಚ್ಚು

ವಿಷಯ ನೇರವಾಗಿ ಹೇಳಿಬಿಡ್ತೀನಿ. ಗೋಶಾಲೆಗೆ ರಾಸುಗಳಷ್ಟೇ ಬರುವುದಿಲ್ಲ. ಅವುಗಳ ಯೋಗ-ಕ್ಷೇಮ ನೋಡಿಕೊಳ್ಳುವ ಜನರು ಬರುತ್ತಾರೆ. ಎಂಥ ಜನರು ಬರುತ್ತಾರೆ ಗೊತ್ತಾ? ದುಡಿಯಲು ಮೈಯಲ್ಲಿ ಕಸುವಿರುವ ಗಂಡು-ಹೆಣ್ಣು ಪಟ್ಟಣಕ್ಕೆ ದುಡಿಯಲು ಹೊರಟುಬಿಡ್ತಾರೆ. ಮನೆಯಲ್ಲಿ ಉಳಿದ ಹಿರಿಯ ಜೀವಗಳು, ಮಕ್ಕಳು ರಾಸುಗಳನ್ನು ಹೊಡೆದುಕೊಂಡು ಗೋಶಾಲೆಗೆ ಬರುತ್ತಿದ್ದಾರೆ.

ಭೀಕರ ಬರದ ಶಾಪ

ಭೀಕರ ಬರದ ಶಾಪ

ಹೀಗೆ ಬರುತ್ತಿರುವವರು ಇಡೀ ರಾಜ್ಯದಾದ್ಯಂತ ಇದ್ದಾರೆ. ಮನೆಯಲ್ಲಿ ಬೆಳಗ್ಗೆ ಇರುವಷ್ಟು ಗಂಜಿಯೋ ಅಂಬಲಿಯೋ ಕುಡಿದು ಅಥವಾ ಸಣ್ಣ ಮುದ್ದೆಯೋ ತಿಂದು ಹೊರಟರೆ ಮಧ್ಯಾಹ್ನಕ್ಕೆ ಹೊಟ್ಟೆಗೆ ಏನೂ ಇರುವುದಿಲ್ಲ. ಇದನ್ನು ಬಡತನ ಅಂದುಕೊಳ್ಳಬೇಡಿ, ಏಕೆಂದರೆ ಅದು ವರ್ಷದಿಂದ-ವರ್ಷಕ್ಕೆ ಭೀಕರ ಆಗುತ್ತಿರುವ ಬರದ ಶಾಪ.

ಎರಡು ಮೂಟೆ ರಾಗಿ ಇಲ್ಲ

ಎರಡು ಮೂಟೆ ರಾಗಿ ಇಲ್ಲ

"ಅವರು ಮನೆಗಳಲ್ಲಿ ಇದ್ದರೆ ಊಟ ಮಾಡುತ್ತಿರಲಿಲ್ಲವೇ? ಮನೆಗಳಿಂದ ಡಬ್ಬಿ ಕಟ್ಟಿಕೊಂಡು ಬರಲು ಆಗುವುದಿಲ್ಲವೇ?" ಎಂದು ನೀವು ಕೇಳಬಹುದು. 20 ಮೂಟೆ ರಾಗಿ ಬೆಳೆಯುತ್ತಿದ್ದ ಕುಟುಂಬಗಳಿಗೆ ಈ ವರ್ಷ ಎರಡು ಮೂಟೆಯೂ ದಕ್ಕಿಲ್ಲ. ಇವತ್ತು ಗೋಶಾಲೆಗಳಲ್ಲಿ ಇರುವವರು ಮನೆಗಳಲ್ಲಿ ಉಳಿದಿದ್ದರೂ ಅವರ ಹಸಿದ ಹೊಟ್ಟೆಯ ಪರಿಸ್ಥಿತಿ ಬದಲಾಗುತ್ತಿರಲಿಲ್ಲ.

ದಿನಸಿ ಸಂಗ್ರಹಿಸಿ ಕೊಡಬಹುದು

ದಿನಸಿ ಸಂಗ್ರಹಿಸಿ ಕೊಡಬಹುದು

ಸಮಾಜ ಮತ್ತು ಸರಕಾರ ಮನಸು ಮಾಡಿದರೆ ಗೋಶಾಲೆಗಳಿಗೆ ಬಂದವರಿಗೆ ಒಪ್ಪೊತ್ತಿನ ಊಟ ಸಿಗುವಂತೆ ಮಾಡುವುದು ದೊಡ್ಡ ಸವಾಲೇನೂ ಅಲ್ಲ. ಅಂದಹಾಗೆ ನೀವು ಈ ಪ್ರಶ್ನೆ ಕೇಳಬಹುದು ಎಂದು ನನ್ನ ನಿರೀಕ್ಷೆ. ಹೌದು, ನಾವೇನು ಮಾಡಬಹುದು ಅಂತೀರಾ? ತಂಡಗಳನ್ನು ರಚಿಸಿಕೊಂಡು ದಿನಸಿ ಸಂಗ್ರಹಿಸಿ ಕೊಡಬಹುದು. ಕೈಲಾದಷ್ಟು ಹಣ ಸಹಾಯ ಮಾಡಬಹುದು. ಕಾರ್ಪೊರೇಟ್ ಕಂಪೆನಿಗಳ ಗಮನ ಸೆಳೆದು ದೇಣಿಗೆ ಸಂಗ್ರಹಿಸಿ ಕೊಡಬಹುದು.

ನಗರ ಪ್ರದೇಶದಲ್ಲಿ ಅರಿವು ಮೂಡಿಸಬೇಕು

ನಗರ ಪ್ರದೇಶದಲ್ಲಿ ಅರಿವು ಮೂಡಿಸಬೇಕು

ಮುಖ್ಯವಾಗಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿಯಂಥ ನಗರ ಪ್ರದೇಶಗಳಲ್ಲಿ ರಾಜ್ಯದಲ್ಲಿರುವ ಬರ ಪರಿಸ್ಥಿತಿಯ ಅರಿವು ಉಂಟುಮಾಡಬೇಕು. ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಲು ಸರಕಾರದ ಮೇಲೆ ನಿಮಗೆ ತೋಚಿದಂತೆ ಒತ್ತಡ ತನ್ನಿ. ಇದು ಬೇಸಿಗೆ. ಈಗ ಇಂಗುಗುಂಡಿ, ಕೆರೆ ಹೂಳೆತ್ತುವುದು, ಹುದಿಬದು ನಿರ್ಮಾಣದಂಥ ಕೆಲಸಗಳನ್ನು ಆರಂಭಿಸಿದರೆ ಜೂನ್ ವೇಳೆಗೆ ಬರುವ ಮೊದಲ ಮಳೆಯ ಸದುಪಯೋಗ ಸಾಧ್ಯ. ಈಗ ಸುಮ್ಮನಿರುವುದು ಮತ್ತೊಂದು ಘೋರ ಬರಗಾಲಕ್ಕೆ ನಾಂದಿ ಆದೀತು.

ಸಿದ್ದರ ಬೆಟ್ಟದವರು ಊಟದ ವ್ಯವಸ್ಥೆ ಮಾಡ್ತಿದಾರೆ

ಸಿದ್ದರ ಬೆಟ್ಟದವರು ಊಟದ ವ್ಯವಸ್ಥೆ ಮಾಡ್ತಿದಾರೆ

ತುಮಕೂರು ಜಿಲ್ಲೆ ತೋವಿನಕೆರೆಯ ಗೋಶಾಲೆಯಲ್ಲಿ ಇಂಥದ್ದೊಂದು ಪ್ರಯತ್ನವನ್ನು ಒಂದಿಷ್ಟು ಸಹೃದಯರು ಆರಂಭಿಸಿದ್ದಾರೆ. ಗೋಶಾಲೆಯಲ್ಲಿಯೇ ಉಳಿಯುವ ರಾಸುಗಳಿಗೆ ಸಮೀಪದ ಸಿದ್ದರಬೆಟ್ಟದಲ್ಲಿರುವ ರಂಭಾಪುರಿ ಮಠದಿಂದ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ಊಟಕ್ಕೆ ಪ್ರಯತ್ನ ಮುಂದುವರಿದಿದೆ. ರಾಜ್ಯದ ಉಳಿದ 48 ಗೋಶಾಲೆಗಳಲ್ಲೂ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ವ್ಯವಸ್ಥೆ ಆಗಬೇಕಿದೆ.

ನಿಮ್ಮಿಂದಾದ ಸಹಾಯ-ನೆರವು ನೀಡಿ

ನಿಮ್ಮಿಂದಾದ ಸಹಾಯ-ನೆರವು ನೀಡಿ

ದಯವಿಟ್ಟು ನಿಮ್ಮ ಕೈಲಾದ ಸಹಾಯ, ನೆರವು ಮಾಡಿ. ಒಮ್ಮೆ ತೋವಿನಕೆರೆ, ಶಿರಾ, ಚಿತ್ರದುರ್ಗದ ಕಡೆಗೆ ಹೋಗಿಬನ್ನಿ. ವರ್ಷಗಟ್ಟಲೆ ನಮ್ಮ ತುತ್ತಿನ ಚೀಲ ತುಂಬಿಸಿದ ಜೀವಗಳು ಸವೆದುಹೋಗುತ್ತಿವೆ. ಅವರನ್ನು ಬದುಕಿಸಿಕೊಳ್ಳೋಣ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+