ಮಹಿಳೆಯರ ಪ್ರವೇಶ: ಶುದ್ಧೀಕರಣಕ್ಕಾಗಿ ಅಯ್ಯಪ್ಪ ದೇವಾಲಯ ಬಂದ್!

Recommended Video

      Sabarimala Verdict : ಶಬರಿಮಲೈ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶದಿಂದ ದೇವಸ್ಥಾನ ಬಂದ್ | Oneindia Kannada

      ತಿರುವನಂತಪುರಂ, ಜನವರಿ 02: ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಇಬ್ಬರು ಮಹಿಳೆಯರು ಬುಧವಾರ ನಸುಕಿನಲ್ಲಿ ಪ್ರವೇಶಿಸಿದ ನಂತರ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ದೂರಿದ ಆಡಳಿತ ಮಂಡಳಿ, ದೇವಾಲಯದ ಬಾಗಿಲುಗಳನ್ನು ಮುಚ್ಚಿದೆ.

      ದೇವಾಲಯದಲ್ಲಿ ಶುದ್ಧೀಕರಣ ಕಾರ್ಯಗಳು ನಡೆಯಲಿದ್ದು, ಅದುವರೆಗೂ ದೇವಾಲಯ ಬಂದ್ ಆಗಲಿದೆ ಎಂದು ಅದು ಹೇಳಿದೆ.

      ಇಂದು ಬೆಳಗ್ಗಿನ ಜಾವ 3:45 ರ ಸುಮಾರಿಗೆ ಬಿಂದು ಮತ್ತು ಕನಕದುರ್ಗಾ ಎಂಬ 40 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಅಯ್ಯಪ್ಪ ದೇವಾಲಯದೊಳಗೆ ಪ್ರವೇಶ ಮಾಡಿದ್ದರು.

      Sabarimala: Temple shuts for purification after 2 women enter into it

      ಈ ಇಬ್ಬರು ಮಹಿಳೆಯರೂ ಡಿಸೆಂಬರ್ 18 ರಂದೇ ದೇವಾಲಯ ಪ್ರವೇಶಕ್ಕೆ ಯತ್ನಿಸಿದ್ದರು. ಆದರೆ ಆಗ ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಪೊಲೀಸ್ ರಕ್ಷಣೆಯೊಂದಿಗೆ ದೇವಾಲಯ ಪ್ರವೇಶಿಸುವ ಮೂಲಕ ಎಂಟು ನೂರು ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದರು.

      ಋತುಮತಿಯಾಗುವ 10 ರಿಂದ 60 ವರ್ಷ ವಯಸ್ಸಿನ ಮಹಿಳೆಯರು ದೇವಾಲಯ ಪ್ರವೇಶಿಸದಂತೆ ಕಳೆದ ಎಂಟು ನೂರು ವರ್ಷಗಳಿಂದ ನಿರ್ಬಂಧ ಹೇರಲಾಗಿತ್ತು.

      ಆದರೆ ಕಳೆದ ಸೆಪ್ಟೆಂಬರ್ 28 ರಂದು ಅಂದಿನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ಪಂಚ ಸದಸ್ಯ ಪೀಠ ಮಹಿಳೆಯರ ಪ್ರವೇಶಕ್ಕಿದ್ದ ನಿರ್ಬಂಧವನ್ನು ತೆರವುಗೊಳಿಸಿ ಐತಿಹಾಸಿಕ ತೀರ್ಪು ನೀಡಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+