ತುಮಕೂರಿನಲ್ಲಿ ಮಹಿಳಾ ಖೈದಿಗಳ ಪ್ರತಿಭಟನೆ, ಜೈಲರ್ ಟ್ರಾನ್ಸ್ ಫರ್
ತುಮಕೂರು, ಜೂನ್ 1: ತುಮಕೂರಿನ ಮಹಿಳಾ ಕೇಂದ್ರ ಕಾರಾಗೃಹದಲ್ಲಿ ಖೈದಿಗಳು ಊಟ-ತಿಂಡಿ ಬಿಟ್ಟು, ಗುರುವಾರ ಪ್ರತಿಭಟನೆ ನಡೆಸಿದ್ದಾರೆ. ಜೈಲರ್ ಶೈನಜಾ ನಿಗೇವಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಧರಣಿ ನಡೆಸಿದ್ದಾರೆ. ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂಬುದು ಖೈದಿಗಳ ಅಹವಾಲು.
ತಮ್ಮನ್ನು ಕಾಣಲು (ಸಂದರ್ಶಕರು) ಬಂದಾಗ ಶೈನಜಾ ಕಿರುಕುಳ ನೀಡುತ್ತಾರೆ ಎಂಬುದು ಖೈದಿಗಳ ಆರೋಪವಾಗಿದೆ. ಕಾರಾಗೃಹಕ್ಕೆ ತಿಲಕ್ ಪಾರ್ಕ್ ಪೊಲೀಸರು ಭೇಟಿ ನೀಡಿದ್ದಾರೆ. ಕಾರಾಗೃಹದ ಅಧೀಕ್ಷಕಿ ಲತಾ ಅವರು ಖೈದಿಗಳನ್ನು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎಂಬತ್ತು ಮಂದಿ ಯಾವುದಕ್ಕೂ ಕರಗಿಲ್ಲ.[ಸುಸ್ತನ್ನೂ ಲೆಕ್ಕಿಸದೆ ಸಿದ್ದಗಂಗಾ ಮಠದಲ್ಲಿ ಭಕ್ತರ ಭೇಟಿ ಮಾಡಿದ ಶಿವಕುಮಾರ ಸ್ವಾಮೀಜಿ]

ತುಮಕೂರು ನಗರದ ಡಿವೈಎಸ್ ಪಿ ನಾಗರಾಜು ಕಾರಾಗೃಹಕ್ಕೆ ಭೇಟಿ ನೀಡಿದಾಗ ತಮ್ಮ ಅಹವಾಲನ್ನು ಹೇಳಿಕೊಂಡಿದ್ದು, ಆ ನಂತರ ಕಾರಾಗೃಹಗಳ ಹೆಚ್ಚುವರಿ ಮಹಾನಿರ್ದೇಶಕ ವೀರಭದ್ರಸ್ವಾಮಿ ಅವರ ಬಳಿಯೂ ತಮಗೆ ಆಗುತ್ತಿರುವ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಾರೆ.['ನಾನು ಹೇಗೆ ಸಿಎಂ ಆಗಲಿಲ್ಲವೋ ಅದೇ ಥರ ರಾಜಣ್ಣ ಸಚಿವರಾಗಲಿಲ್ಲ']

ಇಷ್ಟೆಲ್ಲ ಆದ ನಂತರ ಶೈನಜಾ ನಿಗೇವಾನಿ ಅವರನ್ನು ಕಲಬುರಗಿಗೆ ವರ್ಗಾವಣೆ ಮಾಡಿ, ಆದೇಶ ಹೊರಡಿಸಲಾಗಿದೆ. ಆ ನಂತರವೇ ಖೈದಿಗಳು ಪ್ರತಿಭಟನೆ ಕೈ ಬಿಟ್ಟಿದ್ದಾರೆ.












Click it and Unblock the Notifications