Get Updates
Get notified of breaking news, exclusive insights, and must-see stories!

'ಸ್ಟಾಚ್ಯೂ ಪಾಲಿಟಿಕ್ಸ್! ಪಟೇಲ್ ಗೆ ಸಿಕ್ಕ ಗೌರವ ಗುರು ಗಾಂಧಿಗೆ ಯಾಕಿಲ್ಲ?'

ತಿರುವನಂತಪುರಂ, ನವೆಂಬರ್ 01: ಏಕತೆಯ ಪ್ರತಿಮೆ ಅನವಾರಣಗೊಂಡ ದಿನದಿಂದಲೇ ಸ್ಟಾಚ್ಯೂ ಪಾಲಿಟಿಕ್ಸ್ ಆರಂಭವಾಗಿದೆ!

'ಸರ್ದಾರ್ ಪಟೇಲ್ ಅವರಿಗೆ ನೀಡಿದ ಗೌರವವನ್ನು ಮಹಾತ್ಮಾ ಗಾಂಧಿ ಅವರಿಗೆ ಏಕೆ ಬಿಜೆಪಿ ನೀಡುತ್ತಿಲ್ಲ? ಮಹಾತ್ಮಾ ಗಾಂಧಿ ಅವರ ಶಿಷ್ಯರಾದ ಪಟೇಲ್ ಅವರಿಗೆ ಸಿಕ್ಕ ಗೌರವ ಅವರ ಗುರುವಿಗೆ ಏಕಿಲ್ಲ?' ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರಶ್ನಿಸಿದರು.

Statue politics: Shashi Taroor asks why no honour for Mahatma Gandhi

ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 182 ಮೀ. ಎತ್ತರದ 'ಏಕತೆಯ ಪ್ರತಿಮೆ' ಅನಾವರಣದ ಕುರಿತು ಕೇರಳದ ತಿರುವನಂತಪುರಂನಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಶಿ ತರೂರ್ ಉತ್ತರಿಸುತ್ತಿದ್ದರು.

'ಮಹಾತ್ಮಾ ಗಾಂಧಿ ಅವರು ಪಟೇಲರ ಗುರುಗಳು. ಆದರೆ ಮಹಾತ್ಮಾ ಗಾಂಧಿಯವರ ಅತೀ ಎತ್ತರದ ಪ್ರತಿಮೆ ಎಂದರೆ ಅದು ಸಂಸತ್ತಿನ ಹೊರಗೆ ಇರುವುದು! ಹೀಗಿರುವಾಗ ಅವರ ಶಿಷ್ಯ ಪಟೇಲರಿಗೆ 182 ಮೀ. ಎತ್ತರದ ಪ್ರತಿಮೆ ನಿರ್ಮಿಸಲಾಗಿದೆ. ಆದರೆ ಅಷ್ಟೇ ಎತ್ತರದ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯನ್ನು ಏಕೆ ನಿರ್ಮಿಸಿಲ್ಲ?' ಎಂದು ತರೂರ್ ಪ್ರಶ್ನಿಸಿದರು.

'ಸರಳ ಬದುಕನ್ನೇ ಇಷ್ಟಪಡುತ್ತಿದ್ದ ಪಟೇಲರ ಇಂಥ ಪ್ರತಿಮೆಯನ್ನು ನಿರ್ಮಿಸುವ ಅಗತ್ಯವಿತ್ತೇ? ಅವರೆಂದಿಗೂ ಇಂಥ ಅದ್ಧೂರಿತನವನ್ನು ಇಷ್ಟಪಟ್ಟಿರಲಿಲ್ಲ' ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+