ಮೆಡಿಕಲ್ ಸೀಟು ಹಂಚಿಕೆಯಲ್ಲಿ ಹಗರಣ ನಡೆದಿಲ್ಲ ಡಿಸಿಎಂ ಸ್ಪಷ್ಟನೆ
ತುಮಕೂರು, ಸೆಪ್ಟೆಂಬರ್ 1: ಮೆಡಿಕಲ್ ಸೀಟು ಹಂಚಿಕೆಯಲ್ಲಿ. ಯಾವುದೇ ಹಗರಣ ನಡೆದಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.
ಶನಿವಾರ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಡಿಕಲ್ ಸೀಟು ಹಂಚಿಕೆ ಪ್ರಕ್ರಿಯೆ ಪಾರದರ್ಶಕವಾಗಿದೆ, ದೆಹಲಿಯಿಂದಲೇ ಸೀಟು ಹಂಚಿಕೆಯಾಗಿದೆ ಇಲ್ಲಿ ಯಾವುದೇ ಹಗರಣಕ್ಕೆ ಆಸ್ಪದವಿಲ್ಲ, ಹಗರಣವೂ ನಡೆದಿಲ್ಲ ಯಾವುದೇ ಗೊಂದಲವಿಲ್ಲ ಎಂದಿದ್ದಾರೆ.
ಸೀಟು ದೆಹಲಿಯಲ್ಲಿಯೇವ ಹಂಚಿಕೆಯಾಗಿರುವುದರಿಂದ ಇದರಲ್ಲಿ ಯಾವುದೇ ಶಾರ್ಟ್‌ಕಟ್ ಇಲ್ಲ ಒಂದು ವೇಳೆ ಯಾರಾದರೂ ಪೋಷಕರ ಬಳಿ ಹಣ ಪಡೆದು ವಂಚಿಸಿದ್ದರೆ ಅಂಥವರು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದೇ ಸೀಟು ಪಡೆಯುವ ಪದ್ಧತಿ ಇದೆ. ಇದರಲ್ಲಿ ಯಾವ ಶಾರ್ಟ್ ಕಟ್ ಇಲ್ಲ.ಹಣ ಪಡೆದು ಸೀಟು ಹಂಚಿಕೆ ಮಾಡುವುದು ಅಸಾಧ್ಯ. ಪೋಷಕರ ಬಳಿ ಹಣ ಪಡೆದು ವಂಚಿಸಿದ್ದರೆ ದೂರು ನೀಡಿ, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಈಗಾಗಲೇ 49ವೈದ್ಯಕೀಯ ಕಾಲೇಜುಗಳಿಗೆ 6260 ಸೀಟ್‌ಗಳಿಗೆ ಕೌನ್ಸೆಲಿಂಗ್ ನಡೆದಿದೆ. ಉಳಿದಿರುವ 740 ಸೀಟುಗಳಿಗೆ ಕೊನೆಯ ಹಂತದ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಕಾನೂನು ಪ್ರಕಾರ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕರ್ನಾಟಕ ರಾಜ್ಯಗಳು ಕೌನ್ಸೆಲಿಂಗ್ ಪದ್ಧತಿಯನ್ನು ಅನುಸರಿಸುತ್ತಿದೆ.












Click it and Unblock the Notifications