ವಯನಾಡಿನಲ್ಲೂ ರಾಹುಲ್ ಗೆ ಗೆಲುವು, ಮೋದಿಗೆ ಸಾಧ್ಯವಿಲ್ಲ: ತರೂರ್

ತಿರುವನಂತಪುರಂ, ಏಪ್ರಿಲ್ 01: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೇರಳದ ವಯನಾಡಿನಿಂದಲೂ ಸ್ಪರ್ಧಿಸಲಿದ್ದು, ಅವರು ಗೆಲುವು ಸಾಧಿಸುವುದು ಖಚಿತ ಎಂದು ಕಾಂಗ್ರೆಸ್ ಮುಖಂಡ, ಸಂಸದ ಶಶಿ ತರೂರ್ ಹೇಳಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

"ಪ್ರಧಾನಿ ನರೇಂದ್ರ ಮೋದಿಯವರೇನಾದರೂ ದಕ್ಷಿಣ ಭಾರತದ ಯಾವುದಾದರೂ ಕ್ಷೇತ್ರದಿಂದ ಕಣಕ್ಕಿಳಿದಿದ್ದರೆ ಗೆಲ್ಲುವುದಕ್ಕೆ ಸಾಧ್ಯವಿರಲಿಲ್ಲ. ಆದರೆ ರಾಹುಲ್ ಗಾಂಧಿ ಗೆಲ್ಲಬಲ್ಲರು" ಎಂದು ಅವರು ಹೇಳಿದರು.

ಕಾಂಗ್ರೆಸ್ ನ ಪ್ರಧಾನಿ ಅಭ್ಯರ್ಥಿಯಗಿರುವುದರಿಂದ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಎರಡು ಕಡೆಯಲ್ಲೂ ಜನರ ವಿಶ್ವಾಸ ಗಳಿಸುವುದು ರಾಹುಲ್ ಗಾಂಧಿ ಅವರಿಗೆ ಮುಖ್ಯ. ಆದ್ದರಿಂದ ಅವರು ಉತ್ತರ ಪ್ರದೇಶದ ಅಮೇಥಿಯಿಂದ ಮತ್ತು ದಕ್ಷಿಣ ಭಾರತದಲ್ಲಿ ಕೇರಳದ ವಯನಾಡಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ತರೂರ್ ಹೇಳಿದರು.

Shashi Tharoor on Rahul Gandhi contesting LS poll from Wayanad

"ನಮಗೆ ಎಡಪಕ್ಷಗಳ ಬಗ್ಗೆ ಉತ್ತಮ ಅಭಿಪ್ರಾಯವಿಲ್ಲದಿರಬಹುದು. ಆದರೆ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ವಿಷಯ ಬಂದಾಗ ನಾವು ಒಂದಾಗುತ್ತೇವೆ" ಎಂದು ಸಹ ತರೂರ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+