• search
 • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತುಮಕೂರಿನಲ್ಲಿ ಇದೇ ಮೊದಲು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾದ ಸೋಂಕಿತರು

By ತುಮಕೂರು ಪ್ರತಿನಿಧಿ
|
Google Oneindia Kannada News

ತುಮಕೂರು, ಜೂನ್ 27: ರಾಜ್ಯದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲೆಡೆ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ತುಮಕೂರಿನಲ್ಲೂ ಶುಕ್ರವಾರ, ಜೂನ್ 26ರಒಂದೇ ದಿನ 15 ಮಂದಿಯಲ್ಲಿ ಕೊರೊನಾ ಸೋಂಕು​ ಕಾಣಿಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 73ಕ್ಕೆ ಏರಿಕೆಯಾಗಿದೆ.

   ಸಿದ್ದರಾಮಯ್ಯನ ಸೊಸೆ ಮೇಘನಾರಾಜ್ ಮನೆಗೆ ಬಂದ್ರು | Smitha Rakesh meets Meghana Raj & Family

   ಶುಕ್ರವಾರ ತುಮಕೂರು ತಾಲೂಕು 4, ಪಾವಗಡ 4, ಶಿರಾ 3, ತಿಪಟೂರು 1, ಗುಬ್ಬಿ 1, ಮಧುಗಿರಿ 1, ಚಿಕ್ಕನಾಯಕನಹಳ್ಳಿ 1 ಸೇರಿದಂತೆ ಒಟ್ಟು 15 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಕೊರೊನಾ ವೈರಸ್ ಕಾಲಿಟ್ಟಾಗಿನಿಂದ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಶುಕ್ರವಾರ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ ಎಂದು ಹೆಲ್ತ್​​ ಬುಲೆಟಿನ್​​ನಿಂದ ತಿಳಿದುಬಂದಿದೆ.

   ಮದುವೆ ಮಾಡಿಕೊಂಡು ಕ್ವಾರಂಟೈನ್‌ ಆದ ತುಮಕೂರು ವಧು ವರಮದುವೆ ಮಾಡಿಕೊಂಡು ಕ್ವಾರಂಟೈನ್‌ ಆದ ತುಮಕೂರು ವಧು ವರ

   ಈ ಹದಿನೈದು ಮಂದಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಹದಿನೈದು ಜನರಲ್ಲಿ ಆರು ಮಂದಿಯ ಟ್ರಾವೆಲ್​​ ಹಿಸ್ಟರಿ ಮಾತ್ರ ಜಿಲ್ಲಾಡಳಿತಕ್ಕೆ ಲಭ್ಯವಾಗಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ 73 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 39 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಕೊರೊನಾ ವೈರಸ್ ನಿಂದ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

   English summary
   15 coronavirus cases have been reported in one day at tumkur district,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X