ವಿಶೇಷ ಪೂಜೆಗಾಗಿ ಬಾಗಿಲು ತೆರೆದ ಶಬರಿಮಲೆ; ಭಕ್ತರಿಗೆ ಪ್ರವೇಶವಿಲ್ಲ

ತಿರುವನಂತಪುರಂ, ಆಗಸ್ಟ್ 17 : ಕೇರಳದ ಪ್ರಸಿದ್ಧ ಶಬರಿಮಲೆ ದೇವಾಲಯದ ಬಾಗಿಲನ್ನು ತಿಂಗಳ ವಿಶೇಷ ಪೂಜೆಗಾಗಿ ತೆರೆಯಲಾಗಿದೆ. ಐದು ದಿನಗಳ ಕಾಲ ಪೂಜೆ ನಡೆಯಲಿದ್ದು, ಕೋವಿಡ್ ಭೀತಿ ಹಿನ್ನಲೆಯಲ್ಲಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ.

ಮಲಯಾಳಂ ಪಂಚಾಂಗದ ಪ್ರಕಾರ ಮೊದಲ ತಿಂಗಳಾದ ಚಿಂಗಂನಲ್ಲಿ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ. ಐದು ದಿನಗಳ ಈ ವಿಶೇಷ ಪೂಜೆ ಸೋಮವಾರದಿಂದ ಆರಂಭವಾಗಿದೆ. ಅದಕ್ಕಾಗಿ ಭಾನುವಾರ ದೇವಾಲಯದ ಬಾಗಿಲು ತೆರೆಯಲಾಗಿದೆ.

ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲವು ತಿಂಗಳಿನಿಂದ ಪೂಜೆಗಳು ಸ್ಥಗಿತಗೊಂಡಿತ್ತು. ತಿಂಗಳ ಪೂಜೆಗೆ ಮಾತ್ರ ದೇವಾಲಯ ಬಾಗಿಲು ತೆರೆಯಲಾಗುತ್ತಿತ್ತು. ಆದರೆ, ಭಕ್ತಾದಿಗಳಿಗೆ ದೇವಾಲಯಕ್ಕೆ ಇದುವರೆಗೂ ಪ್ರವೇಶ ನೀಡಿಲ್ಲ.

Sabarimala Temple Reopens For 5 Day Monthly Puja, Devotees Barred Due To Coronavirus

ತಿರುವಾಂಕೂರು ದೇವಸ್ವಂ ಮಂಡಳಿ ಶುಕ್ರವಾರದ ತನಕ ದೇಗುಲ ತೆರೆದಿರಲಿದೆ. ಸಾಮಾನ್ಯ ಪೂಜೆಗಳು ನಡೆಯಲಿವೆ. ನಂತರ ಓಣಂ ಪೂಜೆಯ ಪ್ರಯುಕ್ತ ಆಗಸ್ಟ್ 21ರಿಂದ ಸೆಪ್ಟೆಂಬರ್ 2ರ ತನಕ ಪೂಜೆಗಳು ನಡೆಯಲಿವೆ. ಭಕ್ತರಿಗೆ ಮಾತ್ರ ಪ್ರವೇಶವಿಲ್ಲ ಎಂದು ಹೇಳಿದೆ.

ನವೆಂಬರ್‌ನಿಂದ 16ರಿಂದ ಎರಡು ತಿಂಗಳ ಕಾಲ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆಗಲೂ ದೇವಾಲಯಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ತರಬೇಕು ಎಂಬುದನ್ನು ಸೇರಿದಂತೆ ಹಲವು ಸೂಚನೆಗಳನ್ನು ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+