ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿ.ಎಸ್.ಬಸವರಾಜ್ ಗೆ ಕಾಂಗ್ರೆಸ್ ಬಾಗಿಲು ಬಂದ್!

|
Google Oneindia Kannada News

ಬೆಂಗಳೂರು, ಜ.16 : ತುಮಕೂರು ಸಂಸದ ಜಿ.ಎಸ್.ಬಸವರಾಜ್ ಪಾಲಿಗೆ ಕಾಂಗ್ರೆಸ್ ಬಾಗಿಲು ಬಂದ್ ಆಗಿದೆ. ಇದರಿಂದಾಗಿ ಅತ್ತ ಬಿಜೆಪಿಯೂ ಇಲ್ಲ, ಇತ್ತ ಕಾಂಗ್ರೆಸ್ ಪಕ್ಷವೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಯಡಿಯೂರಪ್ಪ ಪರಮಾಪ್ತ ಸ್ಥಿತಿ ಅತಂತ್ರವಾಗಿದೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪರಮಾಪ್ತ ತುಮಕೂರು ಸಂಸದ ಜಿ.ಎಸ್.ಬಸವರಾಜ್ ಕಾಂಗ್ರೆಸ್ ಸೇರುವುದಾಗಿ ಭಾನುವಾರ ಘೋಷಿಸಿದ್ದರು. ಆದರೆ, ಪಕ್ಷದ ಹೈ ಕಮಾಂಡ್ ನಾಯಕರು ಅವರ ಪಕ್ಷ ಸೇರ್ಪಡೆಗೆ ಒಪ್ಪಿಗೆ ನೀಡಿಲ್ಲ. [ಕಾಂಗ್ರೆಸ್ ಕದ ತಟ್ಟುತ್ತಿರುವ ಬಸವರಾಜ್]

G.S Basavaraj

ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಹಿಡಿದು ದೆಹಲಿ ತಲುಪಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಬಸವರಾಜ್ ಅವರು ಪಕ್ಷ ಸೇರುವ ಕುರಿತು ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. [ಬಸವರಾಜ್ ಸ್ಥಿತಿ ಅತಂತ್ರ]

ಸ್ವತಃ ತುಮಕೂರು ಕ್ಷೇತ್ರದವರಾದ ಡಾ.ಜಿ.ಪರಮೇಶ್ವರ್ ಅವರಿಂದ ಮಾಹಿತಿ ಪಡೆದ ಹೈಕಮಾಂಡ್ ನಾಯಕರು ಆಪರೇಷನ್ ಕಮಲಕ್ಕೆ ಒಳಗಾದ ಅಭ್ಯರ್ಥಿಗಳು ನಮ್ಮ ಪಕ್ಷಕ್ಕೆ ಬೇಡ. ಜಿ.ಎಸ್.ಬಸವರಾಜ್ ಪಕ್ಷ ಸೇರ್ಪಡೆ ಸಾಧ್ಯವಿಲ್ಲ ಎಂದು ಸೂಚನೆ ನೀಡಿದ್ದಾರೆ. [ಕಾಂಗ್ರೆಸ್ ಸಂಭಾವ್ಯ ಪಟ್ಟಿ]

ಹಾಲಿ ತುಮಕೂರು ಸಂಸದರಾಗಿರುವ ಜಿ.ಎಸ್.ಬಸವರಾಜ್ ಕಾಂಗ್ರೆಸ್ ಸೇರಿದರೂ ಅವರಿಗೆ ಲೋಕಸಭೆ ಟಿಕೆಟ್ ನೀಡುವುದು ಕಷ್ಟ ಎಂಬ ಮಾತು ಕೇಳಿಬಂದಿತ್ತು. ತಮ್ಮ ತವರು ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ ಗೆಲ್ಲಿಸಲು ಡಾ.ಜಿ.ಪರಮೇಶ್ವರ್ ನಿರ್ಧರಿಸಿದ್ದಾರೆ.

ಆದರೆ, ಕಾಂಗ್ರೆಸ್ ಪಕ್ಷ ಲೋಕಸಭೆ ಟಿಕೆಟ್ ನೀಡಲಿ, ಬಿಡಲಿ ನಾನು ಪಕ್ಷ ಸೇರುತ್ತೇನೆ ಎಂದು ಬಸವರಾಜ್ ಹೇಳಿದ್ದರು. ಸದ್ಯ ಕಾಂಗ್ರೆಸ್ ಹೈ ಕಮಾಂಡ್ ನಾಯಕರು ಅವರ ಆಸೆಗೆ ತಣ್ಣೀರು ಸುರಿದ್ದಿದ್ದು, ಪಕ್ಷ ಸೇರ್ಪಡೆಗೆ ರೆಡ್ ಸಿಗ್ನಲ್ ನೀಡಿದ್ದಾರೆ.

ಬಿಜೆಪಿ ಸೇರಿಸಿಕೊಳ್ಳುತ್ತಾ : ಬಿ.ಎಸ್.ಯಡಿಯೂರಪ್ಪ ಜೊತೆ ಗುರುತಿಸಿಕೊಂಡಿದ್ದ ಜಿ.ಎಸ್.ಬಸವರಾಜ್ ಬಿಜೆಪಿ ಸೇರುವುದಕ್ಕೆ ರಾಜ್ಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು, ಇದರಿಂದ ಅವರ ಕಾಂಗ್ರೆಸ್ ಕೈ ಹಿಡಿಯಲು ಸಿದ್ಧತೆ ನಡೆಸಿದ್ದರು.

ಬಸವರಾಜ್ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಲೋಕ ಸಭೆಯಲ್ಲಿ ಯಾವುದಾದರೂ ವಿಷಯದ ಕುರಿತು ಚರ್ಚೆ ನಡೆಯುವ ವೇಳೆ ಮಾತನಾಡಲು ಮುಂದಾಗುವ ಕರ್ನಾಟಕದ ಸಂಸದರಿಗೆ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವಕಾಶ ನೀಡುವುದಿಲ್ಲ ಎಂದು ಆರೋಪ ಮಾಡಿದ್ದರು.

ಇದು ರಾಜ್ಯದ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದ್ದರಿಂದ ಬಸವರಾಜ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಾಯಕರು ಅಭಿಪ್ರಾಯಪಟ್ಟಿದ್ದರು. ಈ ಬೆಳವಣಿಗೆಗಳಿಂದ ಬಿಜೆಪಿಗೆ ಮರಳುವ ನಿರ್ಧಾರ ಕೈ ಬಿಟ್ಟ ಅವರು ಕಾಂಗ್ರೆಸ್ ಸೇರಲು ಬಯಸಿದ್ದರು.

ಯಡಿಯೂರಪ್ಪ ಮನವೊಲಿಸುತ್ತಾರಾ : ಜಿ.ಎಸ್.ಬಸವರಾಜ್ ಮತ್ತು ರಾಜ್ಯ ಬಿಜೆಪಿ ನಾಯಕರ ಮನವೊಲಿಸಿ ಅವರನ್ನು ಬಿಜೆಪಿಗೆ ಮರಳುವಂತೆ ಮಾಡುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಂಗಳವಾರ ತುಮಕೂರಿನಲ್ಲಿ ಹೇಳಿದ್ದರು. ಅವರು ಬಸವರಾಜ್ ಮನವೊಲಿಸಿ ಬಿಜೆಪಿಗೆ ಮರಳುವಂತೆ ಮಾಡುತ್ತಾರೆಯೇ ಕಾದು ನೋಡಬೇಕು. [ಬಸವರಾಜ್ ಮನವೊಲಿಸುವೆ]

English summary
Congress High Command not approved for Karnataka Janata Paksha (KJP) leader and Tumkur MP G.S Basavaraj to join party. G.S Basavaraj said that he will join Congress soon. Karnataka BJP leaders opposed for G.S Basavaraj rejoin party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X