ರಾಹುಲ್ ಗಾಂಧಿ ವಿರುದ್ಧ ಬಿತ್ತು ಮತ್ತೊಂದು ಕಂಪ್ಲೇಂಟ್, ಈ ಬಾರಿ ವಯನಾಡಿನಲ್ಲಿ!
Recommended Video
ತಿರುವನಂತಪುರಂ, ಏಪ್ರಿಲ್ 23 : 'ಚೌಕಿದಾರ್ ಚೋರ್ ಹೈ' ಎಂದು ಸುಪ್ರೀಂ ಕೋರ್ಟೇ ಹೇಳಿದೆ ಎಂದು ಹೇಳಿಕೆ ನೀಡಿದ್ದಕ್ಕಾಗಿ ಸುಪ್ರೀಂ ಕೋರ್ಟಿನಿಂದಲೇ ನೋಟೀಸ್ ಪಡೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮತದಾನದ ದಿನದಂದೇ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿರುವುದರ ವಿರುದ್ಧ ವಯನಾಡಿನಿಂದ ಸ್ಪರ್ಧಿಸುತ್ತಿರುವ ಎನ್‌ಡಿಎದ ಅಭ್ಯರ್ಥಿ ತುಷಾರ್ ವೆಲ್ಲಪಲ್ಲಿ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
"ಭಾರತದಾದ್ಯಂತ ಕೋಟ್ಯಂತರ ಯುವಜನತೆ ಹೊರಬಂದು ಮತ ಚಲಾಯಿಸುತ್ತಿದ್ದಾರೆ. ಇವರಲ್ಲಿ ಹಲವರು ಮೊದಲ ಬಾರಿ ಮತ ನೀಡುತ್ತಿದ್ದಾರೆ. ಭಾರತದ ಭವಿಷ್ಯ ಇವರ ಕೈಯಲ್ಲಿದೆ. ಪ್ರತಿ ಭಾರತೀಯನಿಗೆ 'ನ್ಯಾಯ್' ಬೇಕಾಗಿದೆ, ಅವರು ಜಾಣತನದಿಂದ ಮತ ಚಲಾಯಿಸಲಿದ್ದಾರೆ" ಎಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದರು.

ಮತದಾನ ನಡೆಯುತ್ತಿರುವಾಗಲೇ ರಾಹುಲ್ ಗಾಂಧಿ ಅವರು ತಮ್ಮ ಪರವಾಗಿ ಮತ ಗಳಿಸಲೆಂದೇ ಟ್ವಿಟ್ಟರ್ ನಲ್ಲಿ ಖುಲ್ಲಂಖುಲ್ಲಾ ಪ್ರಚಾರ ಮಾಡಿ, ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಏಪ್ರಿಲ್ 21ರಂದೇ ಪ್ರಚಾರ ಮುಕ್ತಾಯವಾಗಿದ್ದರೂ ಅವರು ಪ್ರಚಾರ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅವರ ಬಳಿ ವಿದೇಶಿ ಪಾರ್ಸೋರ್ಟ್ ಇದ್ದು, ಅವರು ನಾಮಪತ್ರವನ್ನು ಮರುಪರಿಶೀಲಿಸಬೇಕು ಎಂದು ತುಷಾರ್ ವೆಲ್ಲಪಲ್ಲಿ ಅವರು ಕೆಲ ದಿನಗಳ ಹಿಂದೆ ದೂರು ನೀಡಿದ್ದರು. ಆದರೆ, ರಾಹುಲ್ ಗಾಂಧಿ ಅವರ ನಾಮಪತ್ರ ಸಿಂಧುವಾಗಿದೆ ಎಂದು ಚುನಾವಣಾಧಿಕಾರಿ ಈಗಾಗಲೆ ತಿಳಿಸಿದ್ದಾರೆ.












Click it and Unblock the Notifications