ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಮುಚ್ಚಲಿದೆ ಶಬರಿಮಲೆ ಬಾಗಿಲು... ಐದು ದಿನಗಳಲ್ಲಿ ಆಗಿದ್ದೇನು?

|
Google Oneindia Kannada News

Recommended Video

ಅಕ್ಟೋಬರ್ 22ರಿಂದ ಶಬರಿಮಲೈ ಅಯ್ಯಪ್ಪ ದೇವಸ್ಥಾನದ ಬಾಗಿಲು ಮತ್ತೆ ಬಂದ್ | Oneindia Kannada

ತಿರುವನಂತಪುರಂ, ಅಕ್ಟೋಬರ್ 22: ಮಹಿಳೆಯರಿಗೆ ಶಬರಿಮಲೆಯ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ತೆರವುಗೊಳಿಸಿ, ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ನಂತರ ಮೊದಲ ಬಾರಿಗೆ ಅ. 17 ರಂದು ದೇವಾಲಯದ ಬಾಗಿಲು ತೆರೆದಿತ್ತು.

ಅಂದಿನಿಂದ ಐದು ದಿನಗಳ ಕಾಲ ದೇವಾಲಯವನ್ನು ಪ್ರವೇಶಿಸಲು ಯತ್ನಿಸಿದ 12 ಮಹಿಳೆಯರನ್ನು ತಡೆಯುವ ಮೂಲಕ, 'ಸುಪ್ರೀಂ ಕೋರ್ಟ್ ತೀರ್ಪಿಗಿಂತ ಸಾಂಪ್ರದಾಯಿಕ ನಂಬಿಕೆಯೇ ನಮಗೆ ಮುಖ್ಯ' ಎಂಬುದನ್ನು ಭಕ್ತರು ತೋರಿಸಿಕೊಟ್ಟಿದ್ದಾರೆ.

50ರ ನಂತರ ಮತ್ತೆ ಬರುತ್ತೇನೆ: ಅಯ್ಯಪ್ಪನಿಗೆ ಒಂಬತ್ತರ ಬಾಲಕಿಯ ಪ್ರಾರ್ಥನೆ!50ರ ನಂತರ ಮತ್ತೆ ಬರುತ್ತೇನೆ: ಅಯ್ಯಪ್ಪನಿಗೆ ಒಂಬತ್ತರ ಬಾಲಕಿಯ ಪ್ರಾರ್ಥನೆ!

ಮತ್ತೆ ಇಂದಿನಿಂದ(ಅ.22) ದೇವಾಲಯದ ಬಾಗಿಲು ಮುಚ್ಚಲಿದ್ದು, ಕಳೆದ ಐದು ದಿನಗಳಲ್ಲಿ ಶಬರಿಮಲೆಯಲ್ಲಿ ನಡೆದ ಮಹತ್ವದ ಘಟನೆಗಳ ಮೆಲಕು ಇಲ್ಲಿದೆ.

ಅ.17 ರಂದು ತೆರೆದ ಅಯ್ಯಪ್ಪ ದೇಗುಲದ ಬಾಗಿಲು

ಅ.17 ರಂದು ತೆರೆದ ಅಯ್ಯಪ್ಪ ದೇಗುಲದ ಬಾಗಿಲು

ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸುವುದಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಮೊದಲ ಬಾರಿಗೆ ಅಕ್ಟೋಬರ್ 17 ರಂದು ದೇವಾಲಯದ ಬಾಗಿಲು ತೆರೆಯಲ್ಪಟ್ಟಿತ್ತು. ಅದಕ್ಕೂ ಮುನ್ನ ಅಂದರೆ ಅ.16 ರಿಂದಲೇ ದೇವಾಲಯದ ಸುತ್ತ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ದೇವಾಲಯದ ಸುತ್ತಮುತ್ತ 10 ರಿಂದ 50 ವರ್ಷದೊಳಗಿನ ಮಹಿಳೆಯರು ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು. ಸುರಕ್ಶಃತೆಯ ದೃಷ್ಟಿಯಿಂದ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಮುಸ್ಲಿಂ ಸಮುದಾಯದಿಂದ ರೆಹನಾ ಫಾತಿಮಾ ಉಚ್ಚಾಟನೆ ಮುಸ್ಲಿಂ ಸಮುದಾಯದಿಂದ ರೆಹನಾ ಫಾತಿಮಾ ಉಚ್ಚಾಟನೆ

ದೇವಾಲಯ ಪ್ರವೇಶಕ್ಕೆ ಯತ್ನಿಸಿದ ಮಹಿಳೆಯರು

ದೇವಾಲಯ ಪ್ರವೇಶಕ್ಕೆ ಯತ್ನಿಸಿದ ಮಹಿಳೆಯರು

ದೇವಾಲಯದ ಬಾಗಿಲು ತೆರೆಯುತ್ತಿದ್ದಂತೆಯೇ ಮಹಿಳೆಯರು ಪ್ರವೇಶಕ್ಕೆ ಯತ್ನಿಸಿದ ಘಟನೆ ನಡೆಯಿತು. ಆದರೆ ಭಕ್ತರು ಮಹಿಳೆಯರನ್ನು ದೇವಾಲಯದ ಆರಣಕ್ಕೇ ಬಾರದಂತೆ ತಡೆದರು. ಮಹಿಳಾ ಪತ್ರಕರ್ತರನ್ನು ತಡೆಯಲಾಯಿತು. ಶಬರಿಮಲೆಗೆ ಬರುವ ಭಕ್ತರನ್ನು ಹೊತ್ತ ಬಸ್ಸುಗಳನ್ನು ದಾರಿ ನಡುವಲ್ಲೇ ನಿಲ್ಲಿಸಿ ಅದರಲ್ಲಿ ಮಹಿಳೆಯರಿದ್ದಾರೆಯೇ ಎಂದು ಪರೀಕ್ಷಿಸಲಾಯಿತು.

ಶಬರಿಮಲೆ ಪ್ರವೇಶಿಸಲು ಹೋದ 'ಕಿಸ್ ಆಫ್ ಲವ್' ಫಾತಿಮಾ ರೆಹನಾ ಹಿನ್ನಲೆ ಶಬರಿಮಲೆ ಪ್ರವೇಶಿಸಲು ಹೋದ 'ಕಿಸ್ ಆಫ್ ಲವ್' ಫಾತಿಮಾ ರೆಹನಾ ಹಿನ್ನಲೆ

ವಾರ್ನಿಂಗ್ ನೀಡಿದ್ದ ಮುಖ್ಯಮಂತ್ರಿ

ವಾರ್ನಿಂಗ್ ನೀಡಿದ್ದ ಮುಖ್ಯಮಂತ್ರಿ

ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ನಾವು ಬದ್ಧ. ಯಾರಾದರೂ ಈ ತೀರ್ಪಿನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಖಡಕ್ ವಾರ್ನಿಂಗ್ ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಿಜೆಪಿ, ಶಿವಸೇನಅ, ಆರೆಸ್ಸೆಸ್, ಕಾಂಗ್ರೆಸ್ ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳು, ಸಂಘಟನೆಗಳು ಸುಪ್ರೀಂ ತೀರ್ಪನ್ನು ವಿರೋಧಿಸಿ ಹೋರಾಟ ನಡೆಸಿದ್ದವು.

ವಾಹನಗಳು ಜಖಂ

ವಾಹನಗಳು ಜಖಂ

ಶಬರಿಮಲೆಯಲ್ಲಿ ಉಂಟಾದ ಪ್ರಕ್ಷುಬ್ಧ ವಾತಾವರಣದ ಕುರಿತು ಪ್ರತ್ಯಕ್ಷ ಮಾಹಿತಿ ಪಡೆಯಲು ತೆರಳಿದ್ದ ಪತ್ರಕರ್ತರ ವಾಹನಗಳ ಮೇಲೆ ಹಲ್ಲೆ ನಡೆದು, ವಾಹನಗಳು ಜಖಂ ಆದ ಸುದ್ದಿ ವರದಿಯಾಗಿತ್ತು. ಕೆಲ ಮಹಿಳಾ ಪತ್ರಕರ್ತರು ದೇವಾಲಯದ ಆವರಣಕ್ಕೇ ಬರಲಾರದಂತೆ ತಡೆದ ಘಟನೆಯೂ ನಡೆಯಿತು. ಇದರಿಂದ ಮಹಿಳೆಯರು ಹಿಂತಿರುಗಿ ಹೋಗಬೇಕಾಯಿತು.

12 ಮಹಿಳೆಯರಿಗೆ ತಡೆ

12 ಮಹಿಳೆಯರಿಗೆ ತಡೆ

ಶಬರಿಮಲೆ ದೇವಾಲಯದ ಒಳಕ್ಕೆ ಹೆಲ್ಮೇಟ್ ಧರಿಸಿ ಪ್ರವೇಶಿಸಲು ಪ್ರಯತ್ನಿಸಿದ ಹೈದರಾಬಾದ್ ಮೂಲದ ಪತ್ರಕರ್ತೆ ಕವಿತಾ ಕೋಶಿ ಜಕ್ಕಲ್, ಮಹಿಳಾ ಹೋರಾಟಗಾರರಾದ ಕೇರಳದ ಫಾತಿಮಾ ರೆಹಾನ ಸುಲೇಮಾನ್ ಮತ್ತು ಮೇರಿ ಸ್ವೀಟಿ ತಡೆಯಲಾಯಿತು. ಇದುವರೆಗೂ ಒಟ್ಟು 12 ಮಹಿಳೆಯರನ್ನು ದೇವಾಲಯ ಪ್ರವೇಶಿಸದಂತೆ ತಡೆಯಲಾಗಿದೆ.

ತೀರ್ಪಿನಲ್ಲೇನಿತ್ತು?

ತೀರ್ಪಿನಲ್ಲೇನಿತ್ತು?

10 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಋತುಮತಿಯಾಗುವ ಕಾರಣ ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈ ವಯಸ್ಸಿನ ಮಹಿಳೆಯರು ದೇವಾಲಯಕ್ಕೆ ಪ್ರವೇಶಿಸುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ವಾದಿಸಲಾಗಿತ್ತು. ಈ ನಿರ್ಬಂಧವನ್ನು ಸೆ.28 ರಂದು ಸುಪ್ರೀಂ ಕೋರ್ಟ್ ತೆರವುಗೊಳಿಸಿ ಐತಿಹಾಸಿಕ ತೀರ್ಪು ನೀಡಿತ್ತು.

English summary
Amid the intense ongoing row over the entry of women, Kerala's Sabarimala temple will close its gates for visitors on Monday, at the end of the monthly puja.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X